ಸಮಂತಾ ಲಾಕ್‌ವುಡ್ – ಸಲ್ಲುಗೆ ಸಿಕ್ಕಳಾ ಹೊಸ ಗರ್ಲ್ ಫ್ರೆಂಡ್ ….

1 min read

ಸಮಂತಾ ಲಾಕ್‌ವುಡ್ – ಸಲ್ಲುಗೆ ಸಿಕ್ಕಳಾ ಹೊಸ ಗರ್ಲ್ ಫ್ರೆಂಡ್ ….

ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ವೈಯಕ್ತಿಕ ಜೀವನದ ಕುರಿತು ಸದಾ ಸುದ್ದಿಯಲ್ಲಿರುತ್ತಾರೆ. ನಾನೀಗ ಒಂಟಿಯಾಗಿದ್ದೇನೆ ಎಂದು ಹೇಳಿದ್ದರೂ, ಸಲ್ಮಾನ್  ಜೊತೆ ಬಾಲಿವುಡ್‌ನ ಹಲವಾರು ಸುಂದರ ನಟಿಯರೊಂದಿಗೆ  ಹೆಸರು ತಳುಕಿ ಹಾಕಿಕೊಂಡಿದೆ. . ಈಗ ಸಲ್ಮಾನ್ ಜೊತೆ ಮತ್ತೊಬ್ಬ ನಟಿ ಹೆಸರು ಕೇಳಿಬರುತ್ತಿದೆ. ಹಾಲಿವುಡ್ ನಟಿ ಸಮಂತಾ ಲಾಕ್‌ವುಡ್ ಜೊತೆಗಿನ ಡೇಟಿಂಗ್ ಕುರಿತಾಗಿ  ಸಲ್ಮಾನ್  ಮತ್ತೆ ಸುದ್ದಿಯಲ್ಲಿದ್ದಾರೆ.

salman khan girlfriend

ಇತ್ತೀಚೆಗಷ್ಟೇ ಹಾಲಿವುಡ್ ನಟಿ  ಸಮಂತಾ ಲಾಕ್ ವುಡ್ ಮತ್ತು ಸಲ್ಮಾನ್ ಖಾನ್ ಮದುವೆ ಸಮಾರಂಭವೊಂದರಲ್ಲಿ ಜೊತೆಯಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಚಿತ್ರಗಳು ಎಲ್ಲರ ಗಮನ ಸೆಳೆದಿದ್ದವು. ಇಷ್ಟು ಮಾತ್ರವಲ್ಲದೆ, ಖಾನ್ 56 ನೇ ಹುಟ್ಟುಹಬ್ಬದ ಆಚರಣೆಯಲ್ಲಿ  ಫಾರ್ಮ್‌ಹೌಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇಷ್ಟೇ ಸಾಕಾಗಿತ್ತು ಬಾಲಿವುಡ್ ಮಂದಿಗೆ, ಸಮಂತಾ ಸಲ್ಮಾನ್‌ನ ಹೊಸ ಗೆಳತಿ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

salmankhan

ಬಾಲಿವುಡ್ ಹಂಗಾಮಾದೊಂದಿಗಿನ ಸಂದರ್ಶನವೊಂದರಲ್ಲಿ, ಸಮಂತಾ ಲಾಕ್‌ವುಡ್,  ಸಲ್ಮಾನ್ ಅವರನ್ನು “ತುಂಬಾ ಒಳ್ಳೆಯ ವ್ಯಕ್ತಿ” ಎಂದು ಕರೆದಿದ್ದಾರೆ.  “ಜನರು ಮಾತನಾಡುತ್ತಾರೆ.  ನಾನು ಸಲ್ಮಾನ್ ಅವರನ್ನು ಭೇಟಿ ಮಾಡಿದ್ದೇನೆ, ಮತ್ತು ಅವರು ತುಂಬಾ ಒಳ್ಳೆಯ ವ್ಯಕ್ತಿ, ಜನರಿಗೆ ಈ ಆಲೋಚನೆ ಎಲ್ಲಿಂದ ಬರುತ್ತದೆ ಎಂದು ನನಗೆ ತಿಳಿದಿಲ್ಲ.  ನಾನು ಹೃತಿಕ್ ಅವರನ್ನು ಭೇಟಿ ಮಾಡಿದ್ದೇನೆ, ನನ್ನ ಮತ್ತು ಹೃತಿಕ್ ಬಗ್ಗೆ ಯಾರೂ ಏನನ್ನೂ ಹೇಳುವುದಿಲ್ಲ. ಹಾಗಾಗಿ ಈ ಸುದ್ದಿ ಎಲ್ಲಿಂದ ಬರುತ್ತದೆ ಎಂದು ನನಗೆ ತಿಳಿದಿಲ್ಲ ಆದರೆ ನಿಸ್ಸಂಶಯವಾಗಿ, ಅದು ಊಹೆಯಷ್ಟೆ ಎಮದು ಹೇಳಿದ್ದಾರೆ.

ಸಮಂತಾ ಲಾಕ್‌ವುಡ್ ಒಬ್ಬ ಅಮೇರಿಕನ್ ನಟಿ ಮತ್ತು ರೂಪದರ್ಶಿ. ಆಕೆಯ ಅದ್ಭುತ ನಟನೆ ಮತ್ತು ಸೌಂದರ್ಯದಿಂದ  ಜನಪ್ರಿಯರಾಗಿದ್ದಾರೆ. ಪ್ರಸ್ತುತ, ಅವರು  “ಶೂಟ್ ದಿ ಹೀರೋ” ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಸಲ್ಮಾನ್ ಖಾನ್ ಕೊನೆಯ ಬಾರಿಗೆ ಆಯುಷ್ ಶರ್ಮಾ ಅವರೊಂದಿಗೆ ಆಂತಿಮ್: ದಿ ಫೈನಲ್ ಟ್ರುತ್ ನಲ್ಲಿ ಕಾಣಿಸಿಕೊಂಡರು. ಅವರ ಮುಂದಿನ ಚಿತ್ರಗಳ ಸಾಲಿನಲ್ಲಿ  ಕತ್ರಿನಾ ಕೈಫ್ ಜೊತೆ ಟೈಗರ್ 3 ಸಿನಿಮಾ ಇದೆ. ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಮುಂಬರುವ ಚಿತ್ರ ಪಠಾಣ್‌ನಲ್ಲಿ ಸಲ್ಮಾನ್ ಅತಿಥಿ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd