ADVERTISEMENT
Friday, March 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪೀರ ಕರೀಮರ ಬಾಳಲ್ಲೂ ಬೆಳಕು ಮೂಡಿಸಿದ ಸದಾಶಿವಯೊಗಿಗಳು: ನಮ್ಮಿಂದ ಮರೆಯಾದ ಸತ್ಯಶೋಧಕ

Namratha Rao by Namratha Rao
October 31, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಕೃಪೆ – ಹಿಂಡವಿ

ನಮ್ಮ ನಡುವಿನ ಸಾಧಕರು:

Related posts

ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ

ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ

March 27, 2026
ವಾಹನ ನೋಂದಣಿ ತೆರಿಗೆ ಇಳಿಕೆ: ತಿದ್ದುಪಡಿ ವಿಧೇಯಕ ಅಂಗೀಕಾರ

ವಾಹನ ನೋಂದಣಿ ತೆರಿಗೆ ಇಳಿಕೆ: ತಿದ್ದುಪಡಿ ವಿಧೇಯಕ ಅಂಗೀಕಾರ

March 27, 2026

ಪೀರ ಕರೀಮರ ಬಾಳಲ್ಲೂ ಬೆಳಕು ಮೂಡಿಸಿದ ಸದಾಶಿವಯೊಗಿಗಳು: ನಮ್ಮಿಂದ ಮರೆಯಾದ ಸತ್ಯಶೋಧಕ

 

ಹಂಪಿ ವಿರೂಪಾಕ್ಷ ದೇವಸ್ಥಾನದ ಹಿಂಬದಿಯಲ್ಲಿ, ಪಕ್ಕದಲ್ಲೇ ಹರಿಯುತ್ತಿರುವ ತುಂಗಭದ್ರಾ ನದಿಯ ಅಂಚಿನಲ್ಲಿ ಸದಾಶಿವ ಯೋಗಿಗಳ ಆಶ್ರಮ. ಚಿಕ್ಕ ಬಾಗಿಲು ದಾಟಿ ಒಳ ಪ್ರವೇಶಿಸುತ್ತಿದ್ದಂತೆಯೇ ಬೋರ್ಡು; “ಕಾಲಿಗೆ ಬಿದ್ದು ನಮಸ್ಕರಿಸುವುದನ್ನು ನಿಷೇಧಿಸಲಾಗಿದೆ”. ಹಂಪಿ ವಾಸಿಗಳ ಪಾಲಿಗೆ “ಆಶ್ರಮದ ತಾತ” ಎಂದೇ ಹೆಸರಾಗಿದ್ದ ಇವರದು ಶುದ್ಧ ಬಿಳಿಯ ಉಡುಗೆ. ನೀಳಕಾಯಕ್ಕೊಪ್ಪುವ ನೀಳ ಗಡ್ಡ. ಸದಾ ಪ್ರಖರ ಕಣ್ಣುಗಳಲ್ಲಿ ಮಿನುಗುವ ತೇಜಸ್ಸು. 

 

1996-97ರ ಸುಮಾರು ಇರಬೇಕು. ಸಂಪೂರ್ಣ ಸಾಕ್ಷರತಾ ಆಂದೋಲನದ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ನಾವು ಕ್ರಿಯಾಶೀಲರಾಗಿದ್ದ ದಿನಗಳವು. “ಅಕ್ಷರ ವಿಜಯ” ದ ನವಸಾಕ್ಷರರ ಪೂರಕ ಪಠ್ಯ ರಚನೆಗಾಗಿ ಬಳ್ಳಾರಿ ಜಿಲ್ಲೆಯ ಸಾಹಿತಿ ಬರಹಗಾರರು ಕೆಲದಿನ ಇದೇ ಆಶ್ರಮದಲ್ಲಿ ತಂಗಿದ್ದೆವು. ಆಗಲೇ ನನಗೆ ಈ ಯೋಗಿಗಳನ್ನು ಹತ್ತಿರದಿಂದ ಕಾಣುವಂತಾದದ್ದು. ಸ್ವಾಮೀಜಿ, ಯೋಗಿಗಳು ಎನ್ನುವವರು ಹೀಗೆಯೂ ಇರುತ್ತಾರೆ ಎಂಬುದು ಮನವರಿಕೆಯಾದದ್ದು. 

ಆ ನಂತರವಷ್ಟೇ ನಮ್ಮ ಬಂಡಾಯದ ಹಿರಿಯರ ಮೂಲಕವೇ ನನಗೆ ಇವರ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರಗಳನ್ನು ತಿಳಿದು ಶಿವಯೋಗಿಗಳ ಬಗ್ಗೆ ಗೌರವವನ್ನು ಹೆಚ್ಚಿಸಿಕೊಂಡೆ. ನಿಜವೆಂದರೆ ಇವರು ಧರ್ಮ, ಧಾರ್ಮಿಕ ವ್ಯವಸ್ಥೆಯ ಒಳಗಿನ ಬಂಡಾಯಗಾರರು. ಸ್ವರ್ಗ, ನರಕ, ಪಾಪ ಪುಣ್ಯ, ಮಠೀಯತೆ, ಪೂಜೆ, ಸಮಾರಾಧನೆ, ಅವತಾರ, ಪವಾಡಗಳು, ಎಲ್ಲವನ್ನೂ ಸ್ಪಷ್ಟ ತಿಳುವಳಿಕೆಯ ಮೂಲಕ ನಿರಾಕರಿಸುವ ಖಚಿತತೆ ಇವರದಾಗಿತ್ತು. ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲೆಂದು ಹಿಮಾಲಯಕ್ಕೆ ಹೋಗಿ, ಧ್ಯಾನ ಸಾಧನೆ ಮಾಡಿ, ಸತ್ಯದ ಸಾಕ್ಷಾತ್ಕಾರ ಮಾಡಿಕೊಂಡು ಮರಳಿದ್ದರು. ಇವರ ಈ ಜ್ಞಾನ ಕಾರಣದಿಂದಾಗಿಯೇ ವಿಚಾರವಾದಿಗಳ ಪ್ರಶಂಸೆಗೆ ಪಾತ್ರರಾಗಿದ್ದರು. 

 

ಸದಾಶಿವಯೋಗಿಗಳು ಲೇಖಕರೂ ಆಗಿದ್ದರು. “ಶಿರವೇ ಬ್ರಹ್ಮಾಂಡ ಜಗವೇ ಪಿಂಡಾಂಡ”, ” ಭಾರತೀಯರಿಗೆ ಭಗವಂತರೆಷ್ಟು” “ಶೈವ ತತ್ವ” ಕೃತಿಗಳನ್ನು ಇವರು ರಚಿಸಿದ್ದರು. ಭಾರತೀಯರಿಗೆ ಭಗವಂತರೆಷ್ಟು ಕೃತಿಯ ಕುರಿತು ಕೃದ್ಧರಾದ ಮತಾಂಧರು ಇವರನ್ನು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ್ದರೂ ಕ್ಷಮೆ ಕೇಳದೇ ತಮ್ಮ ವೈಚಾರಿಕತೆಯನ್ನು ಸಮರ್ಥಿಸಿಕೊಂಡಿದ್ದರು. 

ಕನ್ನಡ ವಿಶ್ವವಿದ್ಯಾಲಯ ಆರಂಭದ ದಿನಗಳಲ್ಲಿ ಮೊದಲ ಕುಲಪತಿಗಳಾಗಿ ನಿಯುಕ್ತರಾದ ಚಂದ್ರಶೇಖರ ಕಂಬಾರರು ಸದಾಶಿವಯೋಗಿಗಳೊಂದಿಗೆ ಚರ್ಚಿಸಿ ಸಲಹೆ ಮಾರ್ಗದರ್ಶನಗಳನ್ನು ಪಡೆದಿದ್ದರು. ರಂಜಾನ್ ದರ್ಗಾ ಅವರಿಗಂತೂ ಇವರ ಬಗ್ಗೆ ಅಪಾರ ಗೌರವ. ನನ್ನ ಕವನ ಸಂಕಲನ “ಜಾಲಿ ಹೂಗಳ ನಡುವೆ”ಯನ್ನು ತಮ್ಮ ಲೋಹಿಯಾ ಪ್ರಕಾಶನದ ಮೂಲಕ ಪ್ರಕಟಿಸಿದ ಸಿ.ಚನ್ನಬಸವಣ್ಣ ಅವರು ಸದಾಶಿವಯೋಗಿಗಳ ಬಗ್ಗೆ ಪುಸ್ತಕ ಬರೆದುಕೊಡುವಂತೆ ಆಗಲೇ ಕೆಲಸ ಒಪ್ಪಿಸಿದ್ದರು. ಒಪ್ಪಿಕೊಂಡ ನಾನು ಒಂದೆರಡು ಬಾರಿ ಆಶ್ರಮಕ್ಕೆ ಹೋಗಿ, ಕುಳಿತು ಮಾತಾಡಿಕೊಂಡೂ ಬಂದಿದ್ದೆ. ನಿಜವೆಂದರೆ ಆ ದಿನಗಳಲ್ಲಿ ಅಂತಹ‌ ಸಾಧಕರೊಂದಿಗೆ ವ್ಯವಧಾನದಿಂದ ಕುಳಿತುಕೊಳ್ಳುವ ವಯಸ್ಸಾಗಲಿ, ಅವರನ್ನು ಸಂದರ್ಶಿಸಲು ಬೇಕಾದ ಕನಿಷ್ಟ‌ ಜ್ಞಾನ ತರಬೇತಾಗಲಿ ನನಗಿರಲಿಲ್ಲ. ಹಿಡಿದ ಕೆಲಸ ಅರ್ಧಕ್ಕೇ ಬಿಟ್ಟಿದ್ದೆ. ಆದರೆ ಹಂಪಿಗೆ ಯಾವಾಗ ಹೋದರೂ ಆ ಆಶ್ರಮದ ದಾರಿಯಲ್ಲಿ ಸುತ್ತಾಡುವ, ಅದರ ಬಳಿ ಹಾಯುವ ಆಕರ್ಷಣೆ ಕಡಿಮೆಯಾಗಿರಲಿಲ್ಲ. ಕಳೆದ ಎರಡು ದಶಕದಿಂದೀಚೆಗೆ ತಾತನವರ ಆಶ್ರಮ ಕನ್ನಡ ವಿಶ್ವವಿದ್ಯಾಲಯದ ಹಿಂಭಾಗದ ಅರೆಕಾಡಿಗೆ ಸ್ಥಳಾಂತರಗೊಂಡಿತ್ತು. ಇತ್ತೀಚೆಗೆ ವಯೋಸಹಜ ಕಾರಣಗಳಿಂದಾಗಿ ಹೆಚ್ಚು ಓಡಾಡುತ್ತಿಲ್ಲ, ಮೆತ್ತಗಾಗಿದ್ದಾರಂತೆ” ಎಂಬ ಮಾತನ್ನು ಕೇಳುತ್ತಲೆ ಇದ್ದೆ.  

 

ಸದಾಶಿವಯೋಗಿಗಳಿಗೂ ನನ್ನ ಬಾಳ್ವೆಗೂ ಇರುವ ನಂಟಿನ ಬಗ್ಗೆಯೂ ಹೇಳಲೇಬೇಕು. ನನಗೆ ತನ್ನ ತಂಗಿಯನ್ನು ಕೊಟ್ಟು ಮದುವೆ ಮಾಡಿದ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಸಿಬ್ಬಂದಿ ನೌಕರರಾದ ಪಿ.ಕರೀಮ್, ಸದಾಶಿವಯೋಗಿಗಳ ನೇರ ಸೇವೆಗೈದ ಶಿಷ್ಯ. ಹಂಪಿಯ ಬೀದಿಗಳಲ್ಲಿ ಐಸ್ ವ್ಯಾಪಾರ ಮಾಡಿ, ಸಾಲು ಮಂಟಪಗಳಲ್ಲಿ ಬದುಕನ್ನು ಕಟ್ಟಿಕೊಂಡ ಕೆಲಸಗಾರನ ಮಗನಿಗೆ, ಓದಲು ತಮ್ಮ ಆಶ್ರಮದಲ್ಲಿ ಜಾಗನೀಡಿ ಆಶ್ರಯವನ್ನು ನೀಡಿದವರು ಸದಾಶಿವಯೋಗಿಗಳು. ಮನೆಗಿಂತ ಹೆಚ್ಚಾಗಿ ಆಶ್ರಮದಲ್ಲೇ ಇರುತ್ತಿದ್ದ ಈ ಹುಡುಗ ಎಸ್.ಎಸ್.ಎಲ್.ಸಿ ಮುಗಿಸುತ್ತಲೇ ಕುಲಪತಿ ಕಂಬಾರರಿಗೆ ಹೇಳಿ ಕೆಲಸ ಕೊಡಿಸಿದವರು ಈ ಪುಣ್ಯಾತ್ಮರು. ನೌಕರಿ ಕೊಡಿಸುವ ಮೂಲಕ ಈ ಕುಟುಂಬದ ಸಮಗ್ರ ಏಳಿಗೆಗೆ ಕಾರಣರಾದ ಸದಾಶಿವಯೋಗಿಗಳು ಈ ಕುಟುಂಬದ ಪಾಲಿಗೆ ದೈವ ಸಮಾನರು. ಕುಟುಂಬದ ಎಲ್ಲರ ಬಾಯಲ್ಲಿ ತಾತ ಎಂದೇ ಕರೆಯಲ್ಪಡುವ ಇವರ ಫೋಟೋ ಇವತ್ತಿಗೂ ಕರೀಂ ಅವರ ಮನೆಯ ಹಾಲ್ ನಲ್ಲಿದೆ. ನೌಕರಿ ಬಂದು ಎರಡು ದಶಕಗಳೇ ಕಳೆದರೂ ತಾತನವರ ಸೇವೆ ಮಾಡುತ್ತಲೇ ಇದ್ದ ಕರೀಂ ಇತ್ತೀಚೆಗಷ್ಟೇ ಯೋಗಿಗಳು ಕೃಶವಾಗಿದ್ದಾರೆ ಎಂಬ ಮಾತನ್ನು ಹೇಳಿದ್ದರು.

 

ನನ್ನ ಮಡದಿಯ ಪಾಲಿಗೆ ಪ್ರಾತಃಸ್ಮರಣೀಯರು ಸದಾಶಿವಯೋಗಿಗಳು. “ತಾತನವರ ಉಪಕಾರ ಇಲ್ಲದೇ ಹೋಗಿದ್ದರೆ ಈ ಹೊತ್ತಿಗೆ ನಮ್ಮ ಬದುಕು ಏನಾಗಿರುತ್ತಿತ್ತೋ, ಅವರಿಂದಲೇ ನಾವೆಲ್ಲ ಇಷ್ಟು ಕಾಣಲು ಸಾಧ್ಯವಾಯ್ತು” ಎಂದು ಸ್ಮರಿಸುವ ಈಕೆ “ಒಂದು ಸಲ ಹೋಗಿ ಮಾತಾಡಿಸಿಕೊಂಡು ಬರೋಣ” ಎಂದು ಹೇಳುತ್ತಲೇ ಇದ್ದಳು. ಆದರೆ ಹೋಗಲಾಗದ ನಮಗೆ ಅವರು “ಹೋದ” ಸುದ್ದಿ ಕೇಳುವಂತಾಯ್ತು. ನಾವು ಮದುವೆಯಾದ ಹೊಸತರಲ್ಲಿ, ಕಾರಟಗಿಯ ನಮ್ಮ ಮನೆಗೂ ತಮ್ಮ ಶಿಷ್ಯಬಳಗದೊಂದಿಗೆ ಬಂದು ನಮ್ಮ ಆತಿಥ್ಯ ಸ್ವೀಕರಿಸಿದ್ದರು ಯೋಗಿಗಳು. ಸದಾಶಿವಯೋಗಿಗಳನ್ನು ಮರೆಯಲಾದೀತೇ?

 

-ಪೀರ್‌ ಬಾವಾಜಿ, ಪ್ರಗತಿಪರ ಚಿಂತಕ, ಸಾಹಿತಿ ಕಾರಟಗಿ

Tags: #saakshatvachiversbengaluruindiakarnatakasadashivayogi
ShareTweetSendShare
Join us on:

Related Posts

ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ

ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ

by Shwetha
March 27, 2026
0

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಗಳ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಇರಾನ್–ಅಮೆರಿಕ ಹಾಗೂ ಇಸ್ರೇಲ್ ನಡುವಿನ ಯುದ್ಧದ...

ವಾಹನ ನೋಂದಣಿ ತೆರಿಗೆ ಇಳಿಕೆ: ತಿದ್ದುಪಡಿ ವಿಧೇಯಕ ಅಂಗೀಕಾರ

ವಾಹನ ನೋಂದಣಿ ತೆರಿಗೆ ಇಳಿಕೆ: ತಿದ್ದುಪಡಿ ವಿಧೇಯಕ ಅಂಗೀಕಾರ

by Shwetha
March 27, 2026
0

ರಾಜ್ಯದಲ್ಲಿ ವಾಹನ ನೋಂದಣಿ ತೆರಿಗೆಯನ್ನು ಇಳಿಸುವ ಮಹತ್ವದ ತಿದ್ದುಪಡಿ ವಿಧೇಯಕ ಅಂಗೀಕರಿಸಲಾಗಿದೆ. ಈ ಮೂಲಕ 2026-27ನೇ ಸಾಲಿನಲ್ಲಿ ಹೊಸ ವಾಹನಗಳ ನೋಂದಣಿಯಿಂದ ಸುಮಾರು ₹250 ಕೋಟಿ ಆದಾಯ...

ವಿಧಾನಸೌಧದಲ್ಲಿ ಐಪಿಎಲ್ ಗದ್ದಲ: ನಾವು ವಿಐಪಿಗಳು, ಕ್ಯೂನಲ್ಲಿ ನಿಲ್ಲಲ್ಲ! ಆರ್​ಸಿಬಿ ಟಿಕೆಟ್​ಗಾಗಿ ಪಟ್ಟು ಹಿಡಿದ ಶಾಸಕರು

ವಿಧಾನಸೌಧದಲ್ಲಿ ಐಪಿಎಲ್ ಗದ್ದಲ: ನಾವು ವಿಐಪಿಗಳು, ಕ್ಯೂನಲ್ಲಿ ನಿಲ್ಲಲ್ಲ! ಆರ್​ಸಿಬಿ ಟಿಕೆಟ್​ಗಾಗಿ ಪಟ್ಟು ಹಿಡಿದ ಶಾಸಕರು

by Shwetha
March 27, 2026
0

ಬೆಂಗಳೂರು: ರಾಜ್ಯದಲ್ಲಿ ಐಪಿಎಲ್ ಕ್ರಿಕೆಟ್ ಜ್ವರ ತಾರಕಕ್ಕೇರಿದ್ದು, ಈ ಬಿಸಿಯು ಈಗ ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧಕ್ಕೂ ವ್ಯಾಪಿಸಿದೆ. ಅಭಿಮಾನಿಗಳು ಟಿಕೆಟ್‌ಗಾಗಿ ಕ್ರೀಡಾಂಗಣದ ಹೊರಗೆ ಮತ್ತು ಆನ್‌ಲೈನ್‌ನಲ್ಲಿ...

ಬ್ರೋಕನ್ ಪಾಕಿಸ್ತಾನ ಇಂದು ಬ್ರೋಕರ್ ಆಗಲು ಮೋದಿಯೇ ಕಾರಣ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ

ಬ್ರೋಕನ್ ಪಾಕಿಸ್ತಾನ ಇಂದು ಬ್ರೋಕರ್ ಆಗಲು ಮೋದಿಯೇ ಕಾರಣ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ

by Shwetha
March 27, 2026
0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ಮತ್ತು ರಾಜತಾಂತ್ರಿಕ ವೈಫಲ್ಯಗಳಿಂದಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಸ್ಥಿರವಾಗಿದ್ದ ಪಾಕಿಸ್ತಾನವು ಇಂದು ಜಾಗತಿಕ...

ಮುಖ್ಯಮಂತ್ರಿಗಳ ಸಂಧಾನಕ್ಕೂ ಜಗ್ಗದ ಸಾದಿಕ್ ಅಖಾಡದಲ್ಲೇ ಉಳಿದ ಪೈಲ್ವಾನ್ : ಕೈ ಪಾಳೆಯದಲ್ಲಿ ನಡುಕ ಶುರು

ಮುಖ್ಯಮಂತ್ರಿಗಳ ಸಂಧಾನಕ್ಕೂ ಜಗ್ಗದ ಸಾದಿಕ್ ಅಖಾಡದಲ್ಲೇ ಉಳಿದ ಪೈಲ್ವಾನ್ : ಕೈ ಪಾಳೆಯದಲ್ಲಿ ನಡುಕ ಶುರು

by Shwetha
March 27, 2026
0

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯ ರಾಜಕೀಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ದಶಕಗಳಿಂದ ಶಾಮನೂರು ಕುಟುಂಬದ ಭದ್ರಕೋಟೆಯಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈಗ ಬಂಡಾಯದ ಬಿರುಗಾಳಿ ಎದ್ದಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram