ADVERTISEMENT
Wednesday, March 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಮೇರಿಕನ್ ಯಾತ್ರೆ-ಕನ್ನಡತನ ಉಳಿಸಿಕೊಂಡಿರುವ ಕನೆಕ್ಟಿಕಟ್ ಕನ್ನಡಿಗರು; ನೀವಿಲ್ಲಿದ್ದಷ್ಟೂ ದಿನ ನಿಮಗೆ ತವರಿನ ನೆನಪು ಕಾಡುವುದಿಲ್ಲ ಸತ್ಯ:

Shwetha by Shwetha
January 21, 2021
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv yatrika episode 13
Share on FacebookShare on TwitterShare on WhatsappShare on Telegram

ಅಮೇರಿಕನ್ ಯಾತ್ರೆ-ಕನ್ನಡತನ ಉಳಿಸಿಕೊಂಡಿರುವ ಕನೆಕ್ಟಿಕಟ್ ಕನ್ನಡಿಗರು; ನೀವಿಲ್ಲಿದ್ದಷ್ಟೂ ದಿನ ನಿಮಗೆ ತವರಿನ ನೆನಪು ಕಾಡುವುದಿಲ್ಲ ಸತ್ಯ: Saakshatv yatrika episode 13

ಕರ್ನಾಟಕದ ಹೊರಗೆ ಇದುವರೆಗೂ ನಾನು ಸುಮಾರು ಆರು ವರ್ಷಗಳನ್ನ ಕಳೆದಿದ್ದೇನೆ. ನಾವು ಊರ ಹೊರಗಾಗಲೀ ಅಥವಾ ನಾಡ ಹೊರಗಾಗಲೀ ಇದ್ದಾಗ ಅತೀ ಹೆಚ್ಚು ನಮ್ಮನ್ನ ಕಾಡುವುದು ನಮ್ಮ ಭಾಷೆ. ಅದರಲ್ಲೂ ಹೊಸದಾಗಿ ಹೋದಾಗ ಒಂದು ರೀತಿಯ ಅನಾಥ ಪ್ರಜ್ಞೆ ನಮ್ಮನ್ನ ಕಾಡುತ್ತದೆ. ಹೀಗಿರುವಾಗ ನಮ್ಮ ನುಡಿ ಕೇಳಿದಾಗ ಆಗುವ ಸಂತೋಷವೇ ಬೇರೆ. ಕನ್ನಡವನ್ನು, ಅದರಲ್ಲೂ ಹವಿಗನ್ನಡವನ್ನೋ ಅಥವಾ ಸಿದ್ದಾಪುರದ ಸ್ಥಳೀಯ ಕನ್ನಡವನ್ನೋ ಕೇಳಿದಾಗ ನನಗೆ ಸ್ವರ್ಗ ಸಿಕ್ಕಷ್ಟೇ ಖುಷಿಯಾಗಿತ್ತು. Saakshatv yatrika episode 13

Related posts

anantmukhesha ambani

ವಂತಾರ ಸಂಸ್ಥಾಪನಾ ದಿನ: ಉದ್ಘಾಟನೆಯ ಒಂದು ವರ್ಷದ ನಂತರ ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ

March 4, 2026
ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

March 4, 2026

Saakshatv yatrika episode 13

ಮುಂಬೈಯಲ್ಲಿ ಮಾತ್ರ ದಕ್ಷಿಣ ಕನ್ನಡಿಗರನ್ನ ಬಿಟ್ಟಿರೆ, ಉಳಿದ ಬಹುತೇಕ ಕಡೆ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ತಮ್ಮ ಛಾಪನ್ನ ಮೂಡಿಸಿದ್ದಾರೆ. ವಿಷಾದದ ಸಂಗತಿಯೆಂದರೇ ಕನ್ನಡಿಗರು ತಮ್ಮ ಅಸ್ಮಿತೆಯನ್ನ ಉಳಿಸಿಕೊಂಡು ಒಂದು ಸಮುದಾಯವಾಗಿ ರೂಪುಗೊಂಡಿದ್ದು ಕಡಿಮೆ. ಹೊರದೇಶಗಳಲ್ಲೂ ಮಲಯಾಳಿಗಳಿಗೆ, ತೆಲುಗರಿಗೆ, ಗುಜರಾತಿ ತಮಿಳು ಪಂಜಾಬಿಗಳಿಗೆ ಹೋಲಿಸಿದರೆ ಸಂಖ್ಯಾತ್ಮಕವಾಗಿ ನಾವಲ್ಲಿ ಬಹಳ ಚಿಕ್ಕವರು (ಸ್ವಲ್ಪ ಮಟ್ಟಿಗೆ ಕೊಲ್ಲಿ ದೇಶಗಳು ಇದಕ್ಕೆ ಅಪವಾದ). ಆದರೂ ಅನೇಕ ಕನ್ನಡ ಕನ್ನಡಿಗರ ಸಂಘಟನೆಗಳು ಉತ್ತಮ ಕಾರ್ಯ ಮಾಡುತ್ತಿವೆ.

ನಾಡಿನ ಹೊರಗಿದ್ದಾಗ ಕಾರಣಾಂತರಗಳಿಂದ ಅಲ್ಲಿನ ಸ್ಥಳೀಯ ಕನ್ನಡ ಕೂಟಗಳಲ್ಲಿ ಕೆಲಸ ಮಾಡೋ ಕಿಂಚಿತ್ ಅವಕಾಶವೂ ಸಿಕ್ಕಿರಲಿಲ್ಲ. ಆ ಬೇಸರವನ್ನು ನೀಗಿಸಿದ್ದು ಕನೆಟಿಕಟ್. ಅಲ್ಲಿನ ‘ಹೊಯ್ಸಳ ಕನ್ನಡ ಕೂಟ’ವು ಬಹಳ ಆಪ್ತವಾಗಿತ್ತು, ಕನಿಷ್ಟ ಒಂದು ದಿನವಾದರೂ ಚೂರು ಕನ್ನಡದ ಕೆಲಸ ಮಾಡೋ ಅವಕಾಶ ಸಿಕ್ಕಿತ್ತು. ಅಲ್ಲಿನ ರಾಜ್ಯೋತ್ಸವ ಆಚರಣೆ ವಿಶಿಷ್ಟವೂ ಹೌದು ಅನನ್ಯವೂ ಹೌದು.

Saakshatv yatrika episode 13

ಕನೆಕ್ಟಿಕಟ್ ಚಿಕ್ಕ ರಾಜ್ಯವಾದ ಕಾರಣ ಇಡೀ ರಾಜ್ಯಕ್ಕೆ ಇಲ್ಲಿರುವುದು ಒಂದೇ ಕನ್ನಡ ಕೂಟ. ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುವ ಕೂಟಗಳಲ್ಲಿ ಇದೂ ಒಂದು. ಈ ರಾಜ್ಯದಲ್ಲಿ ನೆಲೆಸಿರುವ ನಮ್ಮೂರ ಅಕ್ಕನ ಮೂಲಕ ಮೊದಲ ಬಾರಿಗೆ ಈ ಕೂಟದ ಸಂಪರ್ಕವಾಯಿತು. ಯುಗಾದಿಯ ಸಂಭ್ರಮಕ್ಕೆ ಅತಿಥಿಯಾಗಿ ಬಂದವರು ಪ್ರವೀಣ್ ಗೋಡ್ಕಿಂಡಿ. ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿತ್ತು. ಸುಮಾರು ೫೦೦ ರ ಮೇಲೆ ಜನರಾಗಿದ್ದರೂ ಹೊಸಬರನ್ನ ಥಟ್ಟನೆ ಗುರುತಿಸಿ ಪರಿಚಯ ಮಾಡಿಕೊಂಡ ಕೂಟದ ನಾಯಕತ್ವದ ನಡೆ ಬಹಳ ಇಷ್ಟವಾಗಿತ್ತು.‌ ಒಂಥರಾ ಮನೆಗೆ ಹೊಸದಾಗಿ ಬಂದ ಅತಿಥಿಗಳ ಸ್ವಾಗತಿಸುವ ಹಾಗೇ. ಅಲ್ಲಿದ್ದಷ್ಟು ಕಾಲವು ಒಂದೂ ಕಾರ್ಯಕ್ರಮ ತಪ್ಪದಂತೆ ಹೋಗಲು ಕಾರಣವೂ ಕನ್ನಡ ಕೂಟದ ಪದಾಧಿಕಾರಿಗಳೇ.

ಕನ್ನಡಿಗರನ್ನ ಸಾಂಸ್ಕೃತಿಕವಾಗಿ ಒಂದಾಗಿಡಲು ಮತ್ತು ಪರಸ್ಪರ ಬೆರೆಯಲು ಯುಗಾದಿ, ದಸರಾ/ದೀಪಾವಳಿ, ಹೇಮಂತಗಾನ, ಪಿಕ್‌ನಿಕ್ ಮುಂತಾದ ಕಾರ್ಯಕ್ರಮಗಳನ್ನ ಆಗಾಗ ಆಯೋಜಿಸುತ್ತಾರೆ. ಕರ್ನಾಟಕದ ವಿವಿಧ ಪ್ರದೇಶ, ಸಮುದಾಯ, ಉಪಭಾಷೆಗಳಿಂದ ಬಂದ ಜನರು ಕೇವಲ ಕನ್ನಡದ ಹೆಸರಿನಲ್ಲಿ ಒಂದುಗೂಡುತ್ತಾರೆ. ಅಲ್ಲೇ ನೆಲೆ ನಿಲ್ಲುವ ಮುಂದಿನ ಪೀಳಿಗೆ ಕನ್ನಡತನದಿಂದ ದೂರ ಸರಿಯದಿರಲು ವಾರಾಂತ್ಯದ ಕನ್ನಡ ತರಗತಿಗಳ ನಡೆಸುತ್ತಾರೆ, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

Saakshatv yatrika episode 13

ನಾಳೆ ನೀವು ಕನೆಕ್ಟಿಕಟ್ಟಿಗೆ ಹೋದರೆ ನೀವಾಗೆ ಅವರ ಸಂಪರ್ಕಿಸಲು ಅವರು ಕಾಯೋಲ್ಲ. ಅವರೇ ನಿಮ್ಮನ್ನ ಹುಡುಕಿ ಕರೆಮಾಡಿ ಏನಾದರೂ ಸಹಾಯ ಬೇಕೇ ಎಂದು ಕೇಳುತ್ತಾರೆ. ನಾವು ನಮ್ಮ ನಾಡ ಹೊರಗಿದ್ದಾಗ ಇರಬೇಕಾಗಿದ್ದು ಕೂಡಾ ಹೀಗೆಯೇ. ಕನ್ನಡಿಗರೆಲ್ಲ ಒಂದು ಕುಟುಂಬವಾಗಿ ಬಾಳುವುದು ಅದೆಷ್ಟು ಚೆಂದ ಅಲ್ಲವೇ!

–ಗಿರಿಧರ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಮತ್ತು ಹವ್ಯಾಸಿ ಬರಹಗಾರ
ಸಿದ್ಧಾಪುರ

ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: ConnecticutSaakshatv yatrikaSaakshatv yatrika episode
ShareTweetSendShare
Join us on:

Related Posts

anantmukhesha ambani

ವಂತಾರ ಸಂಸ್ಥಾಪನಾ ದಿನ: ಉದ್ಘಾಟನೆಯ ಒಂದು ವರ್ಷದ ನಂತರ ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ

by admin
March 4, 2026
0

ಜಾಮ್‌ನಗರ - ಪ್ರಧಾನಿ ನರೇಂದ್ರ ಮೋದಿ ಅವರು 'ವಂತಾರ'ವನ್ನು ಉದ್ಘಾಟಿಸಿ, ಒಂದು ವರ್ಷ ಕಳೆದಿದ್ದು ಈ ಒಂದು ವರ್ಷದಲ್ಲಿ ವನ್ಯಜೀವಿ ರಕ್ಷಣೆ, ಸುಧಾರಿತ ವೈದ್ಯಕೀಯ ಆರೈಕೆ ಮತ್ತು...

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

by Shwetha
March 4, 2026
0

ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರು ಆ ಹುದ್ದೆಯಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ...

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

by Shwetha
March 4, 2026
0

ಇರಾನ್–ಇಸ್ರೇಲ್ ನಡುವಿನ ಸಂಘರ್ಷ ಜಾಗತಿಕ ವ್ಯಾಪಾರಕ್ಕೆ ಧಕ್ಕೆಯೊಡ್ಡುತ್ತಿರುವ ಹಿನ್ನೆಲೆ, ಅದರ ಪರಿಣಾಮ ಬೆಂಗಳೂರಿನ ಮಾರುಕಟ್ಟೆಯ ಮೇಲೂ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಿದ್ದಾರೆ. ವಿಶೇಷವಾಗಿ...

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

by Shwetha
March 4, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ರಣರೋಚಕ ಚರ್ಚೆ ಶುರುವಾಗಿದೆ. ರಾಜ್ಯ ಬಜೆಟ್ ಮಂಡನೆ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆ...

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

by Shwetha
March 4, 2026
0

ರಾಜ್ಯವನ್ನೇ ಬೆಚ್ಚಿಬೀಳಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. ಇದೀಗ ಹೈ ಪ್ರೊಫೈಲ್ ಆರೋಪಿ ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ವಿರುದ್ಧದ ತನಿಖೆಯಲ್ಲಿ ಪೊಲೀಸರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram