ಇಂದು ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇನ್ನೂ ಡಾಲಿ ಬರ್ತ್ ಡೇ ಗೆ ಅಭಿಮಾನಿಗಳು ಸಾಮಾಜಿಕ ಜಾಲಾತಾಣದಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಇದರ ನಡುವೇ ಚಿತ್ರ ತಂಡಗಳೂ ಸಹ ಬಗೆಬಗೆಯ ಪೋಸ್ಟರ್ ಗಳನ್ನು ಶೇರ್ ಮಾಡುವ ಮೂಲಕ ಡಾಲಿಗೆ ಬರ್ತ್ ಡೇ ವಿಷ್ ಮಾಡಿವೆ.
ಡಾಲಿ ಜನ್ಮದಿನದ ಪ್ರಯುಕ್ತ ಶೇರ್ ಮಾಡಲಾದ ಪೋಸ್ಟರ್ ಗಳು ವೈರಲ್ ಆಗುತ್ತಿದ್ದು, ಬಾರೀ ಸದ್ದು ಮಾಡ್ತಿವೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ, ದುನಿಯಾ ವಿಜಯ್ ನಾಯಕತ್ವದ ಸಲಗ, ಅಶು ಬೆದ್ರ ನಿರ್ಮಾಣ ಮಾಡುತ್ತಿರುವ ಹೆಡ್ ಬುಷ್, ಬಡವ ರಾಸ್ಕಲ್ ಮತ್ತು ಡಾಲಿ ಸಿನಿಮಾ ತಂಡಗಳು ಹೊಸ ಪೋಸ್ಟರ್ ರಿಲೀಸ್ ಮಾಡಿವೆ. ಅಲ್ಲದೆ ರೋಹಿತ್ ಪದಕಿ ನಿರ್ದೇಶನದ, ರತ್ನನ್ ಪ್ರಪಂಚದ ತಂಡ ಕೂಡ ಪೋಸ್ಟರ್ ಬಿಡುಗಡೆಮಾಡಿ ಡಾಲಿಗೆ ಗೆ ವಿಭಿನ್ನವಾಗಿ ವಿಷ್ ಮಾಡಲಾಗಿದೆ.
ಇತ್ತ ಜನ್ಮದಿನವನ್ನು ಈ ಬಾರಿ ಆಚರಣೆ ಮಾಡದಂತೆ ಅಭಿಮಾನಿಗಳಿಗೆ ಟ್ವೀಟ್ ಮೂಲಕ 3-4 ದಿನಗಳ ಹಿಂದೆಯೇ ಡಾಲಿ ಮನವಿ ಮಾಡಿಕೊಮಡಿದ್ದರು. ಈ ಮೂಲಕ ೀ ಬಾರಿಯ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡಿದ್ದಾರೆ ಧನಂಜಯ್.