ಬಾಲಿವುಡ್ ನಟ ಸೈಫ್ ಅಲಿಖಾನ್ (Saif Ali Khan) ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿರುವ ಮಾಹಿತಿ ಸಿಕ್ಕಿದ್ದು, ಅವರೇ ಈ ಕುರಿತು ಮಾತನಾಡಿದ್ದಾರೆ.
ಸ್ವತಃ ಸೈಫ್ ಅಲಿ ಖಾನ್ ಈ ಕುರಿತು ಮಾತನಾಡಿದ್ದು, ಮೊಣಕಾಲಿಗೆ ಗಂಭೀರ ಗಾಯವಾಗಿ, ಭುಜದ ಮೂಳೆ ಕೂಡ ಮುರಿದಿದೆ ಎನ್ನಲಾಗಿತ್ತು. ಗಂಭೀರವಾಗಿಯೇ ಗಾಯವಾಗಿದ್ದರಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ ಎನ್ನುವ ವದಂತಿಗಳು ಹಬ್ಬಿದ್ದವು. ಆದರೆ, ಕೈಗೆ ಮಾತ್ರ ಪೆಟ್ಟಾಗಿದ್ದು, ಅದಕ್ಕೆ ಚಿಕಿತ್ಸೆ ಪಡೆಯಲಿದ್ದಾರೆ. ಭುಜದ ಮೂಳೆಗೆ ಯಾವುದೇ ಸಮಸ್ಯೆ ಆಗಿಲ್ಲ.
ದೇವರ ಸಿನಿಮಾದ ಶೂಟಿಂಗ್ ವೇಳೆ ಅಪಘಾತ ಸಂಭವಿಸಿತ್ತು. ಆನಂತರ ಕೈ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಸುಮ್ಮನಿದ್ದಿದ್ದರೆ ಕೈ ಕಳೆದುಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ. ಪತ್ನಿ ಕರೀನಾ (Kareena Kapoor) ಕೂಡ ಅವರ ಜೊತೆಯೇ ಇದ್ದು ಆರೈಕೆ ಮಾಡಿದ್ದಾರೆ. ಈಗ ಮರಳಿ ಚಿಕಿತ್ಸೆ ಪಡೆದು ಆಸ್ಪತ್ರೆಗೆ ಬಂದಿದ್ದಾರೆ.