Sandalwood : ರಿಲೀಸ್ ಆಯ್ತು ಖುಷಿ-2 ಸಾಂಗ್…ಇದು ಕನ್ನಡದಲ್ಲಿಯೇ ಹೊಸ ಪ್ರಯತ್ನ
ಸಂಗೀತಕ್ಕೆ ಗಡಿ-ಗುಡಿ ಯಾವುದು ಇರೋದಿಲ್ಲ.. ಸಂಗೀತ ಮನತಣಿಸಿ ಕುಣಿಸಿದ್ರೆ ಸಾಕು.. ಭಾರತೀಯ ಚಿತ್ರರಂಗದಲ್ಲಿ ಸ್ವತಂತ್ರ ಸಂಗೀತಗಾರರಿಗೇನು ಲೆಕ್ಕಕ್ಕಿಲ್ಲ.. ಹಾಗೇಯೇ ನಮ್ ಕನ್ನಡದಲ್ಲೂ ಅದ್ಭುತ ಸಂಗೀತಗಾರರಿಗೇನು ಕಮ್ಮಿಇಲ್ಲ. ಬಟ್ ಎಲ್ಲರೊಳಗೇ ನಾವು ಒಬ್ಬರಾದ್ರೆ ಜನ ನಮ್ಮನ್ನು ನೋಡಲ್ಲ. ಆ ಎಲ್ಲರಲ್ಲಿ ನಾವು ಡಿಫರೆಂಟ್ ಆದಾಗಲೇ ಜನ ಇಷ್ಟಪಟ್ಟು ಬೆನ್ನುತಟ್ಟೋದು.. ಪ್ರೋತ್ಸಾಹಿಸೋದು. ನಾವು ಇಷ್ಟೆಲ್ಲಾ ಹೇಳೋದಿಕ್ಕೆ ಕಾರಣ ಸಂಗೀತ ನಿರ್ದೇಶಕ ಹೇಮಂತ್ ಜೋಯ್ಸ್..

ಸ್ವತಂತ್ರ ಸಂಗೀತ ನಿರ್ದೇಶಕ ಹೇಮಂತ್ ಜೋಯ್ಸ್ ಖುಷಿ-2 ಎಂಬ ಆಲ್ಬಂ ಸಾಂಗ್ ವೊಂದನ್ನು ರಿಲೀಸ್ ಮಾಡಿದ್ದಾರೆ. ತಮ್ಮದೇ ಹೇಮಂತ್ ಜೋಯ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಹಾಡು ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಹಿಂದೆ ಬಿಡುಗಡೆಯಾಗಿರುವ ಖುಷಿ ಹಾಡಿನ ಸೀಕ್ವೆಲ್ ಆಗಿರುವ ಖುಷಿ 2 ಹಾಡು ಸಮ್ ಥಿಂಗ್ ಸ್ಪೆಷಲ್. ಅಜ್ಜಿ ಹಾಗೂ ಮೊಮ್ಮಗನ ಸಂಬಂಧ ಬಾಂಧವ್ಯದ ಮಹತ್ವ ಸಾರುವ ಈ ಹಾಡು EDM ಸಾಂಗ್, ಅಂದ್ರೆ ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ ಹಾಡು. ಸಾಹಿತ್ಯಕ್ಕಿಂತ ಹೆಚ್ಚಾಗಿ ಮ್ಯೂಸಿಕ್ ಹೆಚ್ಚಿರುತ್ತೆ. ನಾವು ನೀವು ಮೆಚ್ಚುವ ವಿದೇಶಿ ಹಾಡುಗಳು ಇದೇ ಫಾರ್ಮೆಟ್ ನಲ್ಲಿರುತ್ತೆ. ನಾನು ಯಾಕೆ EDM ಒಮ್ಮೆ ಟ್ರೈ ಮಾಡಬಾರದು ಅಂತಾ ಯೋಚಿಸಿ ಹೇಮಂತ್ ಖುಷಿ 2 ಹಾಡು ಮಾಡಿ ರಿಲೀಸ್ ಮಾಡಿದ್ದು, ಪ್ರತಿಯೊಬ್ಬರಿಗೂ ಇಷ್ಟವಾಗ್ತಿದೆ. ಅಂದಹಾಗೇ ಕನ್ನಡದಲ್ಲಿ ಈ ರೀತಿ ಹಾಡು ಮಾಡಿರೋದು ಮೊದಲ ಬಾರಿಗೆ ಅಂದ್ರು ತಪ್ಪಾಗಲಿಕ್ಕಿಲ್ಲ.
ರಕ್ಷಿತ್ ತೀರ್ಥಹಳ್ಳಿ ಖುಷಿ2 ಹಾಡನ್ನು ನಿರ್ದೇಶನ ಮಾಡಿದ್ದು, ಕನ್ನಡದಲ್ಲಿ ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದರೆ, ಇಂಗ್ಲೀಷ್ ನಲ್ಲಿ ಚಿನ್ಮಯ್ ಬರೆದಿದ್ದಾರೆ. ಚೇತನ್ ನಾಯ್ಕ್ ಈ ಹಾಡಿಗೆ ಧ್ವನಿಯಾಗಿದ್ದು, ಹೇಮಂತ್ ಜೋಯ್ಸ್ ಮ್ಯೂಸಿಕ್ ನೀಡುವುದರ ಜೊತೆಗೆ ಈ ಹಾಡಿನ ನಿರ್ಮಾಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೇಮಂತ್ ಜೋಯ್ಸ್ ಜೊತೆಗೆ ಗುಬ್ಬಿ ವೀರಣ್ಣನ ಮರಿಮೊಮ್ಮಗಳು ಸುಂದರಶ್ರೀ ನಟಿಸಿದ್ದಾರೆ.








