‘#Shame on You Samantha’ – ಟ್ರೋಲ್ ಆಗುತ್ತಿರುವುದೇಕೆ ಅಕ್ಕಿನೇನಿ ಸೊಸೆ…!
ದಕ್ಷಿಣ ಬಾರತದ ಖ್ಯಾತ ನಟಿ ಸಮಂತಾ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.. ಹಾಗೇ ನೋಡೋಕೋದ್ರೆ ಸ್ಯಾಮ್ ಗೆ ಎಷ್ಟು ಫ್ಯಾನ್ಸ್ ಇದ್ದಾರೋ ಅಷ್ಟೇ ಪ್ರಮಾಣದಲ್ಲಿ ಅವರನ್ನ ಟ್ರೋಲ್ ಮಾಡೋರು ಇದ್ದಾರೆ.. ಹೆಚ್ಚಾಗಿ ಟ್ರೋಲ್ ಗಳಿಂದಲೇ ಸಮಂತಾ ಸುದ್ದಿಯಲ್ಲಿರುತ್ತಾರೆ.. ಇದೀಗ ಮತ್ತೆ ಟ್ರೋಲ್ ಪೇಜ್ ಗಳಲ್ಲಿ ರಾರಾಜಿಸುತ್ತಿದ್ದಾರೆ ಅಕ್ಕಿನೇನಿ ಸೊಸೆ.
ಟ್ರೋಲ್ ಗೆ ಕಾರಣ ‘ದಿ ಫ್ಯಾಮಿಲಿ ಮ್ಯಾನ್’ ಸೀಸನ್ 2 ವೆಬ್ ಸರಣಿ… ಈ ವೆಬ್ ಸರಣಿಗೆ ತಮಿಳುನಾಡಿನಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಜೂನ್ 4 ರಂದು ಅಮೇಜಾನ್ ಪ್ರೈಮ್ನಲ್ಲಿ ಈ ವೆಬ್ ಸಿರೀಸ್ ಬಿಡುಗಡೆಯಾಗುತ್ತಿದೆ.. ಆದ್ರೆ ಇದರ ಬಿಡುಗಡೆ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ಹೆಚ್ಚಾಗಿದೆ.
ಸಮಂತಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿನ್ನೆಲೆ ಸಮಂತಾ ವಿರುದ್ಧ ಟೀಕಾಕಾರರು ಶೇಮ್ ಆನ್ ಯೂ ಸಮಂತಾ #Shame on You Samantha ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ವಿರುದ್ಧ ತೀವ್ರ ವೈಯಕ್ತಿಕವಾಗಿ ದಾಳಿ ನಡೆಯುತ್ತಿದ್ದು, ಫೋಟೋ ಬಳಸಿ ಟ್ರೋಲ್ ಮಾಡಲಾಗುತ್ತಿದೆ.
ಆಕ್ರೋಶಕ್ಕೆ ಕಾರಣವೇನು..?
‘ದಿ ಫ್ಯಾಮಿಲಿ ಮ್ಯಾನ್’ ಸೀಸನ್ 1 ಹಿಟ್ ಆದ ಬಳಿಕ ಸೀಸನ್ 2 ತಯಾರಾಗಿದೆ. ಇದರಲ್ಲಿ ಸಮಂತಾ LTTE ಉಗ್ರಳ ಪಾತ್ರ ನಿಭಾಯಿಸಿದ್ದಾರೆ. ಬಾಲಿವುಡ್ ನಟ ಮನೋಜ್ ಬಾಜಪೇಯಿ TASC ಯ ಏಜೆಂಟ್ ಪಾತ್ರ ನಿರ್ವಹಿಸಿದ್ದಾರೆ. ಈ ಸರಣಿಯಲ್ಲಿ ತಮಿಳು ಜನರಿಗೆ ಅವಮಾನ ಮಾಡಲಾಗಿದೆ, ತಮಿಳಿಗರು ಉಗ್ರರೆಂದು ಬಿಂಬಿಸಲಾಗಿದೆ. ಪಾಕಿಸ್ತಾನದ ಐಎಸ್ಐ ಜೊತೆ ನಂಟಿದೆ ಎಂದು ತೋರಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದನ್ನು ನಿಷೇಧಿಸಬೇಕು ಎಂಬ ಕೂಗು ಈಗ ಜೋರಾಗಿದೆ.
ಟ್ರೋಲ್ ಗಳ ನಡುವೆ #Wesupportsamantha ಕೂಡ ಟ್ರೆಮಡ್ ಆಗ್ತಿದೆ. ಸಮಂತಾಗೆ ಅಭಿಮಾನಿಗಳು ಬೆಂಬಲಿಸುತ್ತಿದ್ದಾರೆ. ಅಲ್ಲದೇ ಸಮಂತಾ ಮತ್ತು ‘ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್’ ವಿರೋಧಿಸುತ್ತಿರುವ ಮಂದಿಗೆ ಅಭಿಮಾನಿಗಳು ತಿರುಗೇಟು ಕೊಡುತ್ತಿದ್ದಾರೆ. ನಾವು ಸಮಂತಾ ಪರವಾಗಿದ್ದೇವೆ ಎಂದು ಸಪೋರ್ಟ್ ಮಾಡ್ತಿದ್ದಾರೆ.