ADVERTISEMENT
Tuesday, March 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

‘ಪರ್ವತ ಮೇಕೆ ಎಂಬ ಸಸ್ತನಿಗಳ ಲೋಕದ ರ್ಯಾಂಬೊಗಳ ಕೌತುಕದ ಸಂಗತಿ ನಿಮಗೆಷ್ಟು ಗೊತ್ತು?

admin by admin
January 30, 2021
in Newsbeat, Saaksha Special, ಎಸ್ ಸ್ಪೆಷಲ್
Saakshatv vishwa vismaya episode6
Share on FacebookShare on TwitterShare on WhatsappShare on Telegram

‘ಪರ್ವತ ಮೇಕೆ ಎಂಬ ಸಸ್ತನಿಗಳ ಲೋಕದ ರ್ಯಾಂಬೊಗಳ ಕೌತುಕದ ಸಂಗತಿ ನಿಮಗೆಷ್ಟು ಗೊತ್ತು? Saakshatv vishwa vismaya episode6

ಪ್ರಕೃತಿಯ ಹಲವು ವೈಚಿತ್ರ್ಯಗಳಲ್ಲಿ ‘Mountain goats’ ಅಥವಾ ‘ಪರ್ವತ ಮೇಕೆ’ಯೂ ಸಹ ಒಂದು. ಇವು ಹೆಚ್ಚಾಗಿ ಉತ್ತರ ಅಮೇರಿಕದ ಆಲ್ಪೈನ್ ಹಾಗೂ ಉಪ ಆಲ್ಪೈನ್ ಪ್ರದೇಶಗಳಲ್ಲಿ ಕಂಡು ಬರುತ್ತವೆ. ವಿಶೇಷವಾಗಿ ಅಲ್ಲಿನ ಕೆನೆಡಾದ ಗುಡ್ಡಗಾಡುಗಳು, ಆಲ್ಬಾರ್ಟಾದ ತಪ್ಪಲು ಹಾಗೂ ಬ್ರಿಟೀಷ್ ಕೊಲಂಬಿಯಾದ ಸರಹದ್ದಿಗೆ ಬರುವ ಗುಡ್ಡಗಾಡುಗಳ ಮೇಲೆ ಇವುಗಳನ್ನ ಹೇರಳವಾಗಿ ನಾವು ಕಾಣಬಹುದು.

Related posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

March 30, 2026
ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

March 30, 2026

ಉತ್ತರ ಅಮೇರಿಕಾ ಬಿಟ್ಟರೆ ಇವುಗಳನ್ನ ಹಿಮಾಲಯದ ಕೆಲ ತಪ್ಪಲುಗಳಲ್ಲಿ ಮಾತ್ರವೆ ಕಾಣಲು ಸಾಧ್ಯ. ಈ ಪರ್ವತ ಮೇಕೆಗಳು ನೋಡಲು ನಮ್ಮ ಮೇಕೆಗಳಂತೆಯೇ ಆದರೂ ರೂಪು ರಚನೆ ಹಾಗೂ ಗುಣ ಸ್ವಭಾವದಲ್ಲಿ ತುಸು ಭಿನ್ನ. ಇವು ‘ಬೋವಿಡೆ’ ಎಂಬ ಸಸ್ತನಿ ವರ್ಗ ಅಥವಾ ಕುಟುಂಬಕ್ಕೆ ಸೇರುತ್ತವೆ. ಜಗತ್ತಿನ ಎಲ್ಲಾ ಭಾಗದ ಮೇಕೆಗಳೂ ಸಹ ಇದೇ ಕುಟುಂಬದಿಂದಲೆ ಕುಡಿಯೊಡೆದಿವೆ ಎನ್ನಲಾಗಿದೆ. ಅಲ್ಲದೆ ಆಫ್ರಿಕನ್ ಕೋಣಗಳು, ಆಫ್ರಿಕನ್ ಆಂಟಿಲೋಪ್ (ಸಾರಂಗ) , ಹಿಮ ಮೇಕೆ, ಹಿಮ ಸಾರಂಗ ಇತ್ಯಾದಿ ಸಸ್ತನಿಗಳ ವರ್ಗವು ಇದೇ ಕುಟುಂಬಕ್ಕೆ ಸೇರುತ್ತವೆ.

ಉತ್ತರ ಅಮೇರಿಕದ ಈ ಪರ್ವತ ಮೇಕೆಗಳು ಸುಮಾರು ಎಂಟು ಮಿಲಿಯನ್ ಅಂದರೆ ಎಂಭತ್ತು ಲಕ್ಷ ವರ್ಷಗಳ ಹಿಂದೆಯೇ ವಿಕಾಸಗೊಂಡಿವೆ ಎಂದು ಸಾಬೀತಾಗಿದೆ! ಆಫ್ರಿಕಾದ ಒಂದು ಮೇಕೆ ಪಂಗಡದಿಂದಲೇ ಇವತ್ತಿನ ವಿಶ್ವದ ಎಲ್ಲಾ ಜಾತಿಯ ಮೇಕೆಗಳೂ ಜನಿಸಿವೆ ಎನ್ನುತ್ತಾರೆ. ವೈಲ್ಡ್ ಮೇಕೆಗಳು ಹಾಗೂ ಸಾಧು ಮೇಕೆಗಳು ಕ್ಯಾಪ್ರಿನೀ ಎಂಬ ಒಂದೆ ಉಪ ಪಂಗಡದಿಂದ ಕವಲೊಡೆದಿವೆಯಾದರೂ. ಐಬೆಕ್ಸ್ , ಒಕಾಪಿ ಹಾಗೂ ಇತರೆ ಜಾತಿಯ ಕಡವೆಗಳೆ ಬೇರೆ, ಇವೇ ಬೇರೆ.

ಗೊರಸು ಕಾಲಿನ, ಚೂಪು ಕೊಂಬಿನ (ಇದೇ ಕುಟುಂಬದ ಇತರೆ ಸಾರಂಗಗಳಿಗೆ ಸುರುಳಿಯಾಕಾರದ ಕೊಂಬೂ ಇವೆ), ಜೂಲು ಕೂದಲಿನ, ಒರಟು ಸ್ವಭಾವದ ಸಸ್ತನಿ ವರ್ಗವೇ ಈ ಪರ್ವತ ಮೇಕೆಗಳು. 1970 ರಲ್ಲಿ ಅಲ್ಲಿನ ಬರ್ಲಿಂಗ್‌ಟನ್ ನಾರ್ತರ್ನ್ ವಿಭಾಗದ ಜತೆ ಮರ್ಜ್ ಆಗುವ ತನಕ ಗ್ರೇಟ್ ನಾರ್ತರ್ನ್ ರೈಲ್ವೆ ಇಲಾಖೆಯು ಈ ಪರ್ವತ ಮೇಕೆಗಳ ಚಿತ್ರವನ್ನೇ ತನ್ನ ಲಾಂಛನವನ್ನಾಗಿ ಮಾಡಿಕೊಂಡಿತ್ತು.

Saakshatv vishwa vismaya episode6

ಇವುಗಳ ದೈಹಿಕ ಗುಣಲಕ್ಷಣಗಳನ್ನ ನೋಡುವುದಾದರೆ ಉತ್ತರ ಅಮೇರಿಕದ ಪರ್ವತ ಮೇಕೆಗಳಲ್ಲಿ ಗಂಡು ಹಾಗೂ ಹೆಣ್ಣು ಎರಡಕ್ಕು ಬಹಳ ಸಾಮ್ಯತೆ ಇದೆ. ಉದಾಹರಣೆಗೆ ಎರಡಕ್ಕು ಕೊಂಬುಗಳಿವೆ ಹಾಗೂ ಗಡ್ಡ ಇದೆ. ಪ್ರತಿ ವರ್ಷ ಒಂದು ರಿಂಗ್ ನಷ್ಟು ಅವುಗಳ ಕೊಂಬು ಬೆಳೆಯುತ್ತೆ. ಇವು ಕೆಳಗಿನಿಂದ ಮೇಲಿನವರೆಗೆ ಸುಮಾರು ಒಂದು ಮೀಟರ್ ಗು ಹೆಚ್ಚು ಉದ್ದ ನಿಲ್ಲುತ್ತವೆ. ತೂಕದಲ್ಲು 50 ರಿಂದ 145 ಕೇಜಿಗಳವರೆಗೂ ತೂಗುತ್ತವೆ.

ಸಾಮಾನ್ಯವಾಗಿ ಗಂಡು ಹೋತ ಹೆಣ್ಣಿಗಿಂತ ಬಲಿಷ್ಠವೂ ದೊಡ್ಡದೂ ತೂಕದ್ದೂ ಆಗಿರುತ್ತದೆ. ಇವುಗಳ ಬಿಳಿ ಉಣ್ಣೆಯ ಹೊದಿಕೆ ಥಿಕ್ ಆಗಿದ್ದು ಇವುಗಳ ಮೈ ಚರ್ಮದ ಉಷ್ಣತೆಯನ್ನ ಸಮತಟ್ಟಾಗಿಡುವಲ್ಲಿ ಸಹಕರಿಸುತ್ತದೆ. ಕೆಲವೊಮ್ಮೆ ಅಕ್ಟೋಬರ್ ನ ಚಳಿಗಾಲದ ಶೀತದಿಂದಾಗಿ ಉಷ್ಣತೆ ಮೈನಸ್ 45 ಡಿಗ್ರಿವರೆಗೆ ಕುಸಿದಾಗ ಆ ಛಳಿಯನ್ನೂ ಸಹ ಈ ಹೋತಗಳ ವುಲ್ಲನ್ ಹೊದಿಕೆ ತಡೆದು ಇವುಗಳನ್ನ ಶೀತಲ ಗಾಳಿಯಿಂದ ರಕ್ಷಿಸುತ್ತದೆ.

ಈ ಜಾತಿಯ ಗಂಡುಗಳನ್ನ ಬಿಲ್ಲಿಗಳೆಂದೂ ಹೆಣ್ಣುಗಳನ್ನ ನ್ಯಾನೀಗಳೆಂದೂ ಕರೆಯುತ್ತಾರೆ. ನ್ಯಾನಿಗಳಿಗಾಗಿ ಇಲ್ಲಿಯೂ ಸಹ ಗಂಡುಗಳಲ್ಲಿ ಸ್ಪರ್ಧೆ ಹಾಗೂ ಪೈಪೋಟಿ ಇದ್ದೇ ಇರುತ್ತದೆ. ಒಂದು ಸುಂದರ ಅಥವಾ ಆಕರ್ಷಕ ನ್ಯಾನಿಗಾಗಿ ಎರಡು ಅಥವಾ ಅದಕ್ಕಿಂತ ಅಧಿಕ ಸಂಖ್ಯೆಯ ಬಲಿಷ್ಠ ಬಿಲ್ಲಿಗಳು ಕಣಕ್ಕಿಳಿದು ಘರ್ಷಣೆಯಲ್ಲಿ ತೊಡಗುತ್ತವೆ‌. ಹಲವು ವೇಳೆ ಈ ಘರ್ಷಣೆ ಉಗ್ರ ರೂಪ ಪಡೆದು ದುರ್ಬಲ ಬಿಲ್ಲಿಗಳ ಸಾವಿಗೂ ಕಾರಣವಾಗುತ್ತದೆ.

ಈ ಪರ್ವತ ಮೇಕೆಗಳ ಪ್ರಮುಖವಾದ ವಿಶಿಷ್ಟ ಗುಣಲಕ್ಷಣವೆಂದರೆ ಇವು ಉ ಅಮೇರಿಕದ ಕಡಿದಾದ ಗುಡ್ಡ ಹಾಗೂ ಕೊರಕಲುಗಳ ಪರ್ವತಗಳನ್ನ ಅತ್ಯಂತ ಸಲೀಸಾಗಿ ಹತ್ತುತ್ತವೆ. ಆ ಬೆಟ್ಟ ಅದೆಷ್ಟೆ ಭಯಂಕರವಾಗಿರಲಿ ಅಥವಾ ಕಡಿದಾಗಿರಲಿ ಅಂಜದ ಈ ಪ್ರಾಣಿಗಳು ಸಾರಾಸಗಟಾಗಿ, ಸಹಜವಾಗಿ ತಮ್ಮ ಗೊರಸು ಕಾಲುಗಳನ್ನ ನಾಜೂಕಾಗಿ ಬಳಸುತ್ತಾ ಆ ಶಿಖರಗಳ ಪ್ರಪಾತವನ್ನೂ ಲೆಕ್ಕಿಸದೆ ಹತ್ತಬಲ್ಲವು.

ಉತ್ತರ ಅಮೇರಿಕದ ಕೊಲೊರಾಡೊ ಹಾಗೂ ಕೊಲಂಬಿಯನ್ ಘಾಟುಗಳ ಎತ್ತರದ ಶಿಖರಗಳು ಎಂಥವರಿಗೂ ದಿಗಿಲಿಕ್ಕುಸುವಂಥ ಕಡಿದಾದ ಪರ್ವತದ ತಪ್ಪಲುಗಳು. ಅಲ್ಲಿ ಅನೇಕ ಘಂಟೆಗಳ ಕಾಲ ನಿರ್ಭಯವಾಗಿ ನೆಲದ ಮೇಲೆ ನಡೆಯುವಷ್ಟೆ ಸುಲಭವಾಗಿ ಈ ಸಸ್ತನಿಗಳು ಓಡಾಡುತ್ತವೆ.. ಭಾರೀ ತೂಕದ ಈ ಜೀವಿಗಳಿಗೆ ಇಂಥ ಕಲೆ ಸಿದ್ಧಿಸಿದ್ದಾದರೂ ಹೇಗೆ. ಅವು ಏಕೆ ಇಂಥ ದುರ್ಗಮ ಶಿಖರಗಳನ್ನ ಹತ್ತುವ ರಿಸ್ಕ್ ತಗೊಳ್ತವೆ ಎಂಬ ಗೊಂದಲಗಳು ಯಾರಿಗೇ ಆಗಲಿ ಮೂಡದಿರವು.

ಈ ಶಿಖರ ಯಾನ ಅಥವಾ ಟ್ರೆಕ್ಕಿಂಗ್ ಅವುಗಳಿಗೆ ಅನುಷಂಗಿಕವಾಗಿ ತನ್ನ ಲಕ್ಷಾಂತರ ವರ್ಷಗಳ ಸುದೀರ್ಘ ವಿಕಾಸಾವಧಿಯಲ್ಲಿ ರೂಢಿಯಾಗಿ ಹೋದ ವಂಶ ಪಾರಂಪರಿಕ ಗುಣ. ಅಥವಾ ಅಂಥ ಶಿಖರಗಳಿರುವ ಪರಿಸರಕ್ಕೆ ಇವುಗಳ ಕ್ರಮೇಣ ಹೊಂದಿಕೊಂಡು ಬಂದ ರೀತಿ ಇದು. ಇನ್ನು ಇದಕ್ಕೆ ಕಾರಣ ಹುಡುಕ ಹೊರಟರೆ.. ನಮಗೆ ಕೆಲ ಅಚ್ಚರಿದಾಯಕ ಅಂಶಗಳು ತಿಳಿಯುತ್ತವೆ.

ಶಿಖರಗಳ ಕಲ್ಲುಗಳ ಮೇಲೆ ಮಳೆ ಹಾಗೂ ಇತರೆ ಪ್ರಾಕೃತಿಕ ಒತ್ತಡದಿಂದ ಉಂಟಾಗುವ ಒಂದು ಬಗೆಯ ಸೋಡಿಯಂ ನಿಧಾನವಾಗಿ ಉಪ್ಪಾಗಿ ಅಡರುತ್ತದೆ. ಈ ಉಪ್ಪಿನಂಶವು ಈ ಸಸ್ತನಿಗಳಿಗೆ ಒಂದು ನ್ಯೂಟ್ರಿಷನ್ ಫುಡ್ ಆದ್ದರಿಂದ ಅದನ್ನ ಅವು ಪರ್ವತ ಹತ್ತುವಾಗ ಸಿಕ್ಕ ಕಲ್ಲುಗಳ ಮೇಲೆ ನಾಲಿಗೆಯಿಂದ ನೆಕ್ಕಿ ನೆಕ್ಕಿ ಸವಿಯುತ್ತವೆ. ಹಾಗೂ ವಸಂತ ಋತುವಿನಲ್ಲಿ ಪರ್ವತಗಳ ಮೇಲೆ ಬೀಳುವ ಸೂರ್ಯನ ಶಾಖವನ್ನ ಹೀರಿಕೊಳ್ಳಲು ಅಥವಾ ಶಾಖ ಸ್ನಾನ ಮಾಡಲು ಈ ಜೀವಿಗಳು ಬೆಟ್ಟಗಳನ್ನ ಹತ್ತಿ ಬಿಸಿಲಿಗೆ ಮೈ ಒಡ್ಡಿ ನಿಲ್ಲುತ್ತವೆ.

Saakshatv vishwa vismaya episode6

ಕೆಲವು ವೇಳೆ ಗುಡ್ಡಗಳ ಮೇಲೆ ಬೆಳೆದ ಒಣ ಕುರುಚಲು ಹಾಗೂ ಹಸಿ ಒರಟಾದ ಗಿಡ ಗೆಂಟೆಗಳನ್ನೂ ಸಹ ಇವು ತಿನ್ನುತ್ತವೆ. ಕಡಿದಾದ ಬೆಟ್ಟಗಳನ್ನ ಇವು ನೆಗೆಯುತ್ತಾ ಹತ್ತಬಲ್ಲವು. ಹತ್ತುವುದರಲ್ಲಿ ಇವು ಎಷ್ಟು ನಿಪುಣ ಜೀವಿಗಳೆಂದರೆ ನೂರರಲ್ಲಿ ಶೇ 0.001 ರಷ್ಟು ಮಾತ್ರವೇ ಇವು ಸೋಲುವ, ಎಡವುವ. ಕಾಲು ಜಾರಿ ಬಿದ್ದು ಸಾಯುವ ಸಾಧ್ಯತೆ ಇರೋದು. ಇವುಗಳನ್ನ ಬಿಟ್ಟರೆ ಈ ಗುಣಲಕ್ಷಣವನ್ನ ಏಷ್ಯಾದ ಹಿಮಾಲಯದ ತಪ್ಪಲುಗಳಲ್ಲಿರುವ ಹಿಮ ಮೇಕೆಗಳಲ್ಲಿ ಮಾತ್ರವೆ ನಾವು ಕಾಣಲು ಸಾಧ್ಯ. ನ್ಯಾನೀಗಳು ಗುಡ್ಡದ ತಪ್ಪಲಿನ ಮೇಲೊ ಅಥವಾ ಕೆಳಗೆ ಅದರ ತುದಿಯಲ್ಲೊ ಮರಿಗಳನ್ನ ಹಡೆಯುತ್ತವೆ. ಆರು ತಿಂಗಳ ಗರ್ಭಧಾರಣೆಯ ಬಳಿಕ ಜನಿಸುವ ಮರಿಗಳು ಜನಿಸಿದ 30 ಗಂಟೆಯೊಳಗೇ ನೆಗೆಯಲು, ಪರ್ವತ ಹತ್ತಲು ಶಕ್ತವಾಗುತ್ತವೆ.

ಜೀವನ ಸಂಘರ್ಷ, ಹೋರಾಟದ ಸ್ವಭಾವವನ್ನ ನಾವು ಈ ಜೀವಿಗಳ ಗಂಡುಗಳಿಗಿಂತ, ಇಲ್ಲಿನ ಹೆಣ್ಣುಗಳಲ್ಲಿ ಹೆಚ್ಚಾಗಿ ಕಾಣಬಹುದು. ಏಕೆಂದರೆ ಬಲಿಷ್ಠ ಸಂಗಾತಿಯ ಆಯ್ಕೆಯಿಂದ ಹಿಡಿದು, ಗರ್ಭಧಾರಣೆಯ ಸಮಯದಲ್ಲಿ ಹತ್ತಿರ ಬರುವ ಗಂಡು ಬಿಲ್ಲಿಗಳನ್ನ ವಿರೋಧಿಸುತ್ತಾ, ಜನಿಸಿದ ಮರಿಗಳನ್ನ ಶತೃಗಳ ದಾಳಿಯಿಂದ ಸಂರಕ್ಷಿಸುತ್ತಾ, ಮರಿಗಳಿಗೆ ಆಹಾರ ದಾಸ್ತಾನು ಮಾಡುತ್ತಾ, ಪ್ರತೀ ಬಾರಿ ಜೀವನದೊಂದಿಗೆ ಹೋರಾಟ ಮಾಡುವ ಅನಿವಾರ್ಯತೆ ಹೆಣ್ಣಿಗಿದ್ದು ಬದುಕುವ ಛಲ ಎಂಬ ಅಂಶ ಬಂದಾಗ ಅದೇ ಇಲ್ಲಿ ನಿಜವಾದ ಯೋಧ ಎನ್ನಬಹುದು. ಇದು ಬಹುಶಃ ಪ್ರತೀ ಸಸ್ತನಿಗಳಲ್ಲೂ ನಾವು ಗಮನಿಸಬಹುದಾದ ಸಂಗತಿಯೆ.

ಕಡಿದಾದ ಪರ್ವತಗಳನ್ನೇ ಎದುರಿಸುವ ಈ ಜೀವಿಗಳಿಗೆ ನಿಜವಾದ ಶತೃ ಎಂದರೆ ಅಲ್ಲಿನ ಹಿಮ ಸಿಂಹ ಅಥವಾ ಪರ್ವತ ಸಿಂಹ (Mountain lion). ಪ್ರತ್ಯೇಕವಾಗಿ ಓಡಾಡುವ ಇಲ್ಲವೆ ಮೇಯುವ ಮರಿಗಳನ್ನ ಹಾಗೂ ಸಿಂಗಲ್ ಆಗಿ ಅಡ್ಡಾಡುವ ಮೇಕೆಗಳನ್ನ ಈ ಸಿಂಹಗಳು ಟಾರ್ಗೆಟ್ ಮಾಡುತ್ತವೆ. ಹಾಗೂ ಉತ್ತರ ಅಮೇರಿಕದ ಬಾಲ್ಡ್ ಈಗಲ್ ಅಥವಾ ಕೂದಲುರಹಿತ ಗಿಡುಗಗಳೂ ಸಹ ಬಲಿಷ್ಠವಾಗಿದ್ದು ಇವು ಅನೇಕ ವೇಳೆ ನ್ಯಾನಿಗಳ ಮರಿಗಳನ್ನ ಅಟ್ಯಾಕ್ ಮಾಡಿ ಹೊತ್ತೊಯ್ದ ಉದಾಹರಣೆಗಳೂ ಇವೆ.

ಪರ್ವತ ಮೇಕೆಗಳ ಉಣ್ಣೆಗೆ ಭಾರೀ ಬೇಡಿಕೆ ಇದೆಯಾದರೂ ಇವು ಈಗ ಅಳಿವಿನಂಚಿನಲ್ಲಿರುವ ಜೀವಿಗಳಾಗಿರುವುದರಿಂದ ಉತ್ತರ ಅಮೇರಿಕದ ಕೆಲವೆಡೆ ಇವುಗಳ ಸಂರಕ್ಷಣಾ ವಿಭಾಗಗಳನ್ನ ತೆರೆದು ಇವುಗಳ ಮೇಲಿನ ಮಾನವ ಬೇಟೆಯನ್ನ ನಿಷೇಧಿಸಲಾಗಿದೆ. ಒಂದು ಜೀವಿಗೆ ಇನ್ನೊಂದು ಜೀವಿಯ ಆತಂಕ ಇರುವುದು ಪ್ರಕೃತಿ ನಿಯಮ ! ಈ ಭಯವೇ ಜೀವಿಗಳಲ್ಲಿ ಬದುಕುವ ಧೈರ್ಯವನ್ನ ತುಂಬುತ್ತದೆ. ಪರ್ವತ ಮೇಕೆಗಳಂತೆ ಜೀವನದಲ್ಲಿ ಎದುರಾಗುವ ಪರ್ವತದಂಥ ಕಷ್ಟಗಳನ್ನ, ಸಂಧಿಗ್ಧತೆಗಳನ್ನ ಧೈರ್ಯವಾಗಿ ದಾಟುವ ಮನೋಭಾವ ನಮ್ಮಲ್ಲು ಬೆಳೆಯಬಾರದೇಕೆ.. ಅಲ್ಲವೆ ?

ಸಂಗ್ರಹ ಲೇಖನ:-
ಇಂದೂದರ್‌ ಒಡೆಯರ್‌ ಚಿತ್ರದುರ್ಗ (ಡುಗ್ಗು)
ಹವ್ಯಾಸಿ ಬರಹಗಾರ
ಚಿತ್ರದುರ್ಗ

ಸಾಕ್ಷಾ ಟಿವಿಯ ವಿಶ್ವ ವಿಸ್ಮಯ ಅಂಕಣಕಾರ ಇಂದೂದರ್ ಒಡೆಯರ್ ಚಿತ್ರದುರ್ಗ ಅವರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Mountain goatSaakshatv vishwa vismaya episode6
ShareTweetSendShare
Join us on:

Related Posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

by Shwetha
March 30, 2026
0

ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

by Shwetha
March 30, 2026
0

ರಾಜ್ಯದಲ್ಲಿ ಬಜೆಟ್ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರು ಸಂಪೂರ್ಣವಾಗಿ ಚುನಾವಣಾ ಮೂಡ್‌ಗೆ ಜಾರಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ...

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

by Shwetha
March 30, 2026
0

ಮುಂಬರುವ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದ್ದು ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು...

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

by Shwetha
March 30, 2026
0

ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಪಿಎಸ್ಐಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಯುವಜನತೆಗೆ ಹಾಗೂ ಪೊಲೀಸ್ ಇಲಾಖೆಗೆ ಭರ್ಜರಿ ಸಿಹಿಸುದ್ದಿ...

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

by Shwetha
March 30, 2026
0

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇರುವುದು ಸಾಮಾನ್ಯ. ಗ್ಯಾಸ್ ಖಾಲಿಯಾದರೆ ಊಟಕ್ಕೆ ಪರದಾಡಬೇಕು ಎಂಬ ಭಯದಿಂದ ಅನೇಕರು ಮೂರ್ನಾಲ್ಕು ಸಿಲಿಂಡರ್ ಗಳನ್ನು ಅಡ್ವಾನ್ಸ್ ಆಗಿ ಬುಕ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram