Samsung Galaxy M53 5G ಸ್ಮಾರ್ಟ್ ಫೋನ್ ಭಾರತದಲ್ಲಿ ಬಿಡುಗಡೆ – 108 MP ಕ್ಯಾಮೆರಾ ಲಭ್ಯ…
Samsung Galaxy M53 5G ಸ್ಮಾರ್ಟ್ ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 900 ಪ್ರೊಸೆಸರ್ನೊ, 6.7-ಇಂಚಿನ ಸೂಪರ್ AMOLED + ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗಿದೆ. ಇದು 120Hz ನ ಡಿಸ್ಪ್ಲೆ ರಿಫ್ರೆಶ್ ರೇಟ್ ಹೊಂದಿದೆ. ಈ Samsung Galaxy M53 5G ಮೊಬೈಲ್ ನಲ್ಲಿ 108-ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮೆರಾ ಸೆಟಪ್ ನ್ನ ಅಳವಡಿಸಲಾಗಿದೆ. 25W ಫಾಸ್ಟ್ ಚಾರ್ಜಿಂಗ್ನೊಂದಿಗೆ 5000mAh ಬ್ಯಾಟರಿ ಹೊಂದಿದೆ.
Samsung Galaxy M53 5G ಬೆಲೆ
6 GB RAM ಜೊತೆಗೆ 128 GB ಮೆಮೋರಿ ಬೆಲೆ 23,999 ರೂ. 8 GB RAM ಜೊತೆಗೆ 128 GB ಮೆಮೋರಿ ಹೊಂದಿರುವ ಮೊಬೈಲ್ ಬೆಲೆ 25,999 ರೂ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿಯಲ್ಲಿ 2,500 ರೂಪಾಯಿಗಳು ಉಳಿಸಬಹುದು. ಏಪ್ರಿಲ್ 29 ರಿಂದ ಅಮೆಜಾನ್ ಇಂಡಿಯಾ ಮತ್ತು ಸ್ಯಾಮ್ಸಂಗ್ ಸ್ಟೋರ್ಗಳು ಸೇರಿದಂತೆ ರೀಟೇಲ್ ಅಂಗಡಿಗಳ ಮೂಲಕ ಕೊಂಡುಕೊಳ್ಳಬಹುದು. ನೀಲಿ ಮತ್ತು ಹಸಿರು ಬಣ್ಣಗಳಲ್ಲಿ ಸ್ಮಾರ್ಟ್ ಫೋನ್ ಲಭ್ಯವಿರುತ್ತದೆ.
Samsung Galaxy M53 5G ಫೀಚರ್ಸ್ ಗಳು…
Samsung Galaxy M53 5G ಆಂಡ್ರಾಯ್ಡ್ 12 ಆಧಾರಿತ One UI 4.1 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. 6.7-ಇಂಚಿನ Full HD+ ಡಿಸ್ಪ್ಲೇ ಇನ್ಫಿನಿಟಿ O ಸೂಪರ್ AMOLED+ ಹೊಂದಿದೆ. Galaxy M53 5G ಮೀಡಿಯಾ ಟೆಕ್ ಡೈಮೆನ್ಸಿಟಿ 900 ಪ್ರೊಸೆಸರ್ನಿಂದ 8GB RAM ಮತ್ತು 128GB ವರೆಗೆ ಮೆಮೋರಿ ಹೊಂದಿದೆ. 8 GB ವರ್ಚುವಲ್ RAM ಸಹ ಫೋನ್ನೊಂದಿಗೆ ಲಭ್ಯವಿರುತ್ತದೆ.
Samsung Galaxy M53 5G ಕ್ಯಾಮೆರಾ
ಈ ಸ್ಯಾಮ್ಸಂಗ್ ಮೊಬೈಲ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ಹೊಂದಿದೆ, ಇದರಲ್ಲಿ ಪ್ರಾಥಮಿಕ ಲೆನ್ಸ್ 108 ಮೆಗಾಪಿಕ್ಸೆಲ್ಗಳು. ಎರಡನೇ ಲೆನ್ಸ್ 8 ಮೆಗಾಪಿಕ್ಸೆಲ್ಗಳ ಅಲ್ಟ್ರಾ ವೈಡ್, ಮೂರನೇ ಲೆನ್ಸ್ 2 ಮೆಗಾಪಿಕ್ಸೆಲ್ಗಳ ಆಳ ಮತ್ತು ನಾಲ್ಕನೇ ಲೆನ್ಸ್ 2 ಮೆಗಾಪಿಕ್ಸೆಲ್ಗಳ ಮ್ಯಾಕ್ರೋ ಆಗಿದೆ. ಮುಂಬಾಗದಲ್ಲಿ 32-ಮೆಗಾಪಿಕ್ಸೆಲ್ ಕ್ಯಾಮೆರಾ ಫಿಕ್ಸ್ ಮಾಡಲಾಗಿದೆ.
Samsung Galaxy M53 5G ಬ್ಯಾಟರಿ
USB ಟೈಪ್-C ಪೋರ್ಟ್ ಮತ್ತು 25W ಫಾಸ್ಟ್ ಚಾರ್ಜಿಂಗ್ನೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. Samsung Galaxy M53 5G: Launched in India with Super AMOLED + display, 108MP camera will also be available