Sandalwood
‘ಸ್ನೇಹನಾ ಪ್ರೀತಿನಾ’ ಸಿನಿಮಾದ ನಿರ್ದೇಶಕ ಶಾಹುರಾಜ್ ಶಿಂಧೆ ವಿಧಿವಶ
ಕನ್ನಡದ ಸೂಪರ್ ಹಿಟ್ ಸಿನಿಮಾವಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸ್ನೇಹಾನಾ ಪ್ರೀತೀನಾ.. ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ , ಸ್ಯಾಂಡಲ್ ನಿರ್ದೇಶಕ ಶಾಹುರಾಜ್ ಶಿಂಧೆ ಅವರು ನಿಧನರಾಗಿದ್ದಾರೆ. ಇಂದು ಮುಂಜಾನೆ ಹೃದಯಾಘಾತದಿಂದ ಶಾಹುರಾಜ್ ಶಿಂಧೆ ಅವರು ಕೊನೆಯುಸಿರೆಳೆದಿದ್ದಾರೆ. ಶಾಹುರಾಜ್ ಶಿಂಧೆ ಅವರ ಅಗಲಿಕೆಗೆ ಚಿತ್ರರಂಗದವರು ಕಂಬನಿ ಮಿಡಿದಿದ್ದಾರೆ. 2007ರಲ್ಲಿ ರಿಲೀಸ್ ಆದ ‘ಸ್ನೇಹನಾ ಪ್ರೀತಿನಾ’ ಸಿನಿಮಾ ಮೂಲಕ ಶಾಹುರಾಜ್ ಶಿಂಧೆ ಅವರು ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದರು. ಅವರ ಸಾರಥ್ಯದಲ್ಲಿ ಮೂಡಿಬಂದ ಮೊದಲ ಸಿನಿಮಾವೇ ಸಕ್ಸಸ್ ಕಂಡಿತ್ತು. ಚಿತ್ರದಲ್ಲಿ ನಟ ದರ್ಶನ್ ಹಾಗೂ ಆದಿತ್ಯ ಜೋಡಿ ಮೋಡಿ ಮಾಡಿತ್ತು.
ಈ ಸಿನಿಮಾ ಬಳಿಕ ಮತ್ತೆ 2008ರಲ್ಲಿ ತೆರೆಕಂಡ ದರ್ಶನ್ ಅವರ ನಟನೆಯ ‘ಅರ್ಜುನ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು ಶಿಂಧೆ. ಬಳಿಕ 2011ರಲ್ಲಿ ಪ್ರೇಮ ಚಂದ್ರಮ ಸಿನಿಮಾಗೆ ಆಕ್ಷನ್ ಕಟ್ ಹೇಳಿ ಬಣ್ಣದ ಜಗತ್ತಿನಿಂದ ದೂರಾಗಿದ್ದ ಶಿಂಧೆ ಅವರು, 9 ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದರು. ಮತ್ತೆ ಸಿನಿಮಾರಂಗಕ್ಕೆ ಮರಳಿದ ಶಿಂಧೆ ಅವರು ‘ರಂಗ ಮಂದಿರ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಆಶಿಕಾ ರಂಗನಾಥ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ವಿಪರ್ಯಾಸವೆಂದರೆ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಶಿಂಧೆ ವಿಧಿವಶರಾಗಿದ್ದಾರೆ. ಅಂದ್ಹಾಗೆ ‘ರಂಗ ಮಂದಿರ’ ಚಿತ್ರದ ಶೂಟಿಂಗ್ ಈಗಾಗಲೇ ಮುಕ್ತಾಯವಾಗಿದೆ. ಚಿತ್ರದಲ್ಲಿ ರಂಗಾಯಣ ರಘು, ತೆಲುಗು ನಟ ಸುಮನ್, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವಿದೆ.
Sandalwood
ಆತ್ಮನಿರ್ಭರ ದೀಪಾವಳಿ ಆಚರಿಸಿ ಚೀನಾಕ್ಕೆ ದೊಡ್ಡ ಹೊಡೆತ ನೀಡಿದ ಭಾರತೀಯರು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel