ಅಲಿಯಾ ಭಟ್‍ರ ಸಡಕ್-2ಗೆ ನೆಟ್ಟಿಗರ ರೋಷಾಕ್ರೋಶವೇಕೆ..!

ಮುಂಬೈ: ಇಡೀ ಕುಟುಂಬದವರೇ ನಟಿಸಿ, ನಿರ್ಮಿಸಿ ನಿರ್ದೇಶನ ಮಾಡಿರುವ ಸಡಕ್-2ಗೆ ನೆಟ್ಟಿಗರು ಗರಂ ಆಗಿದ್ದಾರೆ.
ಅಲಿಯಾ ಭಟ್ ಅಭಿನಯವಿರುವ ಸಡಕ್-2 ಚಿತ್ರದ ನಿರ್ದೇಶಕರು ಅಲಿಯಾ ಭಟ್ ತಂದೆ ಮಹೇಶ್ ಭಟ್. ನಿರ್ಮಾಪಕರು ಮಹೇಶ್ ಭಟ್ ಸಹೋದರ ಮುಖೇಶ್ ಭಟ್. ಚಿತ್ರದಲ್ಲಿ ಅಲಿಯಾ ಭಟ್ ಜತೆ ಸಹೋದರಿ ಪೂಜಾ ಭಟ್ ಕೂಡ ನಟಿಸಿದ್ದಾರೆ.


ಹೀಗಾಗಿ ಇಡೀ ಚಿತ್ರ ಅಪ್ಪ-ಮಕ್ಕಳ ಫ್ಯಾಮಿಲಿ ಸಿನಿಮಾವಾಗಿದೆ ಎಂದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಸಡಕ್-2 ಚಿತ್ರದ ಪೋಸ್ಟರ್‍ನ್ನು ಮಹೇಶ್ ಭಟ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರ ಆಕ್ರೋಶದ ಕಟ್ಟೆಯೊಡೆದಿದೆ. ಬೈಕಾಟ್ ಸಡಕ್-2 ಅಭಿಯಾನ ಆರಂಭಿಸಿದ್ದು, ಮಹೇಶ್ ಭಟ್‍ರ ಸ್ವಜನ ಪಕ್ಷಪಾತಕ್ಕೆ ಕಿಡಿಕಾರಿದ್ದಾರೆ.


ಇತ್ತೀಚೆಗೆ ಸಾವನ್ನಪ್ಪಿದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‍ಗೆ ಮಹೇಶ್ ಭಟ್ ಮಾನಸಿಕ ಕಿರುಕುಳ ನೀಡಿದ್ದಾರೆ. ಅವರ ಸಾವಿಗೆ ಮಹೇಶ್ ಭಟ್ ಅವರೇ ಪರೋಕ್ಷ ಕಾರಣ. ಹೀಗಾಗಿ ಸಡಕ್-2 ಬಹಿಷ್ಕರಿಸಿ, ಸುಶಾಂತ್ ರಜಪೂತ್ ಸಾವಿಗೂ ಮುನ್ನ ಅಭಿನಯಿಸಿರುವ ‘ದಿಲ್ ಬೇಚಾರಾ’ ಆಯ್ಕೆ ಮಾಡಿಕೊಳ್ಳಿ ಎಂದು ನೆಟ್ಟಿಗರು ಪೋಸ್ಟ್ ಮಾಡಿದ್ದಾರೆ.

1991ರಲ್ಲಿ ಸೂಪರ್ ಹಿಟ್ ಆಗಿದ್ದ ಮಹೇಶ್ ಭಟ್‍ರ ರೋಮ್ಯಾಂಟಿಕ್ ಚಿತ್ರದ ಮುಂದುವರೆದ ಭಾಗವಾಗಿ ಸಕಡ್-2 ತೆರೆಗೆ ಬರುತ್ತಿದೆ. ನಿನ್ನೆಯಷ್ಟೇ ಅಲಿಯಾ ಭಟ್ ಇಂದು ಸಡಕ್-2 ಪೋಸ್ಟರ್ ಬಿಡುಗಡೆಯಾಗಲಿದೆ, ಖಂಡಿತ ನಿಮಗೆ ಇಷ್ಟವಾಗಲಿದೆ ಎಂದು ವಿಡಿಯೋ ಮಾಡಿ ಇನ್‍ಸ್ಟಾಗ್ರಾಂನಲ್ಲಿ ಅಪ್‍ಲೋಡ್ ಮಾಡಿದ್ದರು. ವಿಡಿಯೋಗೆ ಕಮೆಂಟ್ ಬಾಕ್ಸನ್ನು ಸೀಮಿತಗೊಳಿಸಿದ್ದರು. ಹೀಗಾಗಿ ಒಂದೇ ಒಂದು ಕಮೆಂಟ್ ಬಂದಿದೆಯಂತೆ.

ಸಂಜೆ ಹೊತ್ತಿಗೆ ಮಹೇಶ್ ಭಟ್ ಸಡಕ್-2 ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಂತೆ bycott sadak-2, bycott ಅಲಿಯಾ ಭಟ್, bycott ಮಹೇಶ್ ಭಟ್ ಎಂದು ನೆಟ್ಟಿಗರು ಟ್ವೀಟ್ ಅಭಿಯಾನ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This