ಸಚಿನ್ ಬಣ ಸಲ್ಲಿಸಿದ್ದ ರಿಟ್ ಅರ್ಜಿಗಳ ತೀರ್ಪು ಜುಲೈ 24 ಕ್ಕೆ ಮುಂದೂಡಿಕೆ
ಜೈಪುರ, ಜುಲೈ 22: ಸಚಿನ್ ಪೈಲಟ್ ಮತ್ತು ಇತರ 18 ಭಿನ್ನಮತೀಯ ಕಾಂಗ್ರೆಸ್ ಶಾಸಕರು ಸಲ್ಲಿಸಿದ್ದ ರಿಟ್ ಅರ್ಜಿಗಳ ಕುರಿತ ತೀರ್ಪನ್ನು ಜುಲೈ 24 ರವರೆಗೆ ರಾಜಸ್ಥಾನ ಹೈಕೋರ್ಟ್ ಮುಂದೂಡಿದೆ. ರಾಜ್ಯ ವಿಧಾನಸಭಾ ಸ್ಪೀಕರ್ ಅವರು ನೀಡಿರುವ ಅನರ್ಹತೆ ನೋಟಿಸ್ಗಳನ್ನು ಪ್ರಶ್ನಿಸಿ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಾಂತಿ ಮತ್ತು ನ್ಯಾಯಮೂರ್ತಿ ಪ್ರಕಾಶ್ ಗುಪ್ತಾ ಅವರ ನ್ಯಾಯಪೀಠ ಶುಕ್ರವಾರ ಕೈಗೆತ್ತಿಕೊಂಡಿದ್ದು, ಸೋಮವಾರ ಸಂಜೆ ತನಕ ವಾದಗಳನ್ನು ಆಲಿಸಲಾಗಿದ್ದು, ಮಂಗಳವಾರ, ಬೆಳಿಗ್ಗೆ 10: 30 ಕ್ಕೆ ವಿಚಾರಣೆ ಪುನರಾರಂಭವಾಗಿತ್ತು.
ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹತ್ಗಿ ಅವರು ಶೋಕಾಸ್ ನೋಟಿಸ್ ಗೆ ಮಾಲಾ ಫೈಡ್ಸ್, ನ್ಯಾಯವ್ಯಾಪ್ತಿಯ ಮಿತಿ ಸೇರಿದಂತೆ ಹಲವು ಕಾರಣಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಜೈಪುರದ ಹೊರವಲಯದಲ್ಲಿರುವ ಹೋಟೆಲ್ ವೊಂದರಲ್ಲಿ ಸುಮಾರು ಎರಡು ಗಂಟೆಗಳ ವಿಳಂಬದ ನಂತರ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಬೆಂಬಲಿಸುವ ಕಾಂಗ್ರೆಸ್ ಶಾಸಕರು ಸಮ್ಮುಖದಲ್ಲಿ ನಡೆಯಿತು.
ಭಿನ್ನಮತೀಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮತ್ತು ಗೆಹ್ಲೋಟ್ ನಡುವಿನ ಅಧಿಕಾರದ ಜಗಳದ ನಡುವೆ ರಾಜ್ಯದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಉಲ್ಬಣಗೊಳ್ಳುತ್ತಿದೆ.
ಕಳೆದ ವಾರ, ಪೈಲಟ್ ಮತ್ತು ಇತರ 18 ಶಾಸಕರು ಬಹಿರಂಗವಾಗಿ ದಂಗೆ ಎದ್ದರು ಮತ್ತು ಎರಡು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗಳಲ್ಲಿ ಭಾಗವಹಿಸದೇ ಪಕ್ಷದ ವಿಪ್ ಅನ್ನು ಉಲ್ಲಂಘಿಸಿದರು.
ನಂತರ ಅವರನ್ನು ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥರ ಸ್ಥಾನದಿಂದ ವಜಾ ಮಾಡಲಾಯಿತು








