ADVERTISEMENT
Tuesday, January 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಟಾಕ್ಸಿಕ್ ನಿಂದ ಕೆಡಿ ವರೆಗೆ, ಬಿಲ್ಲಾ ರಂಗ ಬಾಷಾ ದಿಂದ ಭಾರ್ಗವ ವರೆಗೆ: 2026ರಲ್ಲಿ ಸೌಂಡ್ ಮಾಡಲಿರುವ ಸ್ಯಾಂಡಲ್‌ವುಡ್ ಸಿನಿಮಾಗಳು

Sandalwood movies to be released in 2026

Shwetha by Shwetha
December 28, 2025
in ರಾಜ್ಯ, Cinema, Newsbeat, State, ಮನರಂಜನೆ
Share on FacebookShare on TwitterShare on WhatsappShare on Telegram

2025ರ ಇಸವಿ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಗಾಂಧಿನಗರದ ಲೆಕ್ಕಾಚಾರದ ಪ್ರಕಾರ ಈ ವರ್ಷ ಸ್ಯಾಂಡಲ್ ವುಡ್ ಪಾಲಿಗೆ ಮಿಶ್ರಫಲದ ವರ್ಷವಾಗಿತ್ತು ಎಂದರೆ ತಪ್ಪಾಗಲಾರದು. ಬೆರಳೆಣಿಕೆಯಷ್ಟು ಸಿನಿಮಾಗಳು ಗೆದ್ದರೆ, ನಿರೀಕ್ಷಿತ ಸಿನಿಮಾಗಳು ಮಕಾಡೆ ಮಲಗಿದ್ದವು. ಕಾಂತಾರ ಮತ್ತು ರಾಜ್ ಬಿ ಶೆಟ್ಟಿಯವರ ಸು ಫ್ರಮ್ ಸೋ ಸಿನಿಮಾಗಳ ಅಬ್ಬರ ಬಿಟ್ಟರೆ ಉಳಿದಂತೆ ಈ ವರ್ಷ ಬಾಕ್ಸಾಫೀಸ್ ತಣ್ಣಗಿತ್ತು. ಛೂ ಮಂತರ್, ಎಕ್ಕ, ಯುದ್ಧ ಕಾಂಡ-2, ಮಾದೇವ, ಏಳುಮಲೆ ಹಾಗೂ ಬ್ರ್ಯಾಟ್ ನಂತಹ ಚಿತ್ರಗಳು ಕಂಟೆಂಟ್ ಮೂಲಕ ಗಮನ ಸೆಳೆದರೂ, ಹಣದ ವಿಚಾರದಲ್ಲಿ ದೊಡ್ಡ ಮಟ್ಟದ ಮ್ಯಾಜಿಕ್ ಮಾಡಲಿಲ್ಲ. ಆದರೆ ಸಿನಿಪ್ರಿಯರೇ ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ 2026ರ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದಿಡುವ ವರ್ಷವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಸ್ಟಾರ್ ನಟರ ದಂಡು, ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ ಮುಂದಿನ ವರ್ಷ ಜೋರಾಗಿರಲಿದೆ. 2026ರಲ್ಲಿ ತೆರೆಗೆ ಅಪ್ಪಳಿಸಲಿರುವ ಬಹುನಿರೀಕ್ಷಿತ ಸಿನಿಮಾಗಳ ವಿವರ ಇಲ್ಲಿದೆ ನೋಡಿ.

ಟಾಕ್ಸಿಕ್ ಮೂಲಕ ಯಶ್ ಆರ್ಭಟ ಶುರು

Related posts

ಸಂವಿಧಾನದನ್ವಯ ಅಧಿವೇಶನ ಕರೆದಿದ್ದೇವೆ: ಸಿಎಂ ಸಿದ್ದರಾಮಯ್ಯ

ಸಂವಿಧಾನದನ್ವಯ ಅಧಿವೇಶನ ಕರೆದಿದ್ದೇವೆ: ಸಿಎಂ ಸಿದ್ದರಾಮಯ್ಯ

January 20, 2026
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಚಾಲಕರಹಿತ ಮತ್ತೊಂದು ರೈಲು ಬೆಂಗಳೂರಿಗೆ ಆಗಮನ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಚಾಲಕರಹಿತ ಮತ್ತೊಂದು ರೈಲು ಬೆಂಗಳೂರಿಗೆ ಆಗಮನ

January 20, 2026

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ 2026ರ ಅತಿದೊಡ್ಡ ನಿರೀಕ್ಷೆಯಾಗಿದೆ. ಕೆಜಿಎಫ್-2 ಬಳಿಕ ಯಶ್ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಈ ಸಿನಿಮಾ ಉತ್ತರವಾಗಿದೆ. ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ಕೇವಲ ಕನ್ನಡವಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವ ಮುನ್ಸೂಚನೆ ನೀಡಿದೆ. ಹಾಲಿವುಡ್ ತಂತ್ರಜ್ಞರ ಕೈಚಳಕವಿರುವ ಈ ಸಿನಿಮಾ ಮಾರ್ಚ್ 19ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.

ಏಪ್ರಿಲ್ ನಲ್ಲಿ ಕೆಡಿ ಅಬ್ಬರ

ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನ ಕೆಡಿ-ದಿ ಡೆವಿಲ್ ಸಿನಿಮಾ ಮುಂದಿನ ವರ್ಷದ ಮತ್ತೊಂದು ಬಿಗ್ ಬಜೆಟ್ ಚಿತ್ರ. 1970ರ ಕಾಲಘಟ್ಟದ ರೌಡಿಸಂ ಕಥೆ ಹೇಳಲಿರುವ ಈ ಚಿತ್ರದಲ್ಲಿ ಬಾಲಿವುಡ್ ನಟರಾದ ಸಂಜಯ್ ದತ್, ಶಿಲ್ಪಾ ಶೆಟ್ಟಿ ಸೇರಿದಂತೆ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ನಟಿಸುತ್ತಿದ್ದಾರೆ. ಏಪ್ರಿಲ್ 30ರಂದು ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.

ಲ್ಯಾಂಡ್ ಲಾರ್ಡ್ ಮೂಲಕ ವರ್ಷದ ಆರಂಭ

ಗುರು ಶಿಷ್ಯರು ಖ್ಯಾತಿಯ ಜಡೇಶ್ ಕೆ ಹಂಪಿ ನಿರ್ದೇಶನದ ಲ್ಯಾಂಡ್ ಲಾರ್ಡ್ ಸಿನಿಮಾ ಜನವರಿ 23ರಂದು ಬಿಡುಗಡೆಯಾಗಲಿದೆ. ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಜೋಡಿಯಾಗಿ ನಟಿಸಿರುವ ಈ ಚಿತ್ರ 70-80ರ ದಶಕದ ಕಥೆಯನ್ನು ಒಳಗೊಂಡಿದೆ. ಈಗಾಗಲೇ ನಿಂಗವ್ವ-ನಿಂಗವ್ವ ಹಾಡು ಹಿಟ್ ಆಗಿದ್ದು, ಚಿತ್ರದ ಮೇಲೆ ಭಾರಿ ನಿರೀಕ್ಷೆ ಮೂಡಿಸಿದೆ.

ಬಿಲ್ಲಾ ರಂಗ ಬಾಷಾ

ವಿಕ್ರಾಂತ್ ರೋಣ ನಂತರ ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಜೋಡಿ ಬಿಲ್ಲಾ ರಂಗ ಬಾಷಾ ಮೂಲಕ ಮತ್ತೊಮ್ಮೆ ಒಂದಾಗುತ್ತಿದೆ. ಅಡ್ವೆಂಚರ್ ಥ್ರಿಲ್ಲರ್ ಮಾದರಿಯ ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, 2026ರ ಕ್ರಿಸ್ ಮಸ್ ಹಬ್ಬಕ್ಕೆ ಉಡುಗೊರೆಯಾಗಿ ತೆರೆಗೆ ಬರುವ ಸಾಧ್ಯತೆಯಿದೆ.

666 ಆಪರೇಷನ್ ಡ್ರೀಮ್ ಥಿಯೇಟರ್

ವಿಭಿನ್ನ ಕಥೆಗಳ ಸರದಾರ ಹೇಮಂತ್ ರಾವ್ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಒಂದಾಗುತ್ತಿದ್ದಾರೆ. ರೆಟ್ರೋ ಶೈಲಿಯ ಟೈಟಲ್ ಹೊಂದಿರುವ ಈ ಸಿನಿಮಾ ಒಂದು ವಿಭಿನ್ನ ಪ್ರಯೋಗವಾಗಿದ್ದು, ಮುಂದಿನ ವರ್ಷ ಸಿನಿಪ್ರಿಯರಿಗೆ ಹೊಸ ಅನುಭವ ನೀಡಲಿದೆ.

ಭಾರ್ಗವ

ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಿರ್ದೇಶಕ ನಾಗಣ್ಣ ಜೋಡಿ ಕುಟುಂಬ ಮತ್ತು ಗೌರಮ್ಮ ನಂತರ ಭಾರ್ಗವ ಮೂಲಕ ಮತ್ತೆ ಒಂದಾಗುತ್ತಿದೆ. ಉಪ್ಪಿ ಅಭಿಮಾನಿಗಳಿಗೆ ಈ ಸಿನಿಮಾ ಹಬ್ಬದ ಊಟವಿದ್ದಂತೆ. ಮುಂದಿನ ವರ್ಷ ಈ ಸಿನಿಮಾ ಥಿಯೇಟರ್ ಗೆ ಲಗ್ಗೆ ಇಡಲಿದೆ.

ಕರಾವಳಿಯ ಗತ್ತು

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಕರಾವಳಿ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಗುರುದತ್ ಗಾಣಿಗ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್ ಮಹಿಷಾಸುರನ ಗೆಟಪ್ ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ರಾಜ್ ಬಿ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

ಮ್ಯಾಂಗೋ ಪಚ್ಚ

ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಅವರ ಚೊಚ್ಚಲ ಸಿನಿಮಾ ಮ್ಯಾಂಗೋ ಪಚ್ಚ ಜನವರಿ 15ರ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿದೆ. ಯೂತ್ ಫುಲ್ ಕಥಾಹಂದರ ಹೊಂದಿರುವ ಈ ಸಿನಿಮಾ ಈಗಾಗಲೇ ಹಾಡುಗಳಿಂದ ಸದ್ದು ಮಾಡುತ್ತಿದೆ.

ಉಗ್ರಾಯುಧಮ್ ಮತ್ತು ಕ್ರಿಮಿನಲ್

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಐತಿಹಾಸಿಕ ಕಥಾಹಂದರ ಹೊಂದಿರುವ ಉಗ್ರಾಯುಧಮ್ 2026ರ ಅಂತ್ಯದಲ್ಲಿ ತೆರೆಗೆ ಬರಲಿದೆ. ಇದಲ್ಲದೆ ಧ್ರುವ ಸರ್ಜಾ ಮತ್ತು ರಚಿತಾ ರಾಮ್ ಜೋಡಿಯ ಕ್ರಿಮಿನಲ್ ಸಿನಿಮಾ ಕೂಡ ಮುಂದಿನ ವರ್ಷ ಬಿಡುಗಡೆಯಾಗಲಿದ್ದು, ಕೆರೆಬೇಟೆ ಖ್ಯಾತಿಯ ರಾಜ್ ಗುರು ನಿರ್ದೇಶನ ಮಾಡುತ್ತಿದ್ದಾರೆ.

ಫಾದರ್ ಮತ್ತು ದೈಜಿ

ತಂದೆ ಮಗನ ಬಾಂಧವ್ಯದ ಕಥೆಯುಳ್ಳ ಫಾದರ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಪ್ರಕಾಶ್ ರಾಜ್ ನಟಿಸುತ್ತಿದ್ದಾರೆ. ರಮೇಶ್ ಅರವಿಂದ್ ಅವರ ವಿಭಿನ್ನ ಗೆಟಪ್ ನ ದೈಜಿ ಸಿನಿಮಾ ಕೂಡ ಮುಂದಿನ ವರ್ಷದ ನಿರೀಕ್ಷಿತ ಪಟ್ಟಿಯಲ್ಲಿದೆ. ಶಿವಾಜಿ ಸುರತ್ಕಲ್ ನಿರ್ದೇಶಕ ಆಕಾಶ್ ಶ್ರೀವತ್ಸ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಇತರ ಪ್ರಮುಖ ಸಿನಿಮಾಗಳು

ಗೋಲ್ಡನ್ ಸ್ಟಾರ್ ಗಣೇಶ್ ಅವರ ಬುಡಕಟ್ಟು ನಾಯಕನ ಪಾತ್ರವಿರುವ ಪಿನಾಕ, ದುನಿಯಾ ವಿಜಯ್ ನಿರ್ದೇಶನದ ಹಾಗೂ ವಿನಯ್ ರಾಜ್ ಕುಮಾರ್ ನಟನೆಯ ಸಿಟಿ ಲೈಟ್ಸ್ ಕೂಡ ಕ್ಯೂನಲ್ಲಿವೆ. ಇವುಗಳ ಜೊತೆಗೆ ಶಿವಣ್ಣರ ಎ ಫಾರ್ ಆನಂದ್, ಡ್ಯಾಡಿ, ಡಾಲಿಯ ಅಣ್ಣ ಫ್ರಮ್ ಮೆಕ್ಸಿಕೋ, ಜಿಂಗೋ, ವಿಕ್ರಮ್ ರವಿಚಂದ್ರನ್ ಅವರ ಮುಧೋಳ, ಪೃಥ್ವಿ ಅಂಬಾರ್ ಅವರ ಚೌಕಿದಾರ್, ಝೈದ್ ಖಾನ್ ಅವರ ಕಲ್ಟ್ ಸಿನಿಮಾಗಳು 2026ರಲ್ಲಿ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿವೆ.

ಒಟ್ಟಾರೆಯಾಗಿ ಹೇಳುವುದಾದರೆ, 2025ರಲ್ಲಿ ಆದ ಸೋಲು-ಗೆಲುವಿನ ಲೆಕ್ಕಾಚಾರವನ್ನು ಮರೆಸಿ, 2026ರಲ್ಲಿ ಕನ್ನಡ ಚಿತ್ರರಂಗ ಮತ್ತೆ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.

ShareTweetSendShare
Join us on:

Related Posts

ಸಂವಿಧಾನದನ್ವಯ ಅಧಿವೇಶನ ಕರೆದಿದ್ದೇವೆ: ಸಿಎಂ ಸಿದ್ದರಾಮಯ್ಯ

ಸಂವಿಧಾನದನ್ವಯ ಅಧಿವೇಶನ ಕರೆದಿದ್ದೇವೆ: ಸಿಎಂ ಸಿದ್ದರಾಮಯ್ಯ

by Shwetha
January 20, 2026
0

ಹೊಸ ವರ್ಷದ ಆರಂಭದಲ್ಲಿ ಜಂಟಿ ಅಧಿವೇಶನವನ್ನು ಕಡ್ಡಾಯವಾಗಿ ಕರೆಯಬೇಕು ಎಂಬುದು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಅದರ ಅನ್ವಯವೇ ರಾಜ್ಯ ಸರ್ಕಾರ ಈ ವಿಶೇಷ ಅಧಿವೇಶನವನ್ನು ಕರೆದಿದೆ ಎಂದು...

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಚಾಲಕರಹಿತ ಮತ್ತೊಂದು ರೈಲು ಬೆಂಗಳೂರಿಗೆ ಆಗಮನ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಚಾಲಕರಹಿತ ಮತ್ತೊಂದು ರೈಲು ಬೆಂಗಳೂರಿಗೆ ಆಗಮನ

by Shwetha
January 20, 2026
0

ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ಕೋಲ್ಕತ್ತಾದಿಂದ ಬೆಂಗಳೂರಿಗೆ ಹೊಸ ಚಾಲಕರಹಿತ (ಡ್ರೈವರ್‌ಲೆಸ್) ಮೆಟ್ರೋ ರೈಲು ಆಗಮಿಸಿದ್ದು, ಇದು ಹಳದಿ ಮಾರ್ಗದಲ್ಲಿ ಸಂಚರಿಸಲು ಸಿದ್ಧವಾಗಿದೆ....

GBA ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲೇ: EVMಗೆ ಕೊಕ್

GBA ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲೇ: EVMಗೆ ಕೊಕ್

by Shwetha
January 20, 2026
0

ಮುಂಬರುವ GBA (ಗ್ರೇಟರ್ ಬೆಂಗಳೂರು ಅಥಾರಿಟಿ) ಚುನಾವಣೆಯನ್ನು ಈ ಬಾರಿ EVM ಯಂತ್ರಗಳಿಲ್ಲದೆ, ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ರಾಜ್ಯ ಚುನಾವಣಾ ಆಯೋಗ ಮಹತ್ವದ ತೀರ್ಮಾನ ಕೈಗೊಂಡಿದೆ....

ಅಬಕಾರಿ ಸಚಿವ R.B ತಿಮ್ಮಾಪುರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಅಬಕಾರಿ ಸಚಿವ R.B ತಿಮ್ಮಾಪುರ ವಿರುದ್ಧ ಲೋಕಾಯುಕ್ತಕ್ಕೆ ದೂರು

by Shwetha
January 20, 2026
0

ಬಾರ್ ಲೈಸೆನ್ಸ್ ನೀಡುವ ವಿಚಾರದಲ್ಲಿ ಲಂಚ ಕೇಳಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಅಬಕಾರಿ ಸಚಿವ R.B ತಿಮ್ಮಾಪುರ ವಿರುದ್ಧ ಲೋಕಾಯುಕ್ತಕ್ಕೆ ಅಧಿಕೃತ ದೂರು ಸಲ್ಲಿಕೆಯಾಗಿದೆ. ಲಕ್ಷ್ಮೀನಾರಾಯಣ ಎಂಬವರು...

ನಾಲಿಗೆ ಹರಿಬಿಟ್ಟು ಸಂಕಷ್ಟಕ್ಕೆ ಸಿಲುಕಿದ ಶ್ರೀರಾಮುಲು: ಬಾಲಕಿಯ ಗುರುತು ಬಹಿರಂಗಪಡಿಸಿ ಪೋಕ್ಸೊ ಬಲೆಗೆ ಬಿದ್ದ ಮಾಜಿ ಸಚಿವ

ನಾಲಿಗೆ ಹರಿಬಿಟ್ಟು ಸಂಕಷ್ಟಕ್ಕೆ ಸಿಲುಕಿದ ಶ್ರೀರಾಮುಲು: ಬಾಲಕಿಯ ಗುರುತು ಬಹಿರಂಗಪಡಿಸಿ ಪೋಕ್ಸೊ ಬಲೆಗೆ ಬಿದ್ದ ಮಾಜಿ ಸಚಿವ

by Shwetha
January 20, 2026
0

ಬಳ್ಳಾರಿ: ಇರಲಾರದೆ ಇರುವೆ ಬಿಟ್ಕೊಳೋದು ಅಂದ್ರೆ ಇದೆನಾ ಎಂಬಂತಾಗಿದೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಪರಿಸ್ಥಿತಿ. ರಾಜ್ಯ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ಗಣಿ ಜಿಲ್ಲೆ ಬಳ್ಳಾರಿಯಲ್ಲಿ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram