IPL 2022 – ಅತ್ಯುತ್ತಮ ಪ್ಲೇಯಿಂಗ್ 11 ಹೆಸರಿಸಿದ ಸಚಿನ್ ತೆಂಡೂಲ್ಕರ್
IPL 2022 ಋತುವಿನ ಪಂದ್ಯಗಳು ಮುಗಿದಿದ್ದು ಗುಜರಾತ್ ಟೈಟಾನ್ಸ್ ಪದಾರ್ಪಣೆ ಋತುವಿನಲ್ಲಿಯೇ ಚೊಚ್ಚಲ ಪ್ರಶಸ್ತಿಯನ್ನ ಗೆದ್ದು ಬೀಗಿದೆ. ಇನ್ನೂ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿರುವ ಸಚಿನ್ ತೆಂಡೂಲ್ಕರ್ ಆಟಗಾರರ ಪ್ರದರ್ಶನ ಮೇಲೆ ನೂತನ ಪ್ಲೇಯಿಂಗ್ ಇಲೆವೆನ್ ರೆಡಿ ಮಾಡಿದ್ದಾರೆ.
“ಇದು ಆಟಗಾರರ ಖ್ಯಾತಿ ಅಥವಾ ಅವರ ಹಿಂದಿನ ಪ್ರದರ್ಶನಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಇದು ಸಂಪೂರ್ಣವಾಗಿ ಅವರ ಈ ಋತುವಿನ ಪ್ರದರ್ಶನ ಮತ್ತು ಈ ಋತುವಿನಲ್ಲಿ ಅವರು ಏನನ್ನು ಸಾಧಿಸಲು ಸಾಧ್ಯವಾಯಿತು ಎಂಬುದನ್ನು ಆಧರಿಸಿದೆ ”ಎಂದು ತೆಂಡೂಲ್ಕರ್ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊದಲ್ಲಿ ಹೇಳಿದ್ದಾರೆ.
ಸಚಿನ್ ಹೆಸರಿಸಿದ ಪ್ಲೇಯಿಂಗ್ 11 ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ಆಯ್ಕೆಯಾಗಿದ್ದಾರೆ. ಆರ್ ಸಿ ಬಿ ತಂಡದಿಂದ ದಿನೇಶ್ ಕಾರ್ತಿಕ್ ಸಚಿನ್ ಅವರ T20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರ ಐಪಿಎಲ್ 2022 ಅತ್ಯುತ್ತಮ XI: ಜೋಸ್ ಬಟ್ಲರ್, ಶಿಖರ್ ಧವನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್, ದಿನೇಶ್ ಕಾರ್ತಿಕ್, ರಶೀದ್ ಖಾನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್.








