ನಿರ್ಮಾಕರು , ನಿರ್ದೇಶಕರು , ನಟ – ನಟಿಯರು ಹಾಗೂ ಇಡೀ ಸಿನಿಮಾ ಟೀಮ್ ಒಂದು ಸಿನಿಮಾ ಮಾಡೋದಕ್ಕೆ ಸಾಕಷ್ಟು ಕಷ್ಟ ಪಡಬೇಕು. ಒಂದು ಸಿನಿಮಾ ಹಿಂದೆ ಸಾಕಷ್ಟು ಜನರ ಶ್ರಮ ಹಾಗೂ ಕಷ್ಟಗಳು ಇರುತ್ತವೆ. ಹಾಗೆಯೇ ಸಿನಿಮಾ ಥಿಯೇಟರ್ ಗೆ ಬರೋವಾಗ ಆ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇರುತ್ತೆ. ಆದ್ರೆ ಇತ್ತೀಚೆಗೆ ಸಿನಿಮಾ ತಂಡಗಳ ಶ್ರಮವನ್ನ ವ್ಯರ್ಥವಾಗುತ್ತಿದೆ. ಪೈರೆಸಿ ಕಾಟದಿಂದ ಸ್ಟಾರ್ ಸಿನಿಮಾಗಳಿಗೂ ಸಾಕಷ್ಟು ತೊಂದರೆ ಎದುರಾಗ್ತಿದೆ.
ಇತ್ತೀಚೆಗೆ ರಿಲೀಸ್ ಆದ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಹಾಗೂ ಸಲಗಕ್ಕೂ ಕೂಡ ಪೈರೆಸಿ ಭೂತ ಪೆಟ್ಟು ನೀಡಿದೆ. ಈ ಎರಡೂ ಸಿನಿಮಾಗಳು ಪೈರಸಿ ಆಗಿದ್ದು ಥಿಯೇಟರ್ ಗಳ ರಿನೀವಲ್ ಮಾಡಿಕೊಡುವ ಬಗ್ಗೆ ವಾಣಿಜ್ಯ ಮಂಡಳಿ ಮನವಿ ಮಾಡಿದೆ. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಫಿಲ್ಮ್ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಅವರು ಮನವಿ ಸಲ್ಲಿಸಿದ್ದಾರೆ.
ಬಳಿಕ ಪೈರಸಿ ಬಗ್ಗೆ ಫಿಲ್ಮ್ ಚೇಂಬರ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಜೈರಾಜ್ ಅವರು ಮಾಹಿತಿ ನೀಡಿದ್ದಾರೆ. ಇನ್ನೂ ಪೈರಸಿ ಅನ್ನೋ ಪಿಡುಗು ಹೆಚ್ಚಾಗಿ ಕಾಡ್ತಿದೆ. ನಿಮ್ಮ ಸರ್ಕಾರ ಯಾವಾಗಲೂ ನಮಗೆ ಸ್ಪಂದಿಸಿದೆ. ನಿರ್ಮಾಪಕರು ಕೋಟ್ಯಾಂತರ ಬಂಡವಾಳ ಹಾಕುತ್ತಿದ್ದಾರೆ .
ಕೋಟಿಗೊಬ್ಬ ಸಿನಿಮಾಗೆ ಎಷ್ಟು ಸಮಸ್ಯೆ ಆಯ್ತು. ಕನ್ನಡ ಇಂಡಸ್ಟ್ರಿ ಇವತ್ತು ಪ್ಯಾನ್ ಇಂಡಿಯಾ ಇಂಡಸ್ಟ್ರಿಯಾಗಿದೆ. ಬೇರೆ ಭಾಷೆಯವರು ಇಲ್ಲಿಗೆ ಬಂದು 800-900 ಟಿಕೆಟ್ ದರ ಮಾಡ್ತಾರೆ. ಸಾಮಾನ್ಯ ಜನ ಸಿನಿಮಾವನ್ನ ಅಷ್ಟು ದರ ಕೊಟ್ಟು ಹೇಗೆ ನೋಡಬೇಕು..? ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಈ ಹಿಂದೆಯೇ ಮಲ್ಟಿಪ್ಲೆಕ್ಸ್ ಗಳಲ್ಲಿ ದರ ನಿಗಧಿಯಾಗಿತ್ತು. ನೀವೂ ನೇರವಾಗಿ ಮಾತಾಡುವ ಪ್ರವೃತ್ತಿ ಇದೆ. ನಿರ್ಮಾಪಕರ ನೆರವಿಗೆ ನಿಲ್ಲಿ ಎಂದು ಫಿಲ್ಮ್ ಚೇಂಬರ್ ಕಾರ್ಯದರ್ಶಿ ಎನ್. ಎಮ್ ಸುರೇಶ್ ಅವರು ಮನವಿ ಮಾಡಿದ್ದಾರೆ.