ADVERTISEMENT
Thursday, December 18, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಚಿನ್ ಬದುಕಿನ ಆ ಎರಡು ವಿಷಾದಗಳು..! ಅದಕ್ಕೆ ಕಾರಣ ಗವಾಸ್ಕರ್ ಮತ್ತು ವಿವಿಯನ್ ರಿಚರ್ಡಸನ್..!

admin by admin
June 1, 2021
in Newsbeat, Sports, ಕ್ರೀಡೆ
sachin tendulkar saakshatv team india
Share on FacebookShare on TwitterShare on WhatsappShare on Telegram

ಸಚಿನ್ ಬದುಕಿನ ಆ ಎರಡು ವಿಷಾದಗಳು..! ಅದಕ್ಕೆ ಕಾರಣ ಗವಾಸ್ಕರ್ ಮತ್ತು ವಿವಿಯನ್ ರಿಚರ್ಡಸನ್..!

sachin tendulkar saakshatv team indiaಅದು 24 ವರ್ಷಗಳ ಸುದೀರ್ಘ ಕ್ರಿಕೆಟ್ ಬದುಕು.. 200 ಟೆಸ್ಟ್ ಪಂದ್ಯ… 463 ಏಕದಿನ ಪಂದ್ಯ … ಟೆಸ್ಟ್ ಕ್ರಿಕೆಟ್ ನಲ್ಲಿ 15921 ರನ್… ಏಕದಿನ ಕ್ರಿಕೆಟ್ ನಲ್ಲಿ 18426 ರನ್… 51 ಟೆಸ್ಟ್ ಶತಕಗಳು.. 49 ಏಕದಿನ ಶತಕಗಳು… ಒಂದು ವಿಶ್ವಕಪ್ ಕಿರೀಟ.. ನಂಬರ್ ವನ್ ಟೆಸ್ಟ್ ತಂಡದ ಆಟಗಾರ… ಕ್ರಿಕೆಟ್ ಜಗತ್ತಿನ ಹಲವು ದಾಖಲೆಗಳ ಒಡೆಯ.. ಮೈದಾನದಲ್ಲಿ ಮಂತ್ರಘೋಷದಂತೆ ಮೊಳಗುವ ಮೂರಕ್ಷರದ ದೇವರು… ಅಭಿಮಾನಿಗಳ ಎವರ್ ಗ್ರೀನ್ ಹೀರೋ… ಕಿಂಗ್ ಆಫ್ ಕ್ರಿಕೆಟ್.. ಗಾಡ್ ಆಫ್ ಕ್ರಿಕೆಟ್.. ಹೀಗೆ ಹಲವು ಗೌರವ, ದಾಖಲೆಗಳನ್ನು ಬರೆದ ಕ್ರಿಕೆಟ್ ಜಗತ್ತಿನ ಕ್ರಿಕೆಟ್ ಬ್ರಹ್ಮ.. ನಮ್ಮ ಹೆಮ್ಮೆಯ ಭಾರತ ರತ್ನ ಸಚಿನ್ ತೆಂಡುಲ್ಕರ್.
ನಾವು ಅಂದುಕೊಳ್ಳಬಹುದು.. ಸಚಿನ್ ತೆಂಡುಲ್ಕರ್ ಅವರದ್ದು ಪರಿಪೂರ್ಣ ಕ್ರಿಕೆಟ್ ಬದುಕು ಅಂತ. ಆದ್ರೆ ಸಚಿನ್ ಪರಿಪೂರ್ಣ ಕ್ರಿಕೆಟಿಗನಲ್ಲ. ವರ್ಣರಂಚಿತ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ರೂ ಸಚಿನ್ ತೆಂಡುಲ್ಕರ್ ಗೆ ಇನ್ನೂ ಕ್ರಿಕೆಟ್ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಕ್ರಿಕೆಟ್ ನಲ್ಲಿ ಇನ್ನೂ ಕಲಿಯುತ್ತಿರುವ ಹುಡುಗ ಅಂತನೇ ಭಾವಿಸುತ್ತಿದ್ದಾರೆ.
ವಯಸ್ಸು 40 ಆಗಿದ್ರೂ ಇನ್ನೂ ಕ್ರಿಕೆಟ್ ಆಡಬೇಕು ಅನ್ನೋ ಹಂಬಲ ತುಡಿತ ತೆಂಡುಲ್ಕರ್ ನಲ್ಲಿತ್ತು. ಒಲ್ಲದ ಮನಸ್ಸಿನಿಂದಲೇ ಬಲವಂತವಾಗಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ರು. ವಿದಾಯದ ಬಳಿಕ ಕುಟುಂಬದ ಜೊತೆ ಹೆಚ್ಚು ಸಮಯ ಕಾಲ ಕಳೆಯುತ್ತಿರುವ ಆಗಾಗ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿದ್ದಾರೆ. ಯುವ ಕ್ರಿಕೆಟಿಗರಿಗೆ ಕ್ರಿಕೆಟ್ ತರಬೇತಿ ನೀಡುತ್ತಿದ್ದಾರೆ. ಟೀಮ್ ಇಂಡಿಯಾದ ಆಟಗಾರರಿಗೆ ಮಾರ್ಗದರ್ಶನ, ಸಲಹೆಯನ್ನೂ ನೀಡುತ್ತಿದ್ದಾರೆ.
sachin tendulkar saakshatv team indiaಆದ್ರೂ ಸಚಿನ್ ತೆಂಡುಲ್ಕರ್ ಗೆ ಕ್ರಿಕೆಟ್ ಬದುಕಿನಲ್ಲಿ ಏನೋ ಕಳೆದುಕೊಂಡಂತೆ ಭಾಸವಾಗುತ್ತಿದ್ದಂತೆ. ಹೌದು, ಸಚಿನ್ ತೆಂಡುಲ್ಕರ್ ಅವರಿಗೆ ತನ್ನ ಕ್ರಿಕೆಟ್ ಬದುಕಿನ ಬಗ್ಗೆ ಎರಡು ವಿಷಾದಗಳಿವೆಯಂತೆ. ಅಚ್ಚರಿಯಾಗಬೇಡಿ. ಇದು ಸತ್ಯ. ಸ್ವತಃ ಸಚಿನ್ ತೆಂಡುಲ್ಕರ್ ಅವರೇ ಈ ಮಾತನ್ನು ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಸಚಿನ್ ತೆಂಡುಲ್ಕರ್ ಅವರ ವಿಷಾದಕ್ಕೆ ಕಾರಣ ಒಂದು ಸುನೀಲ್ ಗವಾಸ್ಕರ್ ಮತ್ತೊಂದು ಸರ್ ವಿವಿಯನ್ ರಿಚರ್ಡಸನ್.
ಅಂದ ಹಾಗೇ ಸುನೀಲ್ ಗವಾಸ್ಕರ್ ಅವರು ಸಚಿನ್ ತೆಂಡುಲ್ಕರ್ ಅವರ ಪ್ರೀತಿಯ ಕ್ರಿಕೆಟಿಗ. ಗವಾಸ್ಕರ್ ಆಟವನ್ನು ನೋಡಿಕೊಂಡೇ ಬೆಳೆದುಬಂದವರು ಸಚಿನ್ ತೆಂಡುಲ್ಕರ್. ಹಾಗೇ ಸರ್ ವಿವಿಯನ್ ರಿಚರ್ಡಸನ್. ಸಚಿನ್ ತೆಂಡುಲ್ಕರ್ ಅವರ ಬಾಲ್ಯದ ನೆಚ್ಚಿನ ಹೀರೋ. ಹೀಗಾಗಿ ಸಚಿನ್ ಅವರನ್ನು ಸದಾ ಕಾಡುತ್ತಿರುವ ಕೊರಗು ಏನು ಅಂದ್ರೆ ಇವರಿಬ್ಬರ ಜೊತೆಯಾಗಿ ಆಡಲಿಲ್ಲ ಎಂಬುದು.
ಸುನೀಲ್ ಗವಾಸ್ಕರ್ ಜೊತೆಯಾಗಿ ಆಡಲಿಲ್ಲ ಎಂಬ ಬೇಸರ ಒಂದು ಕಡೆಯಾದ್ರೆ, ರಿಚರ್ಡಸನ್ ವಿರುದ್ಧವಾಗಿ ಆಡಲಿಲ್ಲ ಅನ್ನೋ ನೋವು ಸಚಿನ್ ಅವರನ್ನು ಈಗಲೂ ಕಾಡುತ್ತಿದೆಯಂತೆ.
sachin tendulkar saakshatv team indiaಸುನೀಲ್ ಗವಾಸ್ಕರ್ ಅವರು, ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿಕೊಡುವ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಹೀಗಾಗಿ ಗವಾಸ್ಕರ್ ಜೊತೆಯಾಗಿ ಆಡುವ ಅವಕಾಶವೇ ಸಿಗಲಿಲ್ಲ.

Related posts

December 17, 2025
ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

December 17, 2025

ಇನ್ನು ಸರ್ ವಿವಿಯನ್ ರಿಚರ್ಡಸನ್ ಅವರು 1991ರಲ್ಲಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಆಗ ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ ನಲ್ಲಿ ಪ್ರಜ್ವಲಿಸಲು ಶುರು ಮಾಡಿದ್ದರು. ಆದ್ರೆ ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಆಡುವ ಅವಕಾಶ ಸಿಗಲಿಲ್ಲ. ಹೀಗಾಗಿ ಸಚಿನ್ ರಿಚರ್ಡಸನ್ ವಿರುದ್ಧ ಆಡಲು ಸಾಧ್ಯವಾಗಲಿಲ್ಲ.
ಹೀಗೆ ಸಚಿನ್ ತೆಂಡುಲ್ಕರ್ ತಮ್ಮ ಕ್ರಿಕೆಟ್ ಬದುಕಿನ ಎರಡು ವಿಷಾದದ ಬಗ್ಗೆ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಸಚಿನ್ ತೆಂಡುಲ್ಕರ್ ಎಷ್ಟೇ ಸಾಧನೆ ಮಾಡಿದ್ರೂ ಏನಾದ್ರೂ ತನ್ನ ಕ್ರಿಕೆಟ್ ಬದುಕು ಪರಿಪೂರ್ಣವಾಗಿಲ್ಲ ಅಂತ ಹೇಳುತ್ತಿರುತ್ತಾರೆ. ಈ ಸಾಧಕರೇ ಬದುಕು ಹಾಗೇ..ಒಂಥರ ವಿಚಿತ್ರವಾಗಿರುತ್ತದೆ.

Tags: # Sachin Tendulkar 1st test century#saakshatvCricketICCIndian cricketSachin TendulkarSir Vivian Richardssunil gavaskarteam indiaworld cricket
ShareTweetSendShare
Join us on:

Related Posts

by admin
December 17, 2025
0

ಜೀವನದಲ್ಲಿ ಎಲ್ಲಾ ರೀತಿಯ ಯೋಗವನ್ನು ಪಡೆಯಲು ಬಯಸುವವರು ಗುರುವಾರ ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ಈ ರೀತಿಯಲ್ಲಿ ಗುರು ಪೂಜೆಯನ್ನು ಮಾಡಲು ಪ್ರಯತ್ನಿಸಬೇಕು. ನೀವು ಊಹಿಸಲಾಗದ ಮಟ್ಟದ ಯೋಗವನ್ನು...

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

by admin
December 17, 2025
0

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಒಳ್ಳೆದಾ ಅಥವಾ ಕೆಟ್ಟದಾ.?? ಹಾಗಾದರೆ ಇದಕ್ಕೆ ಇರುವ ಪರಿಹಾರಗಳ ಮೂಲಕ ನಿಮ್ಮ ಜೀವನ ಬದಲಾಗಬಹುದು. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...

ಇದು ದೇವಸ್ಥಾನದ ಅರ್ಚಕರ ಜೀವನದಲ್ಲಿ ಆದಂತಹ ನೈಜ ಘಟನೆ..!

ಇದು ದೇವಸ್ಥಾನದ ಅರ್ಚಕರ ಜೀವನದಲ್ಲಿ ಆದಂತಹ ನೈಜ ಘಟನೆ..!

by admin
December 17, 2025
0

ಒಬ್ಬ ಅರ್ಚಕರು ದೇವಸ್ಥಾನದಲ್ಲಿ ತಡರಾತ್ರಿವರೆಗೂ ಕೆಲಸ ಮಾಡುತಿದ್ದರು, ಮರುದಿನ ವಿಶೇಷ ಮಹಾಪೂಜೆ ಇದ್ದಿದ್ದರಿಂದ ಅದರ ತಯಾರಿಯಲ್ಲಿಯೇ ವ್ಯಸ್ತರಾಗಿದ್ದರು.ಆದರೆ ತುಂಬಾ ತಡವಾಗಿತ್ತು ಹಾಗೂ ಎಂದಿನಂತೆಯೇ ತಮ್ಮ ಮನೆಗೆ ದೇವಸ್ಥಾನದ...

ಅಧಿವೇಶನ ವಿಸ್ತರಣೆ ಕುರಿತು ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ

ಅಧಿವೇಶನ ವಿಸ್ತರಣೆ ಕುರಿತು ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ

by Shwetha
December 17, 2025
0

ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನು ಒಂದು ವಾರ ವಿಸ್ತರಿಸುವಂತೆ ವಿಪಕ್ಷ ನಾಯಕ ಆರ್. ಅಶೋಕ್ ಪತ್ರ ಬರೆದಿರುವ ಹಿನ್ನೆಲೆಯಲ್ಲಿ, ಈ ವಿಷಯದ ಬಗ್ಗೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್...

ವಿಧಾನಸಭೆಯಲ್ಲಿ ನಾನೇ ಸಿಎಂ ಎಂದು ಗುಡುಗಿದ ಸಿದ್ದರಾಮಯ್ಯ; ಮುಗುಳ್ನಗುತ್ತಲೇ ನಿಗೂಢ ಸಂದೇಶ ರವಾನಿಸಿದ ಡಿಕೆ ಶಿವಕುಮಾರ್

ವಿಧಾನಸಭೆಯಲ್ಲಿ ನಾನೇ ಸಿಎಂ ಎಂದು ಗುಡುಗಿದ ಸಿದ್ದರಾಮಯ್ಯ; ಮುಗುಳ್ನಗುತ್ತಲೇ ನಿಗೂಢ ಸಂದೇಶ ರವಾನಿಸಿದ ಡಿಕೆ ಶಿವಕುಮಾರ್

by Shwetha
December 17, 2025
0

ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಎಂಬ ಗುಸುಗುಸು ಮತ್ತು ವಿಪಕ್ಷಗಳ ಟೀಕಾಸ್ತ್ರಗಳ ನಡುವೆಯೇ ವಿಧಾನಸಭೆಯ ಕಲಾಪ ಹೈವೋಲ್ಟೇಜ್ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram