ಹೋಟೆಲಲ್ಲಿ ಯಾರ್ ಜತೆ ಇದ್ರೀ.. ಗಂಡಸ್ತನ ಪ್ರೂವ್ ಮಾಡಕೋದ್ರಾ? : ದಾನಿಗೆ `ಇಂದ್ರ ಬಾಣ’
ಬೆಂಗಳೂರು : ಇಂದ್ರಜಿತ್ ಲಂಕೇಜ್ ಗಂಡಸಾಗಿದ್ರೆ, ಅವರು ಅಪ್ಪನಿಗೆ ಹುಟ್ಟಿದವರೇ ಆಗಿದ್ದರೆ ದಾಖಲೆ ರಿಲೀಸ್ ಮಾಡಲಿ ಎಂಬ ನಟ ದರ್ಶನ್ ಸವಾಲಿಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಡಿಸ್ಟರ್ಬ್ ಆಗಿದ್ರೆ ಟ್ರೀಟ್ಮೆಂಟ್ ತಗೋಳಿ ದರ್ಶನ್ ಅವರೇ ಅಂತಾ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇಂದ್ರಜಿತ್ ಲಂಕೇಶ್, ದರ್ಶನ್ ಮಾತನಾಡಿದ್ದನ್ನು ನೋಡಿದ್ದೇನೆ. ಅವರು ತುಂಬಾ ವಿಚಲಿತರಾಗಿದ್ದಾರೆ. ಮೊದಲು ನನ್ನ ಪ್ರಶ್ನೆಗಳಿಗೆ ಅವರು ಉತ್ತರ ಕೊಡಲಿ. ಹೋಟೆಲಿನಲ್ಲಿ ನೀವು ಬಡವ ಸಪ್ಲೇಯರ್ ಗೆ ಹೊಡೆದ್ರೋ ಇಲ್ಲವೋ..?, ಅವತ್ತು ನೀವು ಯಾರ ಜೊತೆಗಿದ್ರಿ..? 25 ಕೋಟಿ ವಂಚನೆ ಪ್ರಕರಣದಲ್ಲಿ ನೀವು ಅರುಣಾ ದೇವಿಯನ್ನು ಯಾಕೆ ತೋಟಕ್ಕೆ ಕರೆದ್ರಿ..? ಮೊದಲು ನನ್ನ ಈ ಪ್ರಶ್ನೆಗಳಿಗೆ ಉತ್ತರ ನೀಡಿ. ಅಲ್ಲದೆ ಬಡವನಿಗೆ ಹೊಡೆದಿಲ್ಲ ಅಂದ್ರೆ ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿ ಎಂದು ದರ್ಶನ್ ಸವಾಲಿಗೆ ಪ್ರತಿ ಸವಾಲ್ ಹಾಕಿದ್ದಾರೆ.
ಇನ್ನು ದರ್ಶನ್ ತುಂಬಾ ವಿಚಲಿತನಾಗಿದ್ದು, ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ಸಾಕು. ಅವರು ಇಂದು ಬಳಸಿರುವ ಭಾಷೆ ಅವರ ಹಿನ್ನೆಲೆ ತೋರಿಸುತ್ತದೆ. ನಾನು ಅವರನ್ನು ಅನ್ ಎಜುಕೇಟೆಡ್ ಅಂತ ಹೇಳಿಲ್ಲ ಎಂದು ದರ್ಶನ್ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಇಂದ್ರಜಿತ್, ಡಿಸ್ಟರ್ಬ್ ಆಗಿದ್ರೆ ಟ್ರೀಟ್ಮೆಂಟ್ ತಗೋಳಿ ದರ್ಶನ್ ಅವರೇ ಎಂದು ಪುಕ್ಕಟೆ ಸಲಹೆ ನೀಡಿದರು.
ದಾಖಲೆ ಬಿಡುಗಡೆ ಮಾಡಿ ಎಂಬ ದರ್ಶನ್ ಸವಾಲಿಗೆ ಪ್ರತಿಕ್ರಿಯೆ ನೀಡಿದ ಇಂದ್ರಜಿತ್, ಆಡಿಯೋ, ವೀಡಿಯೋ ಸಾಕ್ಷ್ಯಗಳನ್ನು ಪೆÇಲೀಸರ ಮುಂದೆ ತೋರಿಸುತ್ತೇವೆ. ಇವರ ಮುಂದಿಡುವ ಅವಶ್ಯಕತೆ ಇಲ್ಲ. ಇನ್ನು ಗಂಡಸಾಗಿರುವುದನ್ನು ಪ್ರೂವ್ ಮಾಡೋಕೆ ಹೇಳಿದ್ದಾರೆ. ಅವರ ಈ ಮಾತಿನಿಂದ ನನಗೆ ನಗು ಬರುತ್ತೆ. ಬಡವ ಸಪ್ಲೆಯರ್ ಗೆ ಹೊಡೆದಿದ್ದೀರಾ ಎಂಬುದಕ್ಕೆ ಉತ್ತರ ಕೊಡಿ. ಅವರಿಗೆ ಹೊಡೆಯುವುದು ಎಷ್ಟು ಸರಿ..? ಅರುಣಾ ದೇವಿಯರನ್ನು ಮನೆಗೆ ಕರೆಸಿಕೊಂಡ್ರೋ..? ಇಲ್ಲವೋ..? ಹೇಳಿ. ಧರ್ಮಪತ್ನಿ ವಿಚಾರದಲ್ಲಿ ಯಾಕೆ ಲಾಯರ್ ಕರೆಸಿಕೊಂಡ್ರಿ ಅನ್ನೋದು ಇಡೀ ಕರ್ನಾಟಕ್ಕೆ ಗೊತ್ತು. ಇದೆಲ್ಲ ಹೀರೋಯಿಸಂ, ಇದನ್ನು ಸಿನಿಮಾದಲ್ಲಿ ಇಟ್ಟುಕೊಳ್ಳಿ. ನನಗೆ ಸಂಸ್ಕಾರ, ಸಂಸ್ಕøತಿ ಇದೆ. ಗಾಂಡುಗಿರಿ ಅಲ್ಲ ಗೂಂಡಾಗಿರಿ ಮೊದಲು ಕನ್ನಡ ಸರಿಯಾಗಿ ಓದಲಿ ಹೇಳಿ ಎಂದು ಟಾಂಗ್ ನೀಡಿದರು.
ಇನ್ನು ತನಿಖಾ ತಂಡದ ಮುಂದೆ ಎಲ್ಲಾ ಸಾಕ್ಷ್ಯಗಳನ್ನು ಒದಗಿಸುತ್ತೇನೆ ಎಂದ ಇಂದ್ರಜಿತ್, ದರ್ಶನ್ ಅವರ ಡ್ರಗ್ಸ್ ಕೇಸ್ ಬಗ್ಗೆ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟು, ಡ್ರಗ್ಸ್ ಕೇಸ್ ವಿಚಾರದಲ್ಲಿ ನಿಮಗೆ ಏನಾದರೂ ತೊಂದರೆ ಆಗಿದೆಯಾ..? ಯಾಕೆ ಈ ವಿಚಾರ ಇಂದು ಮಾತನಾಡಿದ್ದೀರಿ ಎಂದು ಪ್ರಶ್ನಿಸಿದರು.