ಸುನಿಲ್ ಚೆಟ್ರಿ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ಫುಟ್ಬಾಲ್ ತಂಡ ಸ್ಯಾಫ್ ಚಾಂಪಿಯನ್ಶಿಪ್ನಲ್ಲಿ ಎದುರಾಳಿ ಪಾಕಿಸ್ತಾನ ವಿರುದ್ಧ 4-0 ಗೋಲುಗಳಿಂದ ಗೆದ್ದು ಶುಭಾರಂಭ ಮಾಡಿತು. ಸುನಿಲ್ ಚೆಟ್ರಿ ಏಷ್ಯಾದಲ್ಲಿ ಅತಿ ಹೆಚ್ಚು ಗೋಲು ಹೊಡೆದ ಎರಡನೆ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ಪಂದ್ಯದ ಆರಂಭದಲ್ಲೆ ಭಾರತ ತಂಡ ಅನುಭವವನ್ನು ಬಳಸಿಕೊಂಡಿತು. ಸುನಿಲ್ ಚೆಟ್ರಿ ಎಂದಿನಂತೆ ಆಕ್ರಮಣಕಾರಿ ಆಟಕ್ಕಿಳಿದರು.ತವರಿನಲ್ಲಿ ಅಮೋಘ ಆಟ ಪ್ರದರ್ಶಿಸಿದರು. ಪಂದ್ಯ ಆರಂಭದ 10ನೇ ನಿಮಿಷದಲ್ಲಿ ಗೋಲು ಹೊಡೆದು ಆಘಾತ ನೀಡಿದರು. ನಂತರ 6 ನಿಮಿಷ ಬಳಿಕ ಪೆನಾಲ್ಟಿ ಅವಕಾಶ ಪಡೆದು ಗೋಲಾನ್ನಾಗಿ ಪರಿವರ್ತಿಸಿದರು. ಮೊದಲಾರ್ಧದಲ್ಲೆ ಹೆಚ್ಚು ಗೋಲುಗಳನ್ನು ಹೊಡೆಯಲು ಯೋಚಿಸಿತು. ಅವಕಾಶಗಳನ್ನು ಕೈಚೆಲ್ಲಿಕೊಂಡಿದ್ದರಿಂದ ಪಾಕ್ ತಂಡದ ಮೇಲೆ ಒತ್ತಡ ಹಾಕುವುದು ಅಷ್ಟು ಸುಲಭವಿರಲಿಲ್ಲ.
ಎರಡನೆ ಅವಯಲ್ಲಿ ಭಾರತ ದಾಳಿಯನ್ನು ಮುಂದುವರೆಸಿತು. 74ನೇ ನಿಮಿಷದಲ್ಲಿ ಮೂರನೆ ಗೋಲು ಹೊಡೆಯಿತು. ಪೆನಾಲ್ಟಿ ಅವಕಶಶ ಪಡೆದ ಭಾರತ ಸುನಿಲ್ ಚೆಟ್ರಿ ಅವರ ನೆರವಿನಿಂದ ಗೋಲು ದಾಖಲಿಸಿತು. ಸುನಿಲ್ ಚೆಟ್ರಿಕ್ ಹ್ಯಾಟ್ರಿಕ್ ಗೋಲು ಹೊಡೆದ ಸಾಧನೆ ಮಾಡಿದರು.
81ನೇ ನಿಮಿಷದಲ್ಲಿ ಸಂದೇಶ್ ಜಹಿನ್ಗಾನ್ ನೀಡಿದ ಪಾಸ್ ಅನ್ನು ಉದಂತಾ ಸಿಂಗ್ ಗೋಲು ಹೊಡೆದರು. ಭಾರತ ಶನಿವಾರ ನೇಪಾಳ ತಂಡವನ್ನು ಎದುರಿಸಲಿದೆ.
ಕುವೈತ್ ತಂಡ ಶುಭಾರಂಭ
ಸ್ಯಾಫ್ ಚಾಂಪಿಯನ್ಶಿಪ್ನ ಮೊದಲ ಪಂದ್ಯದಲ್ಲಿ ಕುವೈತ್ ತಂಡ ನೇಪಾಳ ವಿರುದ್ಧ 3-1 ಗೋಲುಗಳಿಂದ ಗೆದ್ದುಕೊಂಡಿತು.
ಇದೇ ಮೊದಲ ಬಾರಿಗೆ ಸ್ಯಾï ಚಾಂಪಿಯನ್ಶಿಪ್ ಆಡಿದ ಕುವೈತ್ ತಂಡ ನೇಪಾಳ ವಿರುದ್ಧ ಆರಂಭದಲ್ಲೆ ಸಂಪೂರ್ಣ ಹಿಡಿತ ಸಾಧಿಸಿ ಗೆಲುವು ದಾಖಲಿಸಿತು. ನೇಪಾಳ ತಂಡ ಕೂಡ ಪ್ರತಿರೋಧ ನೀಡಿತು. 23ನೇ ನಿಮಿಷದಲ್ಲಿ ಖಲೀದ್ ಹಾಜಿಹ ಗೋಲು ಹೊಡೆದು ಮುನ್ನಡೆ ನೀಡಿದರು. ನಂತರ 42ನೇ ನಿಮಿಷದಲ್ಲಿ ಶಾಬಿದ್ ಅಲ್ಕಹಾಲ್ಡಿ ಚಾಣಾಕ್ಷತನದಿಂದ ಗೋಲು ದಾಖಲಿಸಿದರು. ಮೊದಲಾರ್ಧದಲ್ಲಿ ಕುವೈತ್ ಮೇಲುಗೈ ಸಾಸಿತು. ಎರಡನೆ ಅವಧಿಯಲ್ಲಿ ನೇಪಾಳ ಬಲಿಷ್ಠವಾಗಿ ಕಂಡು ಬಂತು. 57ನೇ ನಿಮಿಷದಲ್ಲಿ ನೇಪಾಳ ಸನೀಶ್ ಶ್ರೇಷ್ಠ ಅವರ ನೆರವಿನಿಂದ ಗೋಲು ಹೊಡೆಯಲು ಪ್ರಯತನಿಸಿದರೂ ಆಗಲಿಲ್ಲ.
ಎಚ್ಚೆತ್ತ ಕುವೈತ್ 65ನೇ ನಿಮಿಷದಲ್ಲಿ ಮೊಹ್ಮದ ದಹಾಮ್ ಗೋಲು ಹೊಡೆದು ತಂಡದ ಅಂತರವನ್ನು ಹೆಚ್ಚಿಸಿದರು. ಇದಾದ ಮೂರನೆ ನಿಮಿಷದ ಬಳಿಕ ನೇಪಾಳ ತಂಡದ ಅಂಜಾನ್ ಬಿಸ್ಟಾ ಗೋಲು ಹೊಡೆದರು. ನಂತರ ಸಮಬಲದ ಪೈಪೋಟಿ ಬಂದಿದ್ದರಿಂದ ನಂತರ ಗೋಲುಗಳು ದಾಖಲಾಗಲಿಲ್ಲ.








