ಏನಿದು ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ? ಮೂರು ಧರ್ಮಗಳಿಗೂ ಜೆರುಸಲೆಮ್ ಏಕೆ ಮುಖ್ಯ?

1 min read
Saakshatv Lahari Israel Palestine conflict

ಏನಿದು ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ? ಮೂರು ಧರ್ಮಗಳಿಗೂ ಜೆರುಸಲೆಮ್ ಏಕೆ ಮುಖ್ಯ? Saakshatv Lahari Israel Palestine conflict

ಜೆರುಸಲೆಮ್ ಎಂಬ ಪವಿತ್ರ ನಗರ ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದಿಂದಾಗಿ ಇತ್ತೀಚೆಗೆ ಸುದ್ದಿಯಲ್ಲಿದೆ. ಈ ಪುಟ್ಟ ಪ್ರದೇಶಕ್ಕಾಗಿ ಯಹೂದಿಗಳು, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಎಂಬ ಮೂರು ಧರ್ಮಗಳು ಕಳೆದ ಎರಡು ಸಾವಿರ ವರ್ಷಗಳಿಂದ ಬಡಿದಾಡುತ್ತಲೇ ಬಂದಿದ್ದಾರೆ. ಜೆರುಸಲೆಮ್ ಹೇಗೆ ಅಸ್ತಿತ್ವಕ್ಕೆ ಬಂದಿತು. ಅಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಕಾರಣವೇನು ಮತ್ತು ಈ ಮೂರು ಧರ್ಮಗಳಿಗೆ ಈ ಪುಟ್ಟ ಪ್ರದೇಶ ಏಕೆ ಮುಖ್ಯವಾಗಿದೆ ಎಂಬ ಬಗ್ಗೆ ಇಲ್ಲಿದೆ ವರದಿ..

ಜೆರುಸಲೆಮ್ ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ. ಈ ಪವಿತ್ರ ನಗರಕ್ಕಾಗಿ ಪದೇ ಪದೇ ಭಾರಿ ಪ್ರಮಾಣದ ಯುದ್ಧಗಳಾಗಿವೆ. ಲೆಕ್ಕವಿಲ್ಲದಷ್ಟು ಘರ್ಷಣೆ ನಡೆದಿದೆ. ಲಕ್ಷಾಂತರ ಜನರು ಮೃತಪಟ್ಟಿದ್ದಾರೆ.

ಆರಂಭಿಕ ಇತಿಹಾಸ ತಜ್ಞರ ಪ್ರಕಾರ, ಜೆರುಸಲೇಮಿನ ಮತ್ತು ಆಸುಪಾಸಿನ ಗುಡ್ಡಗಾಡುಗಳಲ್ಲಿ ನೆಲಸಿದ್ದ ಈ ಯಹೂದಿ ಜನಾಂಗಕ್ಕೆ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವಿದೆ.
ಕ್ರಿ.ಪೂ1000 ಯಲ್ಲಿ, ರಾಜ ಡೇವಿಡ್ ಜೆರುಸಲೇಮನ್ನು ವಶಪಡಿಸಿಕೊಂಡನು ಮತ್ತು ಅದನ್ನು ಯಹೂದಿ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿದನೆಂದು ಹೇಳಲಾಗುತ್ತದೆ. ಮೊದಲ ಪವಿತ್ರ ದೇವಾಲಯವನ್ನು ರಾಜ ಡೇವಿಡ್ ಜೆರುಸಲೆಮ್ ಅನ್ನು ಆಕ್ರಮಿಸಿಕೊಂಡ 40 ವರ್ಷಗಳ ನಂತರ ಅವನ ಮಗ ಸೊಲೊಮೋನನು ನಿರ್ಮಿಸಿದನೆಂದು ಹೇಳಲಾಗುತ್ತದೆ ಮತ್ತು ಇದು ಪೂರ್ಣಗೊಳ್ಳಲು ಏಳು ವರ್ಷಗಳನ್ನು ತೆಗೆದುಕೊಂಡಿತು ಎಂದು ಇತಿಹಾಸ ಹೇಳುತ್ತದೆ.
ಈ ದೇವಾಲಯವನ್ನು 4 ಶತಮಾನಗಳಿಂದ ಬಳಸಲಾಗುತ್ತಿತ್ತು. ಕ್ರಿ.ಪೂ 586 ರಲ್ಲಿ ಬ್ಯಾಬಿಲೋನಿಯನ್ನರು ಈ ದೇವಾಲಯವನ್ನು ಆಕ್ರಮಿಸಿಕೊಂಡು ಬಳಿಕ ಆ ದೇವಾಲಯವನ್ನು ನಾಶಪಡಿಸಿದರು ಮತ್ತು ಯಹೂದಿಗಳನ್ನು ಗಡಿಪಾರು ಮಾಡಿದರು.
Saakshatv Lahari Israel Palestine conflict
Saakshatv Lahari Israel Palestine conflict
ಸುಮಾರು 50 ವರ್ಷಗಳ ನಂತರ, ಪರ್ಷಿಯನ್ ರಾಜ ಸೈರಸ್ ಯಹೂದಿಗಳಿಗೆ ಜೆರುಸಲೇಮಿಗೆ ಮರಳಲು ಮತ್ತು ಅವರ ದೇವಾಲಯವನ್ನು ಪುನರ್ನಿರ್ಮಿಸಲು ಅವಕಾಶ ಮಾಡಿಕೊಟ್ಟನು.
ಕ್ರಿ.ಪೂ 332 ರಲ್ಲಿ ಗ್ರೇಟ್ ಅಲೆಕ್ಸಾಂಡರ್ ಜೆರುಸಲೆಮ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ, ಮುಂದಿನ 100 ವರ್ಷಗಳಲ್ಲಿ ಇದನ್ನು ರೋಮನ್ನರು, ಪರ್ಷಿಯನ್ನರು, ಅರಬ್ಬರು, ಕ್ರುಸೇಡರ್ಗಳು, ಈಜಿಪ್ಟಿನವರು, ಮಾಮ್ಲುಕ್ಸ್ ಮತ್ತು ಇಸ್ಲಾಮಿಸ್ಟ್‌ಗಳು ಆಕ್ರಮಿಸಿಕೊಂಡರು.

ಒಂದನೇ ವಿಶ್ವಯುದ್ಧದ ಸಮಯದಲ್ಲಿ ಅರಬ್ ಪ್ರಾಂತ್ಯದ ಕೆಲವು ಪ್ರದೇಶಗಳನ್ನು ಗ್ರೇಟ್ ಬ್ರಿಟನ್ ಗೆದ್ದುಕೊಂಡುಬಿಟ್ಟಿತ್ತು. 1948 ರಲ್ಲಿ ಇಸ್ರೇಲ್ ಸ್ವತಂತ್ರ ರಾಜ್ಯವಾಗುವವರೆಗೆ ಜೆರುಸಲೆಮ್ ಮತ್ತು ಸುತ್ತಮುತ್ತಲಿನ ಪ್ರದೇಶ ಬ್ರಿಟಿಷ್ ರ ನಿಯಂತ್ರಣದಲ್ಲಿತ್ತು.

ಮೂರು ಧರ್ಮಗಳಿಗೆ ಜೆರುಸಲೆಮ್ ಏಕೆ ಮುಖ್ಯವಾಗಿದೆ:

ಜೆರುಸಲೇಮಿನ ಟೆಂಪಲ್ ಮೌಂಟ್ ಗುಡ್ಡದಲ್ಲಿ ಯಹೂದಿಗಳ ಪ್ರಸಿದ್ಧ ಅರಸನಾದ ಕಿಂಗ್ ಸೋಲೋಮನ್ ನಿರ್ಮಿಸಿದ ಭವ್ಯ ದೇವಾಲಯವಿದೆ. ಇದು ವೆಸ್ಟರ್ನ್ ವಾಲ್, ಡೋಮ್ ಆಫ್ ದಿ ರಾಕ್ ಮತ್ತು ಅಲ್-ಅಕ್ಸಾ ಮಸೀದಿ ಎಂಬ ಮೂರು ಧಾರ್ಮಿಕ ಸ್ಥಳಗಳನ್ನು ಒಳಗೊಂಡಿರುವ 35 ಎಕರೆ ಅಳತೆಯ ಭೂಮಿಯಾಗಿದೆ.

ಟೆಂಪಲ್ ಮೌಂಟ್ ಜುದಾಯಿಸಂನಲ್ಲಿ ಪವಿತ್ರ ಸ್ಥಳವೆಂದು ಹೇಳಲಾಗುತ್ತದೆ. ಇದು ಅಬ್ರಹಾಮನ ಮಗ ಐಸಾಕನ ತ್ಯಾಗದ ಸ್ಥಳವೆಂದು ಯಹೂದಿಗಳು ಉಲ್ಲೇಖಿಸುವ ಪ್ರದೇಶವಾಗಿದೆ . ಯಹೂದಿ ದಂತಕಥೆಯ ಪ್ರಕಾರ, ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಪ್ರವಾದಿ ಅಬ್ರಹಮ್ ನಿಂದ ಯಹೂದಿ ಮತದ ಸ್ಥಾಪನೆಯಾಯಿತು. ಅಬ್ರಹಮನಿಗೆ ಇಸ್ಮಾಯಿಲ್ ಮತ್ತು ಇಸಾಕ್ ಎಂಬ ಎರಡು ಮಕ್ಕಳಿದ್ದರು. ಇಸಾಕ್ ಅಬ್ರಹಮನ ಪ್ರೀತಿಯ ಮಗ. ಒಂದು ದಿನ ದೇವರು ಅಬ್ರಹಮನಿಗೆ ಕನಸಿನಲ್ಲಿ ಕಾಣಿಸಿಕೊಂಡು ಇಸಾಕನನ್ನು ತನಗೆ ಬಲಿ ಕೊಡಬೇಕು ಎಂದು ಕೇಳಿದ. ಅಬ್ರಹಾಮನು ತನ್ನ ಧರ್ಮ ಮತ್ತು ನಂಬಿಕೆಯನ್ನು ಸಾಬೀತುಪಡಿಸಲು ದೇವರ ಬೇಡಿಕೆಯ ಮೇರೆಗೆ ತನ್ನ ಮಗ ಐಸಾಕನನ್ನು ಬಲಿ ಕೊಡಲು ಜೆರೂಸಲೇಮಿನ ಗುಡ್ಡಕ್ಕೆ ಕರೆದುಕೊಂಡು ಹೋಗುತ್ತಾನೆ. ಆದರೆ ಅಬ್ರಹಮನ ತ್ಯಾಗವನ್ನು ಕಂಡ ದೇವರು ಇಸಾಕನ ಬದಲಿಗೆ ಮೇಕೆಯನ್ನು ಬಲಿ ಪಡೆದು ಅಬ್ರಾಹಂ ನ ಮಗನಿಗೆ ಜೀವದಾನ ನೀಡಿದ.

ಈ ತಾಣವು ಮೊದಲ ಮತ್ತು ಎರಡನೆಯ ದೇವಾಲಯಗಳನ್ನು ಹೊಂದಿರುವ ಸ್ಥಳವಾಗಿದ್ದು, ಇಲ್ಲಿ ಅನೇಕ ಯಹೂದಿ ಪ್ರವಾದಿಗಳು ಬೋಧನೆ ನೀಡಿದ್ದಾರೆ, ಡೋಮ್ ಆಫ್ ದಿ ರಾಕ್ ಪವಿತ್ರ ಸ್ಥಳವಾಗಿದೆ ಎಂದು ಯಹೂದಿಗಳು ನಂಬಿದ್ದಾರೆ.
ಇದೇ ಗುಡ್ಡದ ಮಣ್ಣಿನಿಂದ ದೇವರು ಪ್ರಪಂಚದ ಮೊತ್ತಮೊದಲ ಮಾನವ ಆದಂನನ್ನು ಸೃಷ್ಟಿ ಮಾಡಿದ ಎನ್ನುವ ನಂಬಿಕೆ ಯಹೂದಿಗಳಲ್ಲಿ ಇದೆ.

ಮುಸ್ಲಿಮರು:

ಟೆಂಪಲ್ ಮೌಂಟ್ ಅನ್ನು ಇಸ್ಲಾಮಿನ ಮೂರನೇ ಪವಿತ್ರ ತಾಣವೆಂದು ಪರಿಗಣಿಸಲಾಗಿದೆ. ಮೊದಲ ಎರಡು ಪವಿತ್ರ ತಾಣ ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾ ವಾಗಿದೆ. ಇದಕ್ಕೆ ಮುಸ್ಲಿಮರು ಪ್ರವಾದಿ ಮುಹಮ್ಮದ್ ಸ್ವರ್ಗಕ್ಕೆ ಏರಿದ್ದಾರೆಂದು ನಂಬುವ ಸ್ಥಳ ಇಲ್ಲಿರುವುದು ಕಾರಣ.
Saakshatv Lahari Israel Palestine conflict
ಕುರಾನಿನ ಪ್ರಕಾರ ಪ್ರವಾದಿ ಮುಹಮ್ಮದ್ ಕ್ರಿಸ್ತ ಶಕ 621 ರಲ್ಲಿ ಹಾರುವ ಕುದುರೆಯ ಮೇಲೆ ಕುಳಿತು ಮೆಕ್ಕಾದಿಂದ ಜೆರುಸಲೇಮಿಗೆ ಬಂದರಂತೆ. ನಂತರ ಅಲ್ಲಿಂದ ಅವರು ಅದೇ ಹಾರುವ ಕುದುರೆಯ ಮೇಲೆ ಕುಳಿತು ಸ್ವರ್ಗಕ್ಕೆ ಜಿಗಿದು ದೇವರ ಜೊತೆ ಒಂದಷ್ಟು ಮಾತುಕತೆ ಮಾಡಿ ಮತ್ತೆ ಜೆರೂಸಲೇಮಿನಲ್ಲಿ ಇಳಿದರು ಎಂದು ಹೇಳಲಾಗಿದೆ.
ಪೈಗಂಬರ್ ಅವರ ಕುದುರೆ ಆಕಾಶಕ್ಕೆ ಹಾರಿದ ಜಾಗದಲ್ಲಿ ನಿರ್ಮಿಸಿದ ಮಸೀದಿಯೆ ಜೆರುಸಲೆಮ್ ನಲ್ಲಿರುವ ಡೊಮ್ ಆಫ್ ರಾಕ್. ಇದು ಅಲ್-ಅಕ್ಸಾ ಮಸೀದಿ ಮತ್ತು ಹರಾಮ್ ಅಲ್- ಎಂಬ ಧಾರ್ಮಿಕ ಸ್ಥಳವಾಗಿದೆ. ಜೆರುಸಲೆಮ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರು ವಾಸವಾಗಿದ್ದಾರೆ.

ಕ್ರಿಶ್ಚಿಯನ್ನರು:

ಕ್ರಿಶ್ಚಿಯನ್ನರು ಜೆರುಸಲೆಮ್ ಅನ್ನು ದೇವರ ಮಗ ಯೇಸು ಪುನರುತ್ಥಾನಗೊಂಡ ತಾಣವೆಂದು ನಂಬಿದ್ದಾರೆ.
ಇಲ್ಲಿರುವ ಪವಿತ್ರ ಸೆಪಲ್ಚರ್ ಚರ್ಚ್ ಅನ್ನು ಕ್ರಿ.ಶ 335 ರಲ್ಲಿ ನಿರ್ಮಿಸಲಾಯಿತು. ಇದು ಕ್ರಿಶ್ಚಿಯನ್ನರು ಯೇಸುವನ್ನು ಶಿಲುಬೆಗೇರಿಸಲಾಯಿತು ಮತ್ತು ನಂತರ ಪುನರುತ್ಥಾನಗೊಂಡರು ಎಂದು ನಂಬಿರುವ ತಾಣವಾಗಿದೆ.
ಯೇಸುಕ್ರಿಸ್ತರು ಯಹೂದಿ ಚಿಂತನೆಗಳನ್ನು ದಿಕ್ಕರಿಸಿ ನಾನೇ ದೇವರ ಮಗ ಎಂದು ಮತಪ್ರಚಾರ ಆರಂಭಿಸಿದರು. ಇದರಿಂದಾಗಿ ಕೋಪಗೊಂಡ ಯಹೂದಿಗಳು ಯೇಸು ಕ್ರಿಸ್ತರನ್ನು ಜೆರುಸಲೆಮ್ ನ ಬೆಟ್ಟದ ಮೇಲೆ ಶಿಲುಬೆಗೇರಿಸಿದರು. ಆ ಮೂಲಕ ಯಹೂದಿಗಳಲ್ಲಿ ಕ್ರಿಶ್ಚಿಯನಿಟಿ ಎಂಬ ಪ್ರಬಲ ಶತ್ರು ಪಂಗಡ ಹುಟ್ಟಿಕೊಂಡಿತು. Saakshatv Lahari Israel Palestine conflict
Saakshatv Lahari Israel Palestine conflict

ಎರಡನೇ ವಿಶ್ವ ಯುದ್ಧದಲ್ಲಿ ಟರ್ಕಿಯನ್ನು ಬಗ್ಗುಬಡಿದ ಬ್ರಿಟಿಷರು ಅವರ ವಶದಲ್ಲಿದ್ದ ಪ್ಯಾಲಸ್ಟೇನನ್ನು ಬಿಟ್ಟು ಹೊರಡುವ ಮೊದಲು ಅದನ್ನು ವಿಭಜಿಸಿ ಕೆಲವು ಭಾಗ ಯಹೂದಿಗಳಿಗೆ, ಕೆಲವು ಭಾಗ ಪ್ಯಾಲೆಸ್ಟೀನ್ ಅರಬರಿಗೆ ಮತ್ತು ಜೆರುಸಲೇಮನ್ ಅನ್ನು ಯಹೂದಿ, ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಈ ಮೂರು ಧರ್ಮಕ್ಕೆ ವಿಶ್ವಸಂಸ್ಥೆಯ ಆಡಳಿತಕ್ಕೆ ಒಳಪಡಿಸುವ ಒಡಂಬಡಿಕೆಯನ್ನು ಜಾರಿಗೆ ತರಲಾಯಿತು. ಹೀಗೆ ಯಹೂದಿಗಳಿಗೆಂದು ನಾಲ್ಕು ದಿಕ್ಕಿನಲ್ಲೂ ಮುಸಲ್ಮಾನ ದೇಶಗಳಿಂದ ಸುತ್ತುವರಿದಿರುವ ಪುಟ್ಟದಾದ ದೇಶ ಇಸ್ರೇಲ್ ಸೃಷ್ಟಿಯಾಯಿತು.‌

ಇದರಿಂದ ಯಹೂದಿಗಳು ಸಂಭ್ರಮಿಸಿದರೆ, ಈ ಅನಿರೀಕ್ಷಿತ ಬೆಳವಣಿಗೆಯಿಂದ ಅರಬರು ಸಿಟ್ಟಿಗೆದ್ದರು. 14 ಮೇ 1948 ರಂದು ಇಸ್ರೇಲಿನ ಉಗಮವಾದರೆ 15 ಮೇ 1948 ರಂದು ಅರಬ್ ಮತ್ತು ಯಹೂದಿಗಳ ನಡುವೆ ಯುದ್ಧ ಪ್ರಾರಂಭವಾಯಿತು.
ಒಂದು ದಿನದ ಮೊದಲು ಜನ್ಮ ತಾಳಿದ ಇಸ್ರೇಲ್ ಮೇಲೆ ಲೆಬನಾನ್, ಸಿರಿಯಾ, ಟ್ರಾನ್ಸ್ ಜೋರ್ಡಾನ್, ಇರಾಕ್, ಸೌದಿ ಮತ್ತು ಈಜಿಪ್ಟ್ ದೇಶಗಳು ಮುಗಿಬಿದ್ದವು. ಆಗಷ್ಟೇ ಜನ್ಮತಾಳಿದ ಇಸ್ರೇಲಿನಲ್ಲಿ ಇದ್ದದ್ದು ಕೇವಲ 25000 ಸೈನಿಕರು. ಆದರೆ ಇಸ್ರೇಲನ್ನು ಉಳಿಸಿಕೊಳ್ಳಲೇ ಬೇಕು ಎಂದು ಅವರು ಹೋರಾಡಿದ ಪರಿಗೆ ಜಗತ್ತೇ ದಂಗಾಗಿ ಹೋಯಿತು.
ಪ್ಯಾಲೆಸ್ಟೈನ್ ಅರಬ್ ದೇಶಗಳ ಬೆಂಬಲದೊಂದಿಗೆ 1967ರಲ್ಲಿ ಜೆರುಸಲೇಮನ್ನು ವಶಪಡಿಸಲು ಮುನ್ನುಗ್ಗಿತು. ಆದರೆ ಈ ಬಗ್ಗೆ ಮೊದಲೇ ಮಾಹಿತಿ ಹೊಂದಿದ್ದ ಇಸ್ರೇಲ್ ಜಾಗತಿಕ ಇತಿಹಾಸದಲ್ಲೇ ಅತ್ಯಂತ ವ್ಯೂಹಾತ್ಮಕ ಯುದ್ಧ ಎಂದೇ ಕರೆಯಲಾಗುವ ಆರು ದಿನದ ಸಮರಕ್ಕೆ ಮುನ್ನುಡಿ ಬರೆಯಿತು. ಜೊತೆಗೆ ಜೆರುಸಲೇಮ್ ಅನ್ನು ವಶಪಡಿಸಿ ಕೊಂಡು ಬಿಟ್ಟಿತು. ಆದರೆ ಜೆರುಸಲೇಮನ್ನು ಗೆದ್ದ ಮೇಲೂ ಉದಾರತೆ ತೋರಿದ ಇಸ್ರೇಲ್ ಮುಸಲ್ಮಾನ ರಾಷ್ಟ್ರಗಳ ಜೊತೆ ಒಂದು ಸೌಹಾರ್ದಯುತವಾದ ಒಪ್ಪಂದವನ್ನು ಮಾಡಿಕೊಂಡಿತು.
Saakshatv Lahari Israel Palestine conflict
ಟೆಂಪಲ್ ಮೌಂಟ್ ಜವಾಬ್ದಾರಿಯನ್ನು ಜೋರ್ಡನ್ ಮುಸ್ಲಿಮರ ವಶಕ್ಕೆ ನೀಡುವುದು ಮತ್ತು ಯಹೂದಿಗಳಿಗೆ ಕೂಡ ಅಲ್ಲಿಗೆ ಭೇಟಿ ನೀಡಲು ಅವಕಾಶ ನೀಡುವುದು ಈ ಒಪ್ಪಂದದ ಪ್ರಮುಖ ಅಂಶವಾಗಿತ್ತು.
ಆದರೆ ಅಲ್ ಅಕ್ಸಾ ಮಸೀದಿ ಆವರಣಕ್ಕೆ ಮುಸಲ್ಮಾನೇತರರು ಕಾಲಿಡುವುದನ್ನು ಕಟ್ಟರ್ ಮುಸಲ್ಮಾನರು ವಿರೋಧಿಸಿದರೆ, ಜೆರುಸಲೇಮ್ ಅನ್ನು ಗೆದ್ದ ಮೇಲೂ ಕೇವಲ ಪ್ರವಾಸಿಗರಾಗಿ ಟೆಂಪಲ್ ಮೌಂಟ್ ಗೆ ಹೋಗಿ ಬರುವುದಕ್ಕೆ ಯಹೂದಿ ಕಟ್ಟರ್ ವಾದಿಗಳು ವಿರೋಧ ವ್ಯಕ್ತಪಡಿಸಿದರು.

2000 ರಲ್ಲಿ, ಯಹೂದಿ ಹಕ್ಕುಗಳನ್ನು ಪ್ರತಿಪಾದಿಸಲು ಜೆರುಸಲೇಂಗೆ ತೆರಳಿದ ಇಸ್ರೇಲಿ ರಾಜಕಾರಣಿ ಏರಿಯಲ್ ಶರೋನ್ ಮತ್ತು ಅಂದಿನ ಇಸ್ರೇಲ್‌ನ ವಿರೋಧ ಪಕ್ಷದ ನಾಯಕ ಇಸ್ರೇಲಿ-ಪ್ಯಾಲೆಸ್ಟೀನಿಯನ್ನರ ನಡುವೆ ಹಿಂಸಾಚಾರ ಹೆಚ್ಚಾಗುವಂತೆ ಮಾಡಿದ್ದರು. ಇದು ಎರಡನೇ ಇಂಟಿಫಾಡಾ ಎಂದು ಕರೆಯಲಾದ ಪ್ಯಾಲೆಸ್ಟೀನಿಯನ್ ದಂಗೆಗೆ ಕಾರಣವಾಯಿತು.

2005 ರಲ್ಲಿ ನಡೆದ ಲೆಬನಾನ್ ದಾಳಿಯ ಮರುವರ್ಷ
ಇಸ್ರೇಲ್ ತನ್ನನ್ನು ರಕ್ಷಿಸಿಕೊಳ್ಳಲು ಹೊಸ ವಾಯು ರಕ್ಷಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಘೋಷಿಸಿಬಿಟ್ಟಿತ್ತು.

2011 ರಲ್ಲಿ ಇಸ್ರೇಲ್ ನ್ನು ಗುರಿಯಾಗಿರಿಸಿಕೊಂಡು ಬರುವ ಯಾವುದೇ ರಾಕೆಟ್ ಅಥವಾ ಕ್ಷಿಪಣಿಗಳನ್ನು ಪತ್ತೆಹಚ್ಚಿ ಅವುಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿರುವ ಐರನ್ ಡೋಮ್‌ನ್ನು ನಿರ್ಮಿಸಲಾಯಿತು.

2017 ರಲ್ಲಿ, ಇಬ್ಬರು ಇಸ್ರೇಲಿ ಡ್ರೂಜ್ ಪೊಲೀಸ್ ಅಧಿಕಾರಿಗಳನ್ನು ಮೂವರು ಅರಬ್-ಇಸ್ರೇಲಿ ನಾಗರಿಕರು ಗುಂಡು ಹಾರಿಸಿ ಕೊಂದ ಬಳಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ನಂತರ ಇಸ್ರೇಲಿ ಅಧಿಕಾರಿಗಳಿಗೆ ಅಲ್ಲಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜೊತೆಗೆ ಇದು ಮೆಟಲ್ ಡಿಟೆಕ್ಟರ್‌ಗಳು ಹಾಗೂ ಕ್ಯಾಮೆರಾಗಳನ್ನು ಸ್ಥಾಪಿಸಲು ಕಾರಣವಾಯಿತು. ಭದ್ರತಾ ಕ್ರಮಗಳಿಂದ ಆಕ್ರೋಶಗೊಂಡ ಆರಬ್ ಜೋರ್ಡಾನ್‌ನೊಂದಿಗೆ ಹೆಚ್ಚು ಹಿಂಸಾಚಾರ ಮತ್ತು ಉದ್ವಿಗ್ನತೆಗೆ ಕಾರಣವಾಯಿತು.
Saakshatv Lahari Israel Palestine conflict

ಅಂದಿನಿಂದ ಇಂದಿನವರೆಗೂ ಜೆರುಸಲೆಮ್ ನಗರ ಮೂರು ಧರ್ಮಗಳಿಂದಾಗಿ ಸಂಘರ್ಷವನ್ನು ಎದುರಿಸುತ್ತಿದೆ. ಇಂದು ನಡೆಯುತ್ತಿರುವ ಸಂಘರ್ಷಕ್ಕೆ ‌1967 ರ ಅರಬ್-ಇಸ್ರೇಲ್ ಯುದ್ಧದಲ್ಲಿ ಇಸ್ರೇಲಿ ಪಡೆಗಳ ವಿಜಯದ ದಿನ ಆಚರಣೆ ಸಲುವಾಗಿ ಆಯೋಜಿಸಿದ ಮೆರವಣಿಗೆ ಕಾರಣ ಎಂದು ಹೇಳಲಾಗಿದೆ. ಯಹೂದಿಗಳು ಜೆರುಸಲೇಂನ ಓಲ್ಡ್ ಸಿಟಿಯಲ್ಲಿ ಮೆರವಣಿಗೆಗೆ ಸಿದ್ಧತೆ ನಡೆಸಿದ್ದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಹಿಂಸಾಚಾರ ನಿಯಂತ್ರಿಸಲು ಇಸ್ರೇಲಿ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ಇದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ಕಾರಣ ಎಂದು ಹೇಳಲಾಗಿದೆ.
ದಿಢೀರ್ ಭುಗಿಲೆದ್ದಿರುವ ಹಿಂಸಾಚಾರ, ಪ್ರತಿಭಟನೆಗಳಿಂದ ಜೆರುಸಲೇಂ ಅಕ್ಷರಶಃ ನರಕವಾಗಿದ್ದು, ಈಗ ನಡೆಯುತ್ತಿರುವ ಸಂಘರ್ಷ ಯಾವ ಮಟ್ಟಿಗೆ ತಲುಪಬಹುದು ಎಂದು ಯಾರೂ ಊಹಿಸುವುದು ಅಸಾಧ್ಯವಾಗಿದೆ.
ಇಸ್ರೇಲ್ ರಾಷ್ಟ್ರವು ಗಾಜಾ ಪಟ್ಟಿಗೆ ಭಾರಿ ಪ್ರಮಾಣದ ಸೇನೆ, ಶಸ್ತ್ರಾಸ್ತ್ರ ರವಾನಿಸಿದ್ದರೆ, ಹಮಾಸ್ ಉಗ್ರರು ಇಸ್ರೇಲ್‌ ಮೇಲೆ ರಾಕೆಟ್ ದಾಳಿ ನಡೆಸುತ್ತಿದ್ದಾರೆ. ಇಸ್ರೇಲ್ ಕೂಡ ಪ್ಯಾಲೆಸ್ತೇನ್ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ಸದ್ಯದ ಪರಿಸ್ಥಿತಿಯನ್ನು ನೋಡುವಾಗ ಮೂರನೇ ಮಹಾಯುದ್ಧದ ಭೀತಿ‌ ಎದ್ದು ಕಾಣುತ್ತಿದೆ.

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ‌ ಸಂಘರ್ಷ – ಇಸ್ರೇಲ್ ರಕ್ಷಕ ‘ ಐರನ್ ಡೋಮ್’
wearing masks

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd