ವಿಶ್ವವನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗಿದೆ… ನೆಲ್ಸನ್ ಮಂಡೇಲಾ ಉಲ್ಲೇಖ ನೆನಪಿಸಿದ ಸಚಿನ್ ತೆಂಡುಲ್ಕರ್
ಅಮೆರಿಕಾದಲ್ಲಿ ನಡೆದಿರುವ ಜನಾಂಗೀಯ ಘರ್ಷಣೆ ವಿರುದ್ಧ ವಿಶ್ವದ ಕ್ರಿಕೆಟಿಗರು ಧ್ವನಿ ಎತ್ತಿದ್ದರು. ಈ ಧ್ವನಿಗೆ ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್ ಕೂಡ ಧ್ವನಿ ಸೇರಿಸಿದ್ದಾರೆ. ಇತ್ತೀಚೆಗೆ ಐಸಿಸಿ ಒಂದು ವಿಡಿಯೋ ಬಿಡುಗಡೆ ಮಾಡಿತ್ತು. ಇಂಗ್ಲೆಂಡ್‍ನ ಜೋಫ್ರಾ ಆರ್ಚೆ ಅವರು 2019ರ ವಿಶ್ವಕಪ್ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೂಪರ್ ಓವರ್ ಮಾಡುತ್ತಿದ್ದ ಸುಮಾರು 90 ಸೆಕೆಂಡುಗಳ ವಿಡಿಯೋ ಬಿಡುಗಡೆ ಮಾಡಿತ್ತು. ಅಲ್ಲದೆ ವೈವಿಧ್ಯತೆಯಲ್ಲಿ ಏಕತೆ ಎಂಬಂತೆ ವೈವಿಧ್ಯತೆ ಇಲ್ಲದೆ ಕ್ರಿಕೆಟ್ ಇಲ್ಲ ಅನ್ನೋ ಟ್ಯಾಗ್ ಲೈನ್ ಕೂಡ ಹಾಕಿತ್ತು.
ಐಸಿಸಿಯ ಈ ವಿಡಿಯೋ ಹಾಗೂ ಸಂದೇಶಕ್ಕೆ ಕ್ರಿಕೆಟ್ ದೇವ್ರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಅಂದು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರಾಗಿದ್ದ ನೆಲ್ಸನ್ ಮಂಡೇಲಾ ಅವರ ಉಲ್ಲೇಖವನ್ನು ಟ್ಯಾಗ್ ಮಾಡಿ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿದ್ದಾರೆ.
ನೆಲ್ಸನ್ ಮಂಡೇಲಾ ಒಂದು ಬಾರಿ ಹೀಗೆ ಹೇಳಿದ್ದರು. ಇಡೀ
ಜಗತ್ತನ್ನೇ ಬದಲಾಯಿಸುವ ಶಕ್ತಿ ಕ್ರೀಡೆಗಿದೆ. ಕ್ರೀಡೆಗೆ ವಿಶ್ವವನ್ನು ಒಗ್ಗೂಡಿಸುವ ಶಕ್ತಿ ಇದೆ ಎಂಬ ಉಲ್ಲೇಖವನ್ನು ಸಚಿನ್ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
2019ರ ಏಕದಿನ ವಿಶ್ವಕಪ್ ಟೂರ್ನಿ. ಇಂಗ್ಲೆಂಡ್ ತಂಡ ಗೆದ್ದಿರುವುದು ಕೂಡ ವಿವಿಧತೆಯಲ್ಲಿ ಏಕತೆ ಎಂಬಂತೆ. ಇಂಗ್ಲೆಂಡ್ ತಂಡದ ನಾಯಕನಾಗಿದ್ದವರು ಐರೀಶ್ ಮೂಲದ ಇಯಾನ್ ಮೊರ್ಗಾನ್. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು ನ್ಯೂಜಿಲೆಂಡ್ ಮೂಲದ ಬೆನ್ ಸ್ಟೋಕ್ಸ್. ತಂಡದ ಸ್ಪಿನ್ ಬೌಲರ್‍ಗಳು ಪಾಕ್ ಮೂಲದ ಮೋಯಿನ್ ಆಲಿ ಮತ್ತು ಆದೀಲ್ ರಶೀದ್. ತಂಡದ ಇನಿಂಗ್ಸ್ ಆರಂಭಿಸಿರೋದು ದಕ್ಷಿಣ ಆಫ್ರಿಕಾ ಮೂಲದ ಜೇಸನ್ ರಾಯ್. ಸೂಪರ್ ಓವರ್ ನಲ್ಲಿ ಬೌಲಿಂಗ್ ಮಾಡಿ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದು ಬಾರ್ಬೋಡಸ್ ಮೂಲದ ಜೋಫ್ರಾ ಆರ್ಚೆ. ಇದು ಇಂಗ್ಲೆಂಡ್ ತಂಡದ ಗೆಲುವಿನ ಸೀಕ್ರೆಟ್ ಆಗಿತ್ತು.
ಅಮೆರಿಕಾದಲ್ಲಿ ನಡೆದಿದ್ದ ಜನಾಂಗೀಯ ಘರ್ಷನೆಯ ರೋಷ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದಂತೆ ವೆಸ್ಟ್ ಇಂಡೀಸ್ ಆಟಗಾರರು ಕುಪಿತಗೊಂಡಿದ್ದರು. ಡರೇನ್ ಸಮಿ, ಕ್ರಿಸ್ ಗೇಲ್ ಸೇರಿದಂತೆ ವೆಸ್ಟ್ ಇಂಡೀಸ್‍ನ ಹಲವಾರು ಕ್ರಿಕೆಟಿಗರು ಅನ್ಯಾಯ ವಿರುದ್ಧ ಹೋರಾಟ ನಡೆಸಲು ಬೆಂಬಲ ನೀಡುವಂತೆ ಐಸಿಸಿಗೆ ಒತ್ತಡ ಹೇರಿದ್ದರು.








