ಚಿತ್ರಮಂದಿರಕ್ಕೆ ಬುರ್ಕಾ ತೊಟ್ಟು ಹೋಗಿದ್ದ ಸಾಯಿ ಪಲ್ಲವಿ : ವಿಡಿಯೋ ವೈರಲ್
ಸೌತ್ ಸಿನಿಮಾ ಇಂಡಸ್ಟ್ರಿಯ ನ್ಯೂಚರಲ್ ಬ್ಯೂಟಿ ಸಾಯಿ ಪಲ್ಲವಿ ಹಾಗೂ ನ್ಯಾಚುರಲ್ ನಟ ಅಂತಲೇ ಕರೆಸಿಕೊಳ್ಳುವ ಟಾಲಿವುಡ್ ಸ್ಟಾರ್ ನಾನಿ ಅಭಿನಯದ ‘ ಶ್ಯಮ್ ಸಿಂಗಾ ರಾಯ್’ ಸಿನಿಮಾ ಥಿಯೇಟರ್ ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದೆ..
ಈ ಸಿನಿಮಾಗೆ ಪ್ರೇಕ್ಷಕರ ರೆಸ್ಪಾನ್ಸ್ ನೋಡಲು ಖುದ್ದು ಸಾಯಿ ಪಲ್ಲವಿ ಬುರ್ಕಾ ತೊಟ್ಟು ಥಿಯೇಟರ್ ಗೆ ತೆರಳಿ ಆಡಿಯನ್ಸ್ ಮಧ್ಯವೇ ಕೂತು ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ..
ಡಿಸೆಂಬರ್ 24 ರಂದು ವಿಶ್ವಾದ್ಯಂತ ರಿಲೀಸ್ ಆಗಿರುವ ಈ ಸಿನಿಮಾ ಸಾಕಷ್ಟು ಅಡಚಣೆಗಳನ್ನ ಎದುರಿಸಿಯೂ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ತಿದೆ..
ಆಂಧ್ರದಲ್ಲಿರುವ ಶ್ರೀರಾಮುಲು ಸಿನಿಮಾ ಮಂದಿರಕ್ಕೆ ಬುರ್ಕಾ ತೊಟ್ಟು ಹೋಗಿದ್ದ ಸಾಯಿ ಪಲ್ಲವಿ ಬಳಿಕ ಹೊರ ಬಂದ ಮೇಲೆ ಬುರ್ಕಾ ತೆಗೆದಿದ್ದಾರೆ.. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..
#SaiPallavi Surprise Visit Sriramulu Theater 😍😎
Just Loved it ❤️ @Sai_Pallavi92@NameisNani @IamKrithiShetty#ShyamSinghaRoy pic.twitter.com/J558SXcmk5
— Mahesh తారక్_వీరాభిమాని🌊 (@maheshBujji9999) December 29, 2021