ADVERTISEMENT
Wednesday, March 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಅನ್ನದಾತರ ಹೋರಾಟಕ್ಕೆ ಶಿವಣ್ಣ ಸಾಥ್ : ರೈತರ ಬೆನ್ನಿಗೆ ನಿಂದ ಚಂದನವನ..!

Namratha Rao by Namratha Rao
December 8, 2020
in Cinema, Newsbeat, ಮನರಂಜನೆ
shivanna
Share on FacebookShare on TwitterShare on WhatsappShare on Telegram

ಅನ್ನದಾತರ ಹೋರಾಟಕ್ಕೆ ಶಿವಣ್ಣ ಸಾಥ್ : ರೈತರ ಬೆನ್ನಿಗೆ ನಿಂದ ಚಂದನವನ..!

ಕೇಂದ್ರದ ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಕಳೆದ 13 ದಿನಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಇಂದು ಇದೇ ಭಾಗವಾಗಿ ಭಾರತ್ ಬಂದ್ ಗೆ ಕರೆ ನೀಡಲಾಗಿದ್ದು, ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು, ಕಾಂಗ್ರೆಸ್ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಇತ್ತ ಸ್ಯಾಂಡಲ್ ವುಡ್ ತಾರೆಯರು ಸಹ ಅನ್ನದಾತರ ಹೆಗಲಿಗೆ ನಿಂತಿದ್ದಾರೆ.

Related posts

By chanting the Sri Kanakadhara Stotra while sitting in this direction, you will get unbelievable benefits like miracles...!!!

ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ…!!!

March 17, 2026
ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

March 17, 2026

ಶಿವರಾಜ್ ಕುಮಾರ್

former protest
former protest

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಹ ರೈತರಿಗೆ ಬೆಂಬಲ ನೀಡೋದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಶಿವರಾಜ್ ಕುಮಾರ್ ಅವರು ,  ‘ರೈತ ದೇಶದ ಬೆನ್ನೆಲುಬು, ರೈತ ಇದ್ರೇನೆ ದೇಶ. ಅವರ ಕಷ್ಟಕ್ಕೆ ನಾವು ಯಾವಾಗಲೂ ಜೊತೆ ಇರುತ್ತೇವೆ. ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ’ ಎಂದು ರೈತರ ಪ್ರತಿಭಟನೆಗೆ ಸಪೋರ್ಟ್ ಮಾಡಿದ್ದಾರೆ.

ಶಶಿ , ಬಿಗ್ ಬಾಸ್ ಸ್ಪರ್ಧಿ

ಬಿಗ್‌ಬಾಸ್ ಖ್ಯಾತಿಯ ಶಶಿ, ರೈತ ಹೋರಾಟದ ಪರ ನಿಂತಿದ್ದು, ಇಂದು ಬೆಂಗಳೂರಿನ ಮೌರ್ಯ ವೃತ್ತದಲ್ಲಿ ನಡೆದ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿರುವ ಅವರು ಕಳೆದ ಬಾರಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದೆವು, ಆದರೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಲಿಲ್ಲ. ಈ ಸರ್ಕಾರವು ತನಗೆ ತೋಚಿದ್ದೆ ಸರಿ ಎಂಬ ಧೋರಣೆಯೊಂದಿಗೆ ಮುಂದೆ ಸಾಗುತ್ತಿದೆ. ಪ್ರತಿಭಟನಾ ನಿರತ ರೈತರೊಂದಿಗೆ ಸರ್ಕಾರ ಮಾತುಕತೆ ನಡೆಸಿ, ಕಾಯ್ದೆಯಲ್ಲಿನ ನಕಾರಾತ್ಮಕ ಅಂಶಗಳನ್ನು ತೆಗೆದು ಸಕಾರಾತ್ಮಕ ಅಂಶಗಳನ್ನು ಉಳಿಸಿಕೊಂಡರೆ, ಕೇಂದ್ರ ಸರ್ಕಾರಕ್ಕೂ ಸೂಕ್ತ, ರೈತರಿಗೂ ಸೂಕ್ತ. ಅನ್ನ-ತರಕಾರಿ ತಿನ್ನುವ ಪ್ರತಿಯೊಬ್ಬರು, ರೈತ ಹೋರಾಟವನ್ನು ಬೆಂಬಲಿಸಬೇಕು ಎಂದಿದ್ದಾರೆ.former protest

ಕವಿರಾಜ್

ಹಾಡುರಚನೆಗಾರ ಮತ್ತು ನಿರ್ದೇಶಕರಾಗಿರುವ ಕವಿರಾಜ್  ಅವರು ಸಹ ರೈತರ  ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಕಿವವಿರಾಜ್ ಅವರು ‘ಹೊಸ ರೈತ ಮಸೂದೆಯಿಂದ ಅಂತಿಮವಾಗಿ ರೈತರಿಗಿಂತ ಹೆಚ್ಚು ಸಂಕಷ್ಟಕ್ಕೆ ಒಳಗಾಗುವುದು ಸಾಮಾನ್ಯ ನಾಗರೀಕರೇ. ಮೂರು ಹೊತ್ತಿನ ತುತ್ತಾಗಿ ಪ್ರತಿ ಜನರ ಪ್ರತೀ ದಿನದ ಅವಶ್ಯಕತೆಯಾದ ಕೃಷಿ , ಆಹಾರ ಉತ್ಪನ್ನಗಳ ಉತ್ಪಾದನೆ ಮತ್ತು ಸರಬರಾಜು ಜಾಲವು ಒಂದು ಬಾರಿ ಸಂಪೂರ್ಣವಾಗಿ ಕಾರ್ಪೋರೇಟ್ ಕಂಪೆನಿಗಳ ಏಕಸ್ವಾಮ್ಯದ ಕಪಿಮುಷ್ಟಿಗೆ ಬಂದರೆ ಮುಗಿಯಿತು. ಖಂಡಿತಾ ಅದು ರೈತರ ಅಥವಾ ಗ್ರಾಹಕರ ಹಿತಕಾಯುವುದಿಲ್ಲ‌. ಅದರ ಮೊದಲ ಗುರಿಯೇ ತನ್ನ ‘ಕಿಲ್ಲಿಂಗ್ ಇನ್ಸ್ಟಿಂಕ್ಟ್’ ಉಳ್ಳ ಸ್ಪರ್ಧಾತ್ಮಕತೆಯಿಂದ ಕೆಲವೇ ವರ್ಷಗಳಲ್ಲಿ ಪರ್ಯಾಯ ವ್ಯವಸ್ಥೆ ಆಗಿರುವ ಎಪಿಎಂಸಿ ಮತ್ತು ಇನ್ನಿತರ ವ್ಯವಸ್ಥೆಯನ್ನು ಮಟ್ಟಹಾಕುವುದು. ಎಪಿಎಂಸಿ ವ್ಯವಸ್ಥೆ , ಈಗಿರುವ ದಲ್ಲಾಳಿ ವ್ಯವಸ್ಥೆ ಲಾಭಕೋರತನದಲ್ಲಿ ಮೀನಾದರೆ ಕಾರ್ಪೊರೇಟ್ ವ್ಯವಸ್ಥೆ ತೀರದ ಹಸಿವಿನ ತಿಮಿಂಗಿಲವಿದ್ದಂತೆ. ಎಪಿಎಂಸಿ ವ್ಯವಸ್ಥೆಗೆ ಕೇವಲ ಸರಜರಾಜಿನ ಮೇಲೆ ಹಿಡಿತ ಇತ್ತಷ್ಟೇ. ಆದರೆ ಹೊಸ ಕೃಷಿ ಕಾಯಿದೆ ಕಾರ್ಪೋರೇಟ್ ಗಳಿಗೆ ಉತ್ಪಾದನೆಯ ಮೇಲೂ ಹಿಡಿತ ಸಾಧಿಸಲು ಅವಕಾಶ ಕೊಡುತ್ತದೆ. ಅದು ಅತ್ಯಂತ ಅಪಾಯಕಾರಿ ‌former protest

ಕಾರ್ಪೊರೇಟ್ ಕುಳಗಳು ತಮ್ಮಲ್ಲಿರುವ ಅಪಾರ ಬಂಡವಾಳ ಹಾಗೂ ತಮ್ಮ ಕೈ ಗೊಂಬೆ ಆಗಿರುವ ರಾಜಕೀಯ ವ್ಯವಸ್ಥೆಯನ್ನು ಬಳಸಿ ಕೆಲವೇ ವರ್ಷಗಳಲ್ಲಿ ಅದರ ಹೊರತಾಗಿ ಇನ್ನಾರ ಕೈಗೂ ಕೃಷಿ ಉತ್ಪನ್ನಗಳು ಸಿಗದಂತೆ ಚಕ್ರವ್ಯೂಹ ರಚಿಸುತ್ತದೆ. ನಂತರ ದಿನನಿತ್ಯದ ಆಹಾರಗಳನ್ನು ಚಂದವಾಗಿ ಪ್ಯಾಕಿಂಗ್ ಮಾಡೀ ಮಿರಮಿರ ಮಿಂಚುವ ಶೋರೂಂಗಳಲ್ಲಿ ಇಟ್ಟು ಮನಬಂದ ಬೆಲೆ ನಿಗದಿ ಮಾಡುತ್ತಾರೆ.   ( ತಿಂಗಳಿಗೆ 150 ರೂಪಾಯಿಗೆ ಕೇಬಲ್ ವ್ಯವಸ್ಥೆಯಲ್ಲಿ 300 ಚಾನೆಲ್ ನೋಡುತ್ತಿದ್ದ ಜಾಗದಲ್ಲಿ ಕಾರ್ಪೋರೇಟ್ ಕಂಪೆನಿಗಳ ಪ್ರವೇಶವಾಗಿ ಐನೂರು,ಸಾವಿರ ಕೊಟ್ಟು ಒಂದಷ್ಟು ಸೆಲೆಕ್ಟೆಡ್ ಚಾನೆಲ್ಸ್ ನೋಡಿದಂತೆ ) ಉಳ್ಳವರೇನೋ “ಆಹಾ ಭಾರತ ಅಮೇರಿಕಾವಾಗಿದೆ” ಎಂದು ಕೊಂಡು ತಿನ್ನುತ್ತಾರೆ . ಆದರೆ ಸಾಮಾನ್ಯ ಜನರಿಗೆ ತಳ್ಳು ಗಾಡಿಯವರ ಬಳಿ ಚೌಕಾಸಿ ಮಾಡಿ ಹತ್ತಿಪ್ಪತ್ತು ರೂಪಾಯಿ ಕಡಿಮೆ ಕೊಟ್ಟು , ಒಂದೆರೆಡು ಎಕ್ಸ್ಟ್ರಾ ಹಾಕಿಸಿಕೊಂಡು ಬಂದಂತಲ್ಲ‌. ದುಬಾರಿ ತರಕಾರಿ ಧಾನ್ಯಗಳನ್ನು ಕೊಳ್ಳಲಾಗದೆ ಬರೀ ಗಂಜಿ ಕುಡಿಯಬೇಕಾಗುತ್ತಷ್ಟೇ. ನಿಜಾ ಎಂದರೆ ಇದು ರೈತಹೋರಾಟಕ್ಕಿಂತ ಜನಸಾಮಾನ್ಯರ ಹೋರಾಟ ಆಗಬೇಕಿತ್ತು.

ಆದರೆ ಜನಸಾಮಾನ್ಯರಿಗೆ ತಮ್ಮ ಬುಡಕ್ಕೆ ಬರುವವರೆಗೆ ಇದೆಲ್ಲಾ ಅರ್ಥವಾಗದಷ್ಟು ಹಗಲುಗುರುಡು ಆವರಿಸಿದೆ’. ಎಂದು ಬರೆದುಕೊಂಡಿದ್ದಾರೆ.

ಇನ್ನೂ ರೈತರ ಪ್ರತಿಭಟನೆಗೆ  ನಟ ಚೇತನ್ , ನಟ ಪ್ರಕಾಶ್ ರೈ ಸಹ ಬೆಂಬಲಿಸಿದ್ದಾರೆ.

ಚಿರು ಪುತ್ರ, ಮೇಘನಾ ರಾಜ್ ಗೆ ಕೊರೊನಾ ಪಾಸಿಟಿವ್

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Bharath bandformers protestSandalwoodshivarajakumar
ShareTweetSendShare
Join us on:

Related Posts

By chanting the Sri Kanakadhara Stotra while sitting in this direction, you will get unbelievable benefits like miracles...!!!

ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ…!!!

by admin
March 17, 2026
0

ನಮಸ್ಕಾರ ಸ್ನೇಹಿತರೆ ಕನಕಧಾರ ಸ್ತೋತ್ರವನ್ನು ಮನೆಯಲ್ಲಿ ಪಠನೆ ಮಾಡುವುದರಿಂದ ಯಾವ ರೀತಿಯ ಫಲಗಳು ದೊರೆಯುತ್ತವೆ ಹಾಗೆಯೇ ಕನಕಧಾರಾ ಸ್ತೋತ್ರವನ್ನು ಪಠಿಸುವಾಗ ಯಾವ ನಿಯಮಗಳನ್ನು ಮುಖ್ಯವಾಗಿ ಅನುಸರಿಸಬೇಕು ಎಂಬುವುದರ...

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

by Shwetha
March 17, 2026
0

ಮಾರ್ಚ್ 17 ಕರುನಾಡಿಗೆ ಕೇವಲ ಒಂದು ದಿನಾಂಕವಲ್ಲ, ಅದೊಂದು ಹಬ್ಬ. ಕನ್ನಡ ಚಿತ್ರರಂಗದ ಹೆಮ್ಮೆಯ ಪುತ್ರ, ಕರುನಾಡಿನ ಅಚ್ಚುಮೆಚ್ಚಿನ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ...

1200 ಚದರಡಿ ಮೇಲ್ಪಟ್ಟ ಕಟ್ಟಡಗಳಿಗೆ ಓಸಿ ಕಡ್ಡಾಯ ಸಚಿವ ಭೈರತಿ ಸುರೇಶ್ ಖಡಕ್ ಎಚ್ಚರಿಕೆ

1200 ಚದರಡಿ ಮೇಲ್ಪಟ್ಟ ಕಟ್ಟಡಗಳಿಗೆ ಓಸಿ ಕಡ್ಡಾಯ ಸಚಿವ ಭೈರತಿ ಸುರೇಶ್ ಖಡಕ್ ಎಚ್ಚರಿಕೆ

by Shwetha
March 17, 2026
0

ರಾಜಧಾನಿ ಬೆಂಗಳೂರಿನಲ್ಲಿ ಸ್ವಂತದ್ದೊಂದು ಸಣ್ಣ ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ಬದುಕಬೇಕು ಎಂದು ಕನಸು ಕಾಣುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ರಾಜ್ಯ ಸರ್ಕಾರವು ಬಹುದೊಡ್ಡ ರಿಲೀಫ್...

ಯುದ್ಧದ ಪರಿಣಾಮ.. ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

ಯುದ್ಧದ ಪರಿಣಾಮ.. ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

by Shwetha
March 17, 2026
0

ಇರಾನ್, ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಯುದ್ಧದ ಪರಿಣಾಮ ಕರ್ನಾಟಕದ ಆರ್ಥಿಕತೆಯ ಮೇಲೂ ಪ್ರಭಾವ ಬೀರಲು ಆರಂಭಿಸಿದೆ. ಯುದ್ಧದ ಪರಿಣಾಮವಾಗಿ ದೇಶಾದ್ಯಂತ...

ಪಿಂಕ್ ಲೈನ್ ಮೆಟ್ರೋಗೆ ಬಂದಿಳಿದ ನಾಲ್ಕನೇ ರೈಲು

ಪಿಂಕ್ ಲೈನ್ ಮೆಟ್ರೋಗೆ ಬಂದಿಳಿದ ನಾಲ್ಕನೇ ರೈಲು

by Shwetha
March 17, 2026
0

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನಮ್ಮ ಮೆಟ್ರೋ ವಿಸ್ತರಣೆಯ ಭಾಗವಾಗಿ ಪಿಂಕ್ ಲೈನ್‌ನಲ್ಲಿ ಸೇವೆ ಆರಂಭಿಸಲು ಸಿದ್ಧತೆಗಳನ್ನು ವೇಗಗೊಳಿಸಿದೆ. ಮೇ ತಿಂಗಳಲ್ಲಿ ಪಿಂಕ್ ಲೈನ್ ಮೆಟ್ರೋ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram