ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾರು ಧಾರವಾಹಿ ನಟ ಶರತ್ ಪದ್ಮನಾಭ…
ಸ್ಯಾಂಡಲ್ ವುಡ್ ನ ಹಿರಿ ಮತ್ತು ಕಿರುತೆರೆಯಲ್ಲಿ ಇದೀಗ ಮದುವೆ ಸಂಭ್ರಮ…. ಪಾರು ಧಾರಾವಾಹಿ ಖ್ಯಾತಿಯ ಶರತ್ ಪದ್ಮನಾಭ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸಾಫ್ಟ್ವೇರ್ ಇಂಜಿನಿಯರ್ ದಿವ್ಯಶ್ರೀ ಎಂಬುವವರ ಜೊತೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
ಶರತ್ ಪದ್ಮನಾಭ ಧಾರಾವಾಹಿ ಮಾತ್ರವಲ್ಲದೇ ಸಿನಿಮಾಗಲ್ಲೂ ನಟಿಸಿದ್ದಾರೆ. 2022 ನವೆಂಬರ್ 26 ರಂದು ಮನೆಯವರ ಸಮ್ಮುಖದಲ್ಲಿ ಸಿಂಪಲ್ ಆಗಿ ಉಂಗುರ ಬದಲಾಯಿಸಿಕೊಂಡಿದ್ದರು. ಇದೀಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪಾರು’ ಧಾರಾವಾಹಿ ಮೂಲಕ ಶರತ್ ಪ್ರೇಕ್ಷಕರ ಮನ ಗೆದ್ದಿದ್ದರು. ಮದುವೆ ಸಮಾರಂಭಕ್ಕೆ ಗಟ್ಟಿಮೇಳ ಖ್ಯಾತಿಯ ರಕ್ಷಕ್, ಹಿಟ್ಲರ್ ಕಲ್ಯಾಣ ಖ್ಯಾತಿಯ ದಿಲೀಪ್ ರಾಜ್, ಅನಿರುದ್ಧ ಸೇರಿದಂತೆ ಹಲವು ಕಲಾವಿದರು ಮದುವೆಯಲ್ಲಿ ಭಾಗಿಯಾಗಿ ನವಜೋಡಿಗಳಿಗೆ ಶುಭ ಹಾರೈಸಿದ್ದಾರೆ.
Sandalwood: Paru serial actor Sarath Padmanabha who entered married life…