ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶೀಘ್ರದಲ್ಲೇ ಸಚಿನ್ ತೆಂಡೂಲ್ಕರ್ ಪ್ರತಿಮೆ ಸ್ಥಾಪನೆ….
ಕ್ರಿಕೆಟ್ ಲೋಕದ ಜೀವಂತ ದಂತಕಥೆ ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರ ಎತ್ತರದ ಗಾತ್ರದ ಪ್ರತಿಮೆಯನ್ನ ಶೀಘ್ರವೇ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪ್ರಿತಿಷ್ಠಾಪಿಸಲಾಗುತ್ತದೆ. ಸಚಿನ್ ಈ ವರ್ಷ ಏಪ್ರಿಲ್ನಲ್ಲಿ 50 ನೇ ವರ್ಷಕ್ಕೆ ಕಾಲಿಡಲಿದ್ದಾರೆ ಮತ್ತು ಅವರ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ 10 ವರ್ಷ ತುಂಬಲಿದೆ.
ಮಾಸ್ಟರ್ ಬ್ಲಾಸ್ಟರ್ ನವೆಂಬರ್ 2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದ ಅದೇ ಕ್ರಿಡಾಂಗಣದಲ್ಲಿ ಪ್ರತಿಮೆಯನ್ನ ಸ್ಥಾಪಿಸಲಾಗುತ್ತಿದೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನ ಅಧಿಕಾರಿಗಳು (MCA) ತೆಂಡೂಲ್ಕರ್ ಅವರ 50 ನೇ ಜನ್ಮದಿನದ ಮನ್ನಾದಿನ ಏಪ್ರಿಲ್ 23 2023 ರಂದು ಪ್ರತಿಮೆಯನ್ನ ಅನಾವರಣಗೊಳಿಸಲು ಆಶಿಸುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ “ ಇದು ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲ ಪ್ರತಿಮೆಯಾಗಲಿದೆ. ಇದು ಭಾರತೀಯ ಕ್ರಿಕೆಟ್ಗೆ ಸಚಿನ್ ನೀಡಿದ ಕೊಡುಗೆಗಾಗಿ ಕೃತಜ್ಞತೆಯ ಸಣ್ಣ ಸೂಚಕವಾಗಿದೆ ಎಂದು ತಿಳಿಸಿದ್ದಾರೆ. ಸಚಿನ್ ಈಗಾಗಲೇ ಅವರ ಹೆಸರಿನಲ್ಲಿ ತನ್ನದೇ ಸ್ಟಾಂಡ್ ಅನ್ನ ಹೊಂದಿದ್ದಾರೆ.
ಭಾರತ ಪರ 200 ಟೆಸ್ಟ್ ಪಂದ್ಯಗಳನ್ನ ಮತ್ತು 463 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನುಆಡಿರುವ ಸಚಿನ್, ಟೆಸ್ಟ್, ODI ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 34357 ರನ್ ಗಳಿಸಿದ್ದಾರೆ. ಅತಿಹೆಚ್ಚು ಅಂತರಾಷ್ಟ್ರೀಯ ಶತಕಗಳನ ಬಾರಿಸಿದ್ದು ಶತಕಗಳ ಶತಕ ದಾಖಲಿಸಿ ಏಕೈಕ ಆಟಗಾರರಾಗಿದ್ದಾರೆ.
Sachin Tendulkar’s life-sized statue to be erected at Mumbai’s Wankhede Stadium