ಬೆಳಗಾವಿ ರಸ್ತೆ ಪಕ್ಕದಲ್ಲಿ ಟೀ ಸವಿದ ಸಚಿನ್ ತೆಂಡೂಲ್ಕರ್
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸರಳತೆಯನ್ನನ ಪ್ರತಿಬಿಂಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನಿನ್ನೆಯಿಂದ ವೈರಲ್ ಆಗುತ್ತಿದೆ. ಬೆಳಗಾವಿ ರಸ್ತೆ ಪಕ್ಕದ ಗೂಡಾಂಗಡಿಯಲ್ಲಿ ಸಾಮಾನ್ಯರಂತೆ ಟೀ ಸವಿದಿದ್ದಾರೆ ಅಲ್ಲದೆ ಸ್ಥಳಿಯರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್ ಮುಂಬೈಯಿಂದ ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳಿದ್ದಾರೆ. ಈ ವೇಳೆ ಬೆಳಗಾವಿ ಹೊರ ವಲಯದ ಮಚ್ಚೆ ಬಳಿಯ ರಾಷ್ಟ್ರೀಯ ಹೆದ್ದಾರಿ 4 ಪಕ್ಕದಲ್ಲಿರುವ ವೈಜು ನಿತೂರ್ಕರ್ ಎಂಬುವರ ಫೌಜಿ ಟೀ ಸ್ಟಾಲ್ ಬಳಿ ಕಾರು ನಿಲ್ಲಿಸಿ ಚಹಾ ಸವಿದಿದ್ದಾರೆ.
ಈ ವೇಳೆ ಅಲ್ಲಿದ್ದ ಸಾರ್ವಜನಿಕರು ಸಚಿನ್ ಅವರನ್ನ ಕಂಡು ಸೆಲ್ಫಿ, ವೀಡಿಯೋ ಮತ್ತು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಈ ಕುರಿತು ಮಾತನಾಡಿರುವ ಚಹಾ ಅಂಗಡಿಯ ನಿಟ್ಟೂರ್ಕರ್ ಅವರು, “ಅಲ್ಲಿಯವರೆಗೆ, ಆ ಕಾರಿನಲ್ಲಿ ತೆಂಡೂಲ್ಕರ್ ಮತ್ತು ಅವರ ಕುಟುಂಬದವರು ಇದ್ದರು ಎಂಬುದು ನನಗೆ ತಿಳಿದಿರಲಿಲ್ಲ. ತೆಂಡೂಲ್ಕರ್ ಸ್ವತಃ ಕಾರಿನಿಂದ ಇಳಿದು ಚಹಾ ಸೇವಿಸಿ ರುಚಿ ಚೆನ್ನಾಗಿದೆ ಎಂದು ಹೇಳಿದರು. ಅವರು ಕಾರಿನಿಂದ ಇಳಿದಾಗಲೇ ಅದು ಕ್ರಿಕೆಟ್ ದೇವರು ಸಚಿನ್ ಎಂದು ನನಗೆ ತಿಳಿಯಿತು ಎಂದು ಅವರು ಹೇಳಿದರು.
ಬಿಲ್ 175 ಆಗಿದ್ದು, ನಿಟ್ಟೂರ್ಕರ್ ಗೆ 200 ರೂ. 25 ರೂಪಾಯಿ ಹಿಂತಿರುಗಿಸುವಾಗ ನಿಟ್ಟೂರ್ಕರ್ ಅದೇ 200 ರೂಪಾಯಿ ನೋಟಿನಲ್ಲಿ ತೆಂಡೂಲ್ಕರ್ ಅವರ ಹಸ್ತಾಕ್ಷರವನ್ನ ಪಡೆದಿದ್ದಾರೆ.
sachin tendulkar: When Sachin stopped for chai in Belagavi tea stall