ಸಲ್ಲುಗೆ ಹಾವು ಕಚ್ಚಿದ್ದು ಹೇಗೆ..? ಅಸಲಿ ಕಹಾನಿ ಏನ್ ಗುರೂ..? ಹಾವಿನ ಕಥೆಯೇನು..? Salman Khan saaksha tv
ನಟ ಸಲ್ಮಾನ್ ಖಾನ್ ಅವರಿಗೆ ಹಾವು ಕಚ್ಚಿದ್ದು, ಸದ್ಯ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಸಲ್ಲುಗೆ ತಮ್ಮ ಒಡೆತನದ ಪನ್ವೆಲ್ ಫಾರ್ಮ್ ಹೌಸ್ ನಲ್ಲಿ ಹಾವು ಕಚ್ಚಿತ್ತು. ಕೂಡಲೇ ಅವರನ್ನು ಮುಂಬೈನ ಕಾಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸುದ್ದಿಯಿಂದ ಸಲ್ಮಾನ್ ಖಾನ್ ಅಭಿಮಾನಿಗಳು ಫುಲ್ ಆತಂಕಗೊಂಡಿದ್ದಾರೆ. ಸಲ್ಲುಗೆ ಏನಾಯ್ತು..? ಅವರು ಆರೋಗ್ಯವಾಗಿದ್ದಾರಾ ಅಂತ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಇನ್ನೊಂದೆಡೆ ಸಲ್ಲುಗೆ ಹಾವು ಕಚ್ಚಿದ ಸುದ್ದಿಯ ವಿಚಾರವಾಗಿ ಸಾಕಷ್ಟು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ಅಸಲಿಗೆ ಸಲ್ಲುಗೆ ಹಾವು ಕಚ್ಚಿದ್ದು ಹೇಗೆ..? ಕಚ್ಚಿದ ಹಾವು ಬದುಕಿದ್ಯಾ..? ಓ ದೇವರೇ ಆ ಹಾವಿಗೆ ಏನಾಗಬಾರದು..! ಸದ್ಯ ಹಾವಿಗೆ ಏನು ಆಗಿಲ್ವಾ..? ಅಂತ ಕಮೆಂಟ್ ಗಳನ್ನ ಮಾಡುತ್ತಿದ್ದಾರೆ.
ಮತ್ತೊಂದೆಡೆ ಸಲ್ಲು ಹಾವಿನ ಬಳಿ ಯಾಕೆ ಹೋದ್ರು..? ಕತ್ರಿನಾ ಮದುವೆಯಿಂದ ಸಲ್ಲು ಏನಾದ್ರೂ ಮಾಡಿಕೊಂಡ್ರಾ ಅನ್ನೋ ಪ್ರಶ್ನೆಗಳನ್ನ ನೆಟ್ಟಿಗರು ಕೇಳುತ್ತಿದ್ದಾರೆ.