sandalwood
ಇಡೀ ರಾಜ್ಯದ್ಯಂತ ಇಂದು ಕನ್ನಡ ರಾಜ್ಯೋತ್ಸವ ಸಂಭ್ರಮ ಜೋರಾಗಿದೆ. ಕನ್ನಡ ರಾಜ್ಯೋತ್ಸವ ಸಂಭ್ರಮ ನಾಡಿನಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣವಂತೂ ಇಂದು ಕನ್ನಡಮಯವಾಗಿಬಿಟ್ಟಿದೆ. ಕನ್ನಡ ಅಭಿಮಾನಿಗಳು ನೆಟ್ಟಿಗರು , ಸ್ಯಾಂಡಲ್ ವುಡ್ ತಾರೆಯರು ಟ್ವಿಟ್ಟರ್, ಫೇಸ್ ಬುಕ್, ಇನ್ಸ್ಟಾಗ್ರಾಂ ಮೂಲಕ ಕನ್ನಡ ರಾಜ್ಯೋತ್ಸವದ ಶುಭಕೋರಿದ್ದಾರೆ. ವಿಶೇಷ ಅಂದ್ರೆ ತಮ್ಮ ಚಿತ್ರದ ಟೀಸರ್, ಪೋಸ್ಟರ್ ರಿಲೀಸ್ ಮಾಡಿ ಕೆಲ ನಟರು ಸಂಸತ ಹಂಚಿಕೊಂಡಿದ್ದಾರೆ.
ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಅವರು ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿ ”ಹೆತ್ತ ತಾಯಿ ಕನ್ನಡತಿಯಾದರೆ ಹೊತ್ತ ತಾಯಿ “ಕನ್ನಡ”, ಹಾರುತಲಿರಲಿ ನಮ್ಮ ತಾಯ್ನಾಡಿನ ಸಂಸ್ಕೃತಿಯ ಬಣ್ಣಗಳ ಪತಾಕೆ, ಝೇಂಕರಿಸಲಿ ಕರುನಾಡಿನ ಘೋಷ ವಾಕ್ಯ,, ಹರಡಲಿ ಎಲ್ಲೆಡೆ ಕನ್ನಡದ ಕಂಪು., ಕನ್ನಡಾಂಬೆಯ ಸಮಸ್ತ ಕುಲಕೋಟಿಗೆ ಕನ್ನಡ ರಾಜ್ಯೋತ್ಸವ ದ ಹಾರ್ದಿಕ ಶುಭಾಶಯಗಳು..” ಎಂದಿದ್ದಾರೆ.
ಪುನೀತ್ ರಾಜ್ ಕುಮಾರ್
ಇನ್ನೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಹ ಕನ್ನಡ ರಾಜ್ಯೋತ್ಸಕ್ಕೆ ಶುಭಹಾರೈಸಿದ್ದಾರೆ. ”ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ! ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು” ಎಂದು ವಿಶ್ ಮಾಡಿದ್ದಾರೆ.
ಸಿಂಪಲ್ ಸುನಿ
ಸ್ಯಾಂಡಲ್ ವುಡ್ ನಿರ್ದೇಶಕ ಸಿಂಪಲ್ ಸುನಿ ಅವರು”ಮಾತೃಭಾಷೆಯವರಿಗೆ,,ಮಾತಾಡುವವರಿಗೆ ಪ್ರೀತಿಸುವವರಿಗೆ,,ಹಾಡುವವರಿಗೆ,, ಕೂಗುವವರಿಗೆ,,ಕೇಳುವವರಿಗೆ,, ಗೌರವಕೊಟ್ಟವರಿಗೆ,,ಗೌರವತಂದವರಿಗೆ ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು … ಉಳಸಿ..ಬೆಳಸಿ..ಬಳಸಿ ಕನ್ನಡವೇ ಸತ್ಯ.. ಕನ್ನಡವೇ ನಿತ್ಯ..” ಎಂದು ಕನ್ನಡ ರಾಜ್ಯೋತ್ಸಕ್ಕೆ ಶುಭಕೋರಿದ್ದಾರೆ.
ನವರಸ ನಾಯಕ ಜಗ್ಗೇಶ್
ನಟ ಜಗ್ಗೇಶ್ ಅವರು ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, ”ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯ” ಎಂದು ಟ್ವಿಟ್ಟರ್ನಲ್ಲಿ ಶುಭ ಕೋರಿದ್ದಾರೆ.
ಡಾಲಿ ಧನಂಜಯ್
ಡಾಲಿ ಧನಂಜಯ್ ವಿಶೇಷವಾಗಿ ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿ ”ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು” ಎಂದು ವಿಶ್ ಮಾಡಿದ್ದಾರೆ. ವಿಶೇಷ ಅಂದ್ರೆ ರಾಜ್ಯೋತ್ಸವದ ಪ್ರಯುಕ್ತ ತಾವು ನಿರ್ಮಿಸಿ ನಟಿಸಿರುವ ಬಡವ ರಾಸ್ಕಲ್ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ.
sandalwood
‘ಪೆಟ್ರೋಮ್ಯಾಕ್ಸ್’ ಮೊದಲ ಹಂತದ ಚಿತ್ರೀಕರಣ 12 ದಿನದಲ್ಲಿ ಮುಕ್ತಾಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel