ವಿಷ್ಣು ವರ್ಧನ್ 12ನೇ ಪುಣ್ಯಸ್ಮರಣೆ : 5000 ಅಭಿಮಾನಿಗಳಿಂದ ನೇತ್ರದಾನ
ಇಂದು ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಪುಣ್ಮಸ್ಮರಣೆ ಹಿನ್ನೆಲೆ ಅಭಿಮಾನಿಗಳು ರಾಜ್ಯದ್ಯಂತ ಬೇರೆ ಬೇರೆ ಅರ್ಥಪೂರ್ಣ ರೀತಿಯಲ್ಲಿ ವಿಷ್ಣುವರ್ಧನ್ ಅವರಿಗೆ ಗೌರವ ಸಮರ್ಪಿಸುತ್ತಿದ್ದಾರೆ.. ಅಭಿಮಾನ್ ಸ್ಟುಡಿಯೋದಲ್ಲಿ ಅನ್ನದಾನ ಮಾಡಿಸಿದ್ದಾರೆ..
ಡಿಸೆಂಬರ್ 30 /2009 ರಂದು ವಿಷ್ಣು ದಾದ ಕರುನಾಡಿನ ಜನತೆಯನ್ನ ಅಗಲಿದ್ದರು.. ಇದೀಗ ಇಂದು ಅವರ 12ನೇ ಪುಣ್ಯತಿಥಿಯಾದ ಪರಿಣಾಮ ರಾಜ್ಯದ ಮೂಲೆ ಮೂಲೆಗಳಲ್ಲಿ ವಿಷ್ಣು ಅಭಿಮಾನಿಗಳು ರಕ್ತದಾನ , ನೇತ್ರದಾನ, ಅನ್ನದಾನ ಸೆರಿದಂತೆ ನಾನಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ವಿಷ್ಣುವರ್ಧನ್ ಅವರಿಗೆ ಪೂಜೆ ಸಲ್ಲಿಸಿದ್ದಾರೆ..
ವಿಶೇಷ ಅಂದ್ರೆ ಇಂದು ರಾಜ್ಯದ ಮೂಲೆ ಮೂಲೆಯಿಂದ ಟ್ಟಾರೆ 5000 ಜನ ಅಭಿಮಾನಿಗಳು ನೇತ್ರದಾನಕ್ಕೆ ಹೆಸರು ನೊಂದಣಿ ಮಾಡಿಕೊಳ್ಳಲಿದ್ದಾರೆ.. ಹೌದು.. ರಾಜ್ಯದಂತದಿಂದ ವಿಷ್ಣು ಸಮಿತಿಯ ಸುಮಾರು 5000 ಸದಸ್ಯರು ನೇತ್ರದಾನಕ್ಕೆ ನೊಂದಣಿ ಮಾಡಿಕೊಳ್ಳಲಿದ್ದಾರೆ..
ಚಿತ್ರಮಂದಿರಕ್ಕೆ ಬುರ್ಕಾ ತೊಟ್ಟು ಹೋಗಿದ್ದ ಸಾಯಿ ಪಲ್ಲವಿ : ವಿಡಿಯೋ ವೈರಲ್