ಈ ವಾರ 10 ಕನ್ನಡ ಸಿನಿಮಾ ರಿಲೀಸ್ – ಯಾರಿಗೆ ಒಲಿಯಲಿದೆ ಪ್ರೇಕ್ಷಕನ ಒಲವು…
ಶುಕ್ರವಾರ ಬಂತೆಂದರೇ ಸಾಕು ಸಿನಿಮಾ ಪ್ರೇಮಿಗಳಿಗೆ ಹಬ್ಬದ ವಾತಾವರಣ, ಹೊಚ್ಚ ಹೊಸ ಸಿನಿಮಾಗಳನ್ನ ಥಿಯೇಟರ್ ಗಳಲ್ಲಿ ನೋಡುವ ಅವಕಾಶ ಸಿಗಲಿದೆ. ಈ ವಾರ ಸ್ಯಾಂಡಲ್ ವುಡ್ ನಲ್ಲಿ ಬರೊಬ್ಬರಿ ಹತ್ತು ಚಿತ್ರಗಳು ತೆರೆ ಕಾಣುತ್ತಿವೆ. ಹೊಸಬರ ಸಾಹಗಳ ಜೊತೆಗೆ ಹಳಬರ ಚಿತ್ರಗಳು ತೆರೆಕಾಣುತ್ತಿವೆ.
ಆಕ್ಟ್ 1978 ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಮಂಸೋರೆ ಇದೀಗ ಮತ್ತೊಂದು ಚಿತ್ರದ ಮೂಲಕ ತಮ್ಮ ಪ್ರತಿಭೆಯನ್ನ ತೆರೆಯ ಮೇಲೆ ತರುತ್ತಿದ್ದಾರೆ ಈ ಚಿತ್ರಕ್ಕೆ 19.20.21 ಎಂದು ಹೆಸರಿಡಲಾಗಿದೆ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಭರವಸೆ ಮೂಡಿಸಿದೆ.
ಪೃಥ್ವಿ ಅಂಬರ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಸುಕೇಶ್ ಶೆಟ್ಟಿ ನಿರ್ದೇಶನದ “ದೂರದರ್ಶನ” ಸಿನಿಮಾ ಸಹ ಈ ವಾರ ಪ್ರೇಕ್ಷಕರ ಮುಂದೆ ಬರುತ್ತಿದೆ.
ವಿಜಯ್ ರಾಘ್ರವೇಂದ್ರ ಹರ್ಷಿಕಾ ಪೂಣಚ್ಚ ನಟನೆಯ ಕಾಸಿನ ಸರ ಚಿತ್ರ ಕೂಡ ಈ ವಾರ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಪ್ರಗತಿಪರ ರೈತನಾಗಿ ನಟಿಸುತ್ತಿದ್ದಾರೆ.
ಪನ್ನಗ ಸೋಮಶೇಖರ್ ನಿರ್ದೇಶನದ ಕಡಲ ತೀರದ ಭಾರ್ಗವ ಸಿನಿಮಾ ಕೂಡ ಕೊಂಚ ಮಟ್ಟಿಗೆ ಕುತೂಹಲ ಮೂಡಿಸಿದೆ. ಭರತ್ ಗೌಡ ಮತ್ತು ವರುಣ್ ರಾಜು ಈ ಚಿತ್ರದ ನಾಯಕರಾಗಿದ್ದಾರೆ.
ಇನ್ನುಳಿದಂತೆ ಈ ವಾರ ಅಂಬಾಸೀಡರ್, ಬೀಗ, ನಾಕು ಮುಖ, ಒಂದಂಕೆ ಕಾಡು, ಪ್ರಜಾರಾಜ್ಯ, ರಾಕ್ಷಸ ತಂತ್ರ ಸಿನಿಮಾಗಳು ರಿಲೀಸ್ ಆಗುತ್ತಿವೆ…
Sandalwood: 10 Kannada movies release this week