Sachin Tendulkar Double Ton : ಕ್ರಿಕೆಟ್ ದೇವರ ಮೊದಲ ದ್ವಿಶತಕಕ್ಕೆ 13 ವರ್ಷ…..
Sachin Tendulkar Double Ton : ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಜೀವನದಲ್ಲಿ ಇದು ಮತ್ತೊಂದು ಸ್ಮರಣೀಯ ದಿನ. 13 ವರ್ಷಗಳ ಹಿಂದೆ ಇದೇ ದಿನ ಅಂದರೆ ಫೆಬ್ರವರಿ 24ರಂದು ಮಾಸ್ಟರ್ ಬ್ಲಾಸ್ಟರ್ ಅಪರೂಪದ ಮೈಲಿಗಲ್ಲು ಸಾಧಿಸಿದರು. ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿಸಿದ ಮೊದಲ ಪುರುಷರ ಆಟಗಾರ ಎಂಬ ಇತಿಹಾಸ ನಿರ್ಮಿಸಿದರು. ICC ಮತ್ತು BCCI ಟ್ವೀಟ್ ಮಾಡುವ ಮೂಲಕ ಈ ವಿಶೇಷ ಕ್ಷಣವನ್ನ ಮತ್ತೊಮ್ಮೆ ಸ್ಮರಿಸಿಕೊಂಡಿದೆ.
24 ಫೆಬ್ರವರಿ 2010 ರಂದು, ಗ್ವಾಲಿಯರ್ ನ ಕ್ಯಾಪ್ಟನ್ ರೂಪ್ ಸಿಂಗ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅಜೇಯ ದ್ವಿಶತಕವನ್ನು ಗಳಿಸಿದರು. 147 ಎಸೆತಗಳಲ್ಲಿ 25 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ ದ್ವಿ ಶತಕ ಪೂರೈಸಿದರು. ಸಚಿನ್ ಅಬ್ಬರದ ಜೊತೆಗೆ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿತು. ಈ ಪಂದ್ಯದಲ್ಲಿ ಭಾರತ ಸೌತ್ ಆಫ್ರಿಕಾ ತಂಡವನ್ನ 153 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ಪಂದ್ಯದ ನಂತರ ಸಚಿನ್ ತಮ್ಮ ಇನ್ನಿಂಗ್ಸ್ ಅನ್ನು ದೇಶದ ಜನತೆಗೆ ಅರ್ಪಿಸುತ್ತಿರುವುದಾಗಿ ಘೋಷಿಸಿದರು.
#OnThisDay in 2010, @sachin_rt created history by becoming the 1st batsman to score a 200 in ODIs. 🇮🇳👏
Relive the knock 👉 https://t.co/yFPy4Q1lQB pic.twitter.com/F1DtPmo2Gm
— BCCI (@BCCI) February 24, 2020
ಸಚಿನ್ ಅವರ ದ್ವಿಶತಕಕ್ಕೂ ಮುನ್ನ ಏಕದಿನದಲ್ಲಿ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ 186 ರನ್ ಆಗಿತ್ತು. 1999 ರಲ್ಲಿ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮಾಸ್ಟರ್ ಸ್ಕೋರ್ ದಾಖಲಿಸಿದ್ದರು. ಸಚಿನ್ ತೆಂಡೂಲ್ಕರ್ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನ ಹೊಂದಿದ್ದಾರೆ.
Sachin Tendulkar Double Ton: 13 years for the God of Cricket’s first double century….