Sai Pallavi : ಕಾಲಿವುಡ್ ಸ್ಟಾರ್ ಹೀರೋ ಜೊತೆ ಸಾಯಿಪಲ್ಲವಿ ಸಿನ್ಮಾ
ನಾಯಕಿ ಸಾಯಿಪಲ್ಲವಿ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ.
ಅಂದದ ಜೊತೆಗೆ ಅಭಿನಯದ ಮೂಲಕ ಅದೆಷ್ಟೊ ಅಭಿಮಾನಿಗಳನ್ನು ಸಂಪಾದಿಸಿರುವ ಟಾಲಿವುಡ್ ನ ಲೇಡಿ ಪವರ್ ಸ್ಟಾರ್.
ಇತ್ತೀಚೆಗಷ್ಟೇ ಶ್ಯಾಮ್ ಸಿಂಗ ರಾಯ್ ಸಿನಿಮಾದ ಮೂಲಕ ಹಿಟ್ ಹೊಡೆದ ಸಾಯಿಪಲ್ಲವಿ ತಮ್ಮ ಮುಂಬರುವ ಚಿತ್ರ ವಿರಾಟಪರ್ವಂ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
ಈ ನಡುವೆ ಸಾಯಿಪಲ್ಲವಿ ತಮಿಳಿನಲ್ಲಿ ಪ್ರಾಜೆಕ್ಟ್ ವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.
ಈ ಚಿತ್ರವನ್ನು ಕಮಲ್ ಹಾಸನ್ ನಿರ್ಮಿಸುತ್ತಿದ್ದು, ಶಿವ ಕಾರ್ತಿಕೇಯನ್ ನಾಯಕನಾಗಿ ನಟಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಚಿತ್ರಕ್ಕೆ ‘ಮಾವೀರನ್‘ ಎಂಬ ಟೈಟಲ್ ಫೈನಲ್ ಮಾಡಲಾಗಿದೆಯಂತೆ.
ಸಾಯಿಪಲ್ಲವಿ ಅಭಿನಯದ ಕಮಲ್ ಹಾಸನ್ ನಿರ್ಮಾಣದ ಪ್ರಾಜೆಕ್ಟ್ ಆಗಿರುವುದರಿಂದ ಚಿತ್ರ ಈಗಾಗಲೇ ಹೈಪ್ ಕ್ರಿಯೇಟ್ ಮಾಡಿದೆ.
ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.