ಮಡಿಕೇರಿ: ಅಯೋಧ್ಯೆಯಲ್ಲಿ ರಾಮಮಂದಿರ ಶಂಕುಸ್ಥಾಪನೆ ಸಂದರ್ಭ ಜೀವನದಿ ಕಾವೇರಿಯ ಪವಿತ್ರ ಜಲವನ್ನು ರವಾನಿಸಿದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿರುವ ಶ್ರೀಕೃಷ್ಣನ ಜನ್ಮಸ್ಥಾನವಾದ ಯಮುನಾ ನದಿ ತಟದಲ್ಲಿರುವ ಮಥುರಾ ದೇವಾಲಯಕ್ಕೆ ಕಾವೇರಿ ತೀರ್ಥೋಧ್ಬವದ ಬಳಿಕ ಪವಿತ್ರ ತೀರ್ಥವನ್ನು ತಲುಪಿಸಲಾಗಿದೆ.
ಚೆಟ್ಟಳ್ಳಿಯ ಪುತ್ತರೀರ ಪಪ್ಪು ಎಂಬುವರು ಕಾವೇರಿಯ ಪವಿತ್ರ ಜಲವನ್ನು ಮಥುರಾದ ವೃಂದಾವನ ಮತ್ತು ದೇವಾಲಯಕ್ಕೆ ತಲುಪಿಸಲು ಯಶಸ್ವಿಯಾಗಿದ್ದಾರೆ.
ತಲಕಾವೇರಿಯಿಂದ ಪ್ಲಾಸ್ಟಿಕ್ ಕ್ಯಾನಿನಲ್ಲಿ 555 ಲೀಟರ್ ನಷ್ಟು ತೀರ್ಥ ಸಂಗ್ರಹಿಸಿ ಸ್ನೇಹಿತ ಬಟ್ಟೀರ ಶರೀನ್ ಸಹಾಯದಿಂದ ಮೈಸೂರಿನವರೆಗೆ ತಮ್ಮ ಪಿಕಪ್ ವಾಹನದಲ್ಲಿ ತೆಗೆದುಕೊಂಡು ಹೋಗಿ ಬಳಿಕ ವಿಮಾನದ ಮೂಲಕ ಮಥುರಾ ನಗರಕ್ಕೆ ತಲುಪಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel