“ಪುಷ್ಪ”ದಲ್ಲಿ ಅಲ್ಲು ಜೊತೆ ಹೆಜ್ಜೆ ಹಾಕಲು ಇಷ್ಟುಂದು ಸಂಭಾವನೆ ಕೇಳಿದ್ರಾ…..! ಸಮಂತಾ..!
ಹೈದ್ರಾಬಾದ್ : ಅಲ್ಲು ಅರ್ಜುನ್ ಸಖತ್ ವಿಭಿನ್ನವಾಗಿ ಕಾಣಿಸಿಕೊಳ್ತಾಯಿರುವ ಬಹುನಿರೀಕ್ಷೆ ಪ್ಯಾನ್ ಇಂಡಿಯಾ ಚಿತ್ರ ಪುಷ್ಪ ಈಗಾಗಲೇ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ.. ಬಾಹುಬಲಿ , ಕೆಜಿಎಫ್ ಹಾದಿಯಲ್ಲಿ ಸಾಗಿರುವ ಚಿತ್ರ 2 ಸರಣಿಗಳಲ್ಲಿ ತೆರೆಕಾಣಲಿದೆ..
ಈ ನಡುವೆ ಸಿನಿಮಾ ತಂಡ ಇತ್ತೀಚೆಗೆ ಮತ್ತೊಂದು ವಿಶೇಷ ಸುದ್ದಿ ನೀಡಿ ಸಮಂತಾ ಫ್ಯಾನ್ಸ್ ಗೆ ಸಿಹಿ ಸುದ್ದಿ ನೀಡಿತ್ತು.. ಸಮಂತಾ ಸಿನಿಮಾದ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ತಾಯಿದ್ದು ಅಲ್ಲು ಅರ್ಜುನ್ ಜೊತೆಗೆ ಡ್ಯಾನ್ಸ್ ಮಾಡಲಿದ್ದಾರೆ ಎಂದು ಸಿನಿಮಾ ತಂಡ ತಿಳಿಸಿದೆ..
ಅಲ್ಲದೇ ಸಮಂತಾ, ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಸಿನಿಮಾ ಒಂದರಲ್ಲಿ ವಿಶೇಷ ಹಾಡಿಗೆಹೆಜ್ಜೆ ಹಾಕ್ತಿದ್ದಾರೆ. ಆದ್ರೆ ಸಮಂತಾ ಈ ಹಾಡಿನಲ್ಲಿ ಸೊಂಟ ಬಳುಕಿಸಲು ಭಾರೀ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಿನಿಮಾದಲ್ಲಿ 5 ನಿಮಿಷದ ಹಾಡಿಗೆ ಡ್ಯಾನ್ಸ್ ಮಾಡಲು ಬರೋಬ್ಬರಿ 1.50 ಕೋಟಿ ಹಣವನ್ನು ಸಮಂತಾ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಕೇವಲ ಐದು ನಿಮಿಷದ ಹಾಡಿಗೆ 1.50 ಕೋಟಿ ಸಂಭಾವನೆಯನ್ನು ಮೈತ್ರಿ ಮೂವೀಸ್ ನೀಡುತ್ತಿದೆಯಂತೆ. ಅಲ್ಲದೇ ಈ ಒಂದು ಹಾಡಿಗೆ ಸುಮಾರು 5 ಕೋಟಿ ಹಣವನ್ನು ಮೈತ್ರಿ ಮೂವೀಸ್ ಖರ್ಚು ಮಾಡುತ್ತಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಸಮಂತಾಗೂ ಮೊದಲು ಹಾಡಿನಲ್ಲಿ ನೃತ್ಯ ಮಾಡುವಂತೆ ಪೂಜಾ ಹೆಗ್ಡೆಯನ್ನು ಕೇಳಲಾಗಿತ್ತಂತೆ. ಆದರೆ ಪೂಜಾ ಹೆಗ್ಡೆ ಇನ್ನೂ ದೊಡ್ಡ ಮೊತ್ತದ ಸಂಭಾವನೆ ಕೇಳಿದರಂತೆ. ಅಲ್ಲದೇ ಪೂಜಾ ಹೆಗ್ಡೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಸಹ ಇರುವ ಕಾರಣ ಪೂಜಾ ಹೆಗ್ಡೆ ಬದಲಿಗೆ ಸಮಂತಾರನ್ನು ಚಿತ್ರತಂಡ ಕೇಳಿದೆ. ಈಗಾಗಲೇ ಸಿನಿಮಾದ 3 ಹಾಡುಗಳ ಪಂಚಭಾಷೆಗಳಲ್ಲಿ ರಿಲೀಸ್ ಆಗಿ ಎಲ್ಲಾ ಬಾಷೆಗಳಲ್ಲಿ ಹಿಟ್ಟ ಆಗಿದೆ.. ಸಿನಿಮಾದ ಐದನೇ ಹಾಡಿನಲ್ಲಿ ಸಮಂತಾ ನರ್ತಿಸಲಿದ್ದಾರೆ. ಸುಕುಮಾರನ್ ನಿರ್ದೇಶನದ ಅಲ್ಲು ಅರ್ಜುನ್ ರಶ್ಮಿಕಾ ನಟನೆಯ ಈ ಸಿನಿಮಾ ಡಿಸೆಂಬರ್ 17 ರಂದು ಪಂಚಭಾಷೆಗಳಲ್ಲಿ ತೆರೆಗೆ ಬರಲಿದೆ. ಅಲ್ಲದೇ ಈ ಸಿನಿಮಾವೂ ಸಹ ಕೆಜಿಎಫ್ ಬಾಹುಬಲಿ ಮಾದರಿಯಲ್ಲೇ 2 ಭಾಗಗಳಲ್ಲಿ ತೆರೆಕಾಣಲಿದೆ..








