‘ಸಾಮ್ರಾಟ್ ಪೃಥ್ವಿರಾಜ್’ VS ವಿಕ್ರಮ್ VS ಮೇಜರ್ – 3 ಚಿತ್ರಗಳಲ್ಲಿ ಯಾರಿಗೆ ಸಿಗಲಿದೆ ಪ್ರೇಕ್ಷಕರ ಒಲವು…
ಎರಡು ವರ್ಷಗಳ ನಂತರ ಈ ವರ್ಷ ಚಿತ್ರ ಜಗತ್ತು ಇನ್ನಷ್ಟು ಬಣ್ಣಗಳೊಂದಿಗೆ ಮರುಕಳಿಸಿದೆ. ಆ್ಯಕ್ಷನ್‌ನಿಂದ ರೊಮ್ಯಾಂಟಿಕ್‌ವರೆಗೆ ಎಲ್ಲಾ ಪ್ರಕಾರದ ಚಲನಚಿತ್ರಗಳು ನಿರಂತರವಾಗಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿವೆ. ಬಾಲಿವುಡ್ ಗೆ ಸೆಡ್ಡು ಹೊಡೆಯುವಂತೆ ಸೌತ್ ಚಿತ್ರಗಳ ಚಿತ್ರರಂಗವನ್ನ ಆಳುತ್ತಿವೆ. ಮತ್ತೊಂದು ಕಡೆ ಬಾಲಿವುಡ್ ನ ಘಟಾನುಘಟಿ ತಾರೆಯರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿವೆ.
ಈ ವಾರ ಮತ್ತೊಮ್ಮೆ ಬಾಲಿವುಡ್ ಮೇಲೆ ಸೌತ್ ಚಿತ್ರಗಳ ದಂಡಯಾತ್ರೆ ನಡೆಯಲಿದೆ. ಜೂನ್ 3 ರಂದು ಬೆಳ್ಳಿ ತೆರೆಯ ಮೇಲೆ ಅಕ್ಷಯ್ ಕುಮಾರ್ ಅಭಿನಯದ ‘ಸಾಮ್ರಾಟ್ ಪೃಥ್ವಿರಾಜ್’, ಕಮಲ್ ಹಾಸನ್ ಅವರ ‘ವಿಕ್ರಮ್’ ಮತ್ತು ಅಡಿವಿ ಶೇಷ್ ಅವರ ‘ಮೇಜರ್’ ಚಿತ್ರಗಳ ನಡುವೆ ಬಿಗ್ ಫೈಟ್ ನಡೆಯಲಿದೆ.
‘ಸಾಮ್ರಾಟ್ ಪೃಥ್ವಿರಾಜ್’,
ಬಾಲಿವುಡ್‌ನ ಕಿಲಾಡಿ ಕುಮಾರ್ ಅಂದರೆ ಅಕ್ಷಯ್ ಕುಮಾರ್ “ಬಚ್ಚನ್ ಪಾಂಡೆ” ನಂತರ ಜೂನ್ 3 ರಂದು ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ಅವರ ಮೆಗಾ-ಬಜೆಟ್ ನ ಐತಿಹಾಸಿಕ ಚಿತ್ರ ‘ಸಾಮ್ರಾಟ್ ಪೃಥ್ವಿರಾಜ್’ ಮೂಲಕ ಚಿತ್ರಮಂದಿರಗಳಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಚಿತ್ರವು ರಾಜ ಪೃಥ್ವಿರಾಜ್ ಚೌಹಾಣ್ ಅವರ ಜೀವನವನ್ನು ಆಧರಿಸಿದೆ. ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಕಿಂಗ್ ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ಮಾನುಷಿ ಛಿಲ್ಲರ್ ಸಂಯೋಗಿತಾ ಪಾತ್ರವನ್ನು ನಿರ್ವಹಿಸುವ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಅಕ್ಷಯ್ ಮತ್ತು ಮಾನುಷಿ ಅವರಲ್ಲದೆ, ಸೋನು ಸೂದ್, ಸಂಜಯ್ ದತ್, ಅಶುತೋಷ್ ರಾಣಾ, ಮಾನವ್ ವಿಜ್, ಸಾಕ್ಷಿ ತನ್ವರ್, ಲಲಿತ್ ತಿವಾರಿ ಸಹ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 300 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಮಲ್ಟಿಸ್ಟಾರರ್ ಚಿತ್ರವು ಮೊದಲ ದಿನವೇ ಒಟ್ಟು 13 ರಿಂದ 15 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯಿದೆ. ಒಂದು ವೇಳೆ ಚಿತ್ರ ಇಷ್ಟೊಂದು ಗಳಿಕೆ ಮಾಡಿದರೆ ನಿರಾಸೆಯಾಗಲಿದೆ. ಇಷ್ಟು ಅದ್ಧೂರಿ ಬಜೆಟ್ ನಲ್ಲಿ ತಯಾರಾದ ಚಿತ್ರಕ್ಕೆ ಕನಿಷ್ಠ 20 ಕೋಟಿ ಓಪನಿಂಗ್ ತೆಗದುಕೊಂಡಿರಬೇಕು.
ವಿಕ್ರಮ್
ಕಮಲ್ ಹಾಸನ್ ಅಭಿನಯದ ‘ವಿಕ್ರಮ್’ ಚಿತ್ರಕ್ಕಾಗಿ ಜನರು ತುಂಬಾ ಉತ್ಸುಕರಾಗಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಕಮಲ್ ಹಾಸನ್ ಆಕ್ಷನ್ ಮೋಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಕಮಲ್ ಹಾಸನ್ ಹೊರತಾಗಿ ವಿಜಯ್ ಸೇತುಪತಿ, ಫಹದ್ ಫಾಸಿಲ್ ಮುಂತಾದ ಅದ್ಭುತ ನಟರು ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಈ ಚಿತ್ರದಲ್ಲಿ ನಟ ಸೂರ್ಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ‘ವಿಕ್ರಮ್’ ಚಿತ್ರಕ್ಕೆ ಸಿಗುತ್ತಿರುವ ಸದ್ದು ನೋಡುವುದಾದರೆ, ಮೊದಲ ದಿನವೇ ಚಿತ್ರವು ಭಾರತದಾದ್ಯಂತ ಒಟ್ಟು 40 ರಿಂದ 45 ಕೋಟಿ ರೂಪಾಯಿಗಳ ವ್ಯಾಪಾರ ಮಾಡುವ ನಿರೀಕ್ಷೆಯಿದೆ, ಇದು ಬಂಪರ್ ಓಪನಿಂಗ್ ಆಗಲಿದೆ.
ಮೇಜರ್
26/11 ಮುಂಬೈ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನಾಧಾರಿತ ‘ಮೇಜರ್’ ಚಿತ್ರವು ದೇಶದ ನಿಜವಾದ ನಾಯಕನ ಜೀವನದ ಕಥೆಯನ್ನು ಜನರ ಮುಂದೆ ತರಲಿದೆ. ಈ ಚಿತ್ರದ ಮೂಲಕ ನಾವು ಮತ್ತೊಮ್ಮೆ 26/11 ದಾಳಿಯ ಭಯಾನಕ ಚಿತ್ರವನ್ನು ನೋಡುತ್ತೇವೆ. ಮೇಜರ್ ಸಂದೀಪ್ ವೀರ ಎನ್‌ಎಸ್‌ಜಿ ಕಮಾಂಡೋ ಆಗಿದ್ದು, ನಾಗರೀಕರ ಪ್ರಾಣ ಉಳಿಸುವ ವೇಳೆ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಅಡಿವಿ ಶೇಷ್, ಸಾಯಿ ಮಂಜ್ರೇಕರ್, ಶೋಭಿತಾ ಧೂಳಿಪಾಲ ಅಭಿನಯದ ಚಿತ್ರ ಮೊದಲ ದಿನ 15-20 ಕೋಟಿ ಗಳಿಸುವ ನಿರೀಕ್ಷೆ ಇದ್ದು, ಉತ್ತಮ ಓಪನಿಂಗ್ ಕಾಣುವ ನಿರೀಕ್ಷೆ ಇದೆ.








