ಗಟ್ಟಿಗಿತ್ತಿ ಸಮಂತಾ ಬೆನ್ನ ಹಿಂದೆ ನಿಂತ ಟಾಲಿವುಡ್ ನ ಇಬ್ಬರು ಸೂಪರ್ ಸ್ಟಾರ್ಸ್..!
ಪತಿ ನಾಗಚೈತನ್ಯ ಜೊತೆಗೆ ವಿಚ್ಛೇಧನದ ಬಳಿಕ ಎಷ್ಟೇ ಟೀಕೆಗಳಾದ್ರೂ , ಟ್ರೋಲ್ ಗೆ ಗುರಿಯಾದ್ರೂ ಕೂಡ , ಸಮಂತಾ ಕುಗ್ಗದೇ ತಮ್ಮ ವೃತ್ತಿ ಬದುಕಿನಲ್ಲಿ ಮುನ್ನುಗುತ್ತಿದ್ದಾರೆ.. ಆದ್ರೆ ಕೆಲ ದಿನಗಳ ಹಿಂದೆ ಡಿವೋರ್ಸ್ ನಿಂದ ತಾವು ಅನುಭವಿಸಿದ ನೋವನ್ನ ಸ್ಯಾಮ್ ಬಿಚ್ಚಿಟ್ಟದ್ದರು.. ಆದ್ರೂ ಕೂಡ ನಾಗಚೈತನ್ಯ ಅಭಿಮಾನಿಗಳು ಸಮಂತಾರನ್ನ ಟೀಕಿಸುವುದು ಬಿಟ್ಟಿಲ್ಲ.. ಆದ್ರೂ ಸ್ಯಾಮ್ ಮಾತ್ರ ಗಟ್ಟಿಗಿತ್ತಿ ಎನ್ನುವುದನ್ನ ತೋರಿಸಿದ್ದಾರೆ..
ಈ ನಡಡುವೆ ಟಾಲಿವುಡ್ ನ ಇಬ್ಬರು ಸೂಪರ್ ಸ್ಟಾರ್ ಗಳಾದ ಮೆಗಾ ಫ್ಯಾಮಿಲಿಯ ಬ್ಬರು ಸದಸ್ಯರು ಸಮಂತಾ ಬೆನ್ನಿಗೆ ನಿಂತಿದ್ದಾರೆ.. ಹೌದು ಅವರು ಮತ್ಯಾರೂ ಅಲ್ಲ ಟಾಲಿವುಡ್ ನ ಕಾನ್ ಸ್ಟಾರ್ ಅಲ್ಲು ಅರ್ಜುನ್ , ಮೆಗಾ ಪವರ್ ಸ್ಟಾರ್ ರಾಮ್ ಚರಣ್.. ಸಮಂತಾ ಬಗ್ಗೆ ರಾಮ್ ಚರಣ್ ಸಂದರ್ಶನ ಒಂದ್ರಲ್ಲಿ ಮಾತನಾಡಿದ್ದು , ಕಮ್ ಬ್ಯಾಕ್ , ಬಿಗ್ಗರ್ , ಮೋರ್ ಸ್ಟ್ರಾಂಗರ್ ( ಮತ್ತಷ್ಟು ಗಟ್ಟಿಗಿತ್ತಿಯಾಗಿ , ದೊಡ್ಡ ಮಟ್ಟದಲ್ಲಿ ಕಮ್ ಬ್ಯಾಕ್ ಮಾಡು ) ಎಂದಿದ್ದಾರೆ..
ವಿಷ್ಣು ವರ್ಧನ್ 12ನೇ ಪುಣ್ಯಸ್ಮರಣೆ : 5000 ಅಭಿಮಾನಿಗಳಿಂದ ನೇತ್ರದಾನ
ಇನ್ನೂ ಪುಷ್ಪ ಸಿನಿಮಾದ ಕಾರ್ಯಕ್ರಮದಲ್ಲಿ ವಿಶೇಷ ಹಾಡು ಊ ಅಂಟಾವಾ ಮಾವ ಹೂ ಅಂಟಾವಾ ಮಾವ ವಿಶೇಷ ಹಾಡಿನ ಬಗ್ಗೆ ಮಾತನಾಡಿದ್ದಾಗ ಅಲ್ಲು ಸಮಂತಾರನ್ನ ಕೊಂಡಾಡಿದ್ರು.. ಈ ಹಾಡನ್ನ ಮಾಡುವಾಗ ಸಮಂತಾರಿಗೆ ಸಾಕಷ್ಟು ಅನುಮಾನ ಗೊಂದಲಗಳಿದ್ದವು.. ಆದ್ರೆ ಸಿನಿಮಾದ ತಂಡದ ಮೇಲೆ ನಂಬಿಕೆಯಿಟ್ಟು ಒಪ್ಪಿದ್ರು ಎಂದು ಹೇಳಿಕೊಂಡಿದ್ದರು.. ಇದಕ್ಕೆ ಟ್ವೀಟ್ ಮೂಲಕ ಪ್ರತರಿಕ್ರಿಯೆ ನೀಡಿದ್ದ ಸಮಂತಾ ಇನ್ಮುಂದೆ ನಿಮ್ಮನ್ನ ಸದಾ ನಂಬುತ್ತೇನೆ ಎಂದಿದ್ರು..








