sandalwood
ಇಂದು ಇಡೀ ವಿಶ್ವಾದ್ಯಂತ ದೀಪಗಳ ಹಬ್ಬವನ್ನ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗ್ತಿದೆ. ಕೊರೊನಾ ಸಂಕಷ್ಟದ ನಡುವೆಯೂ ರಾಜ್ಯದಲ್ಲಿ ದೀಪಾವಳಿ ಸಂಭ್ರಮ ಮನೆಮಾಡಿದೆ. ಇತ್ತ ಸ್ಯಾಂಡಲ್ ವುಡ್ ನ ತಾರೆಯರು ಸಹ ಸಾಮಾಜಿಕ ಜಾಲತಾಣಗಳ ಮೂಲಕ ವಿಶೇಷವಾಗಿ ದೀಪಾವಳಿಗೆ ವಿಶ್ ಮಾಡಿದ್ದಾರೆ.
ಕಿಚ್ಚ ಸುದೀಪ್
‘ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು’ ಎಂದು ಶಾರ್ಟ್ ಅಂಡ್ ಸ್ವೀಟ್ ಆಗಿ ವಿಶ್ ಮಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್
‘ಬದುಕಿನ ಅಂಧಕಾರಗಳೆಲ್ಲವೂ ದೂರವಾಗಿ ಎಲ್ಲರ ಮನೆ ಮನಗಳಲ್ಲಿ ನೆಮ್ಮದಿ, ಖುಷಿ ಸಡಗರ ತುಂಬಿ ತುಳುಕಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತ, ತೂಗುದೀಪ ಪರಿವಾರದಿಂದ ಸರ್ವರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು – ನಿಮ್ಮ ದಾಸ ದರ್ಶನ್ ‘ ಎಂದು ಶುಭಾಶಯ ತಿಳಿಸಿದ್ದಾರೆ.
ನವರಸ ನಾಯಕ ಜಗ್ಗೇಶ್
‘ಬೆಳಕಿನೆಡೆಗೆ ಸಾಗುತ್ತಿರಿ ನೀವು ಸಂತೋಷಪಟ್ಟು ಅನ್ಯರಿಗೂ ಸಂತೋಷ ನೀಡಿ.ಶುಭದಿನ ಶುಭೋದಯ.
ಮನುಷ್ಯ ಎಂದರೆ ಜ್ಞಾನವುಳ್ಳ ಜೀವ..!! ಪ್ರಾಣಿ ಎಂದರೆ ಜ್ಞಾನವಿಲ್ಲದ ಜೀವ..!!ಜ್ಞಾನವುಳ್ಳ ಮನುಷ್ಯನಂತೆ ಅನ್ಯರಿಗೆ ತೊಂದರೆ ಕೊಡದಂತೆ ಬೆಳಕಿನ ಹಬ್ಬ ಆಚರಿಸುವ..!!’ ಎಂದು ಶುಭಾಶಯ ತಿಳಿಸಿದ್ದಾರೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
‘ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು ಜೈ ಆಂಜನೇಯ’ ಎಂದು ವಿಶ್ ಮಾಡಿ ತಮ್ಮ ಫೋಟೋವೊಂದನ್ನ ಶೇರ್ ಮಾಡಿಕೊಂಡಿದ್ದಾರೆ.
ಡಾಲಿ ಧನಂಜಯ್
‘ದೀಪದಿಂದ ದೀಪವ ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚಿರೋ. ದೀಪಾವಳಿ ಹಬ್ಬದ ಶುಭಾಶಯಗಳು’ ಎಂದಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ
‘ಜನರಿಂದ ಒಂದು ಗುಂಪು ನಾಯಕರಾಗಿ ಅಧಿಕಾರ ಚಲಾಯಿಸುವ ವ್ಯವಸ್ಥೆ ಪ್ರಜಾಪ್ರಭುತ್ವವೇ ? 2. ಜನರೇ ತಂತ್ರಜ್ಞಾನದಿಂದ ಸರಳವಾಗಿ ನಾಯಕರಾಗಿ ಪಾಲ್ಗೊಂಡು ಅಧಿಕಾರ ನಡೆಸುವ ವ್ಯವಸ್ಥೆ ಪ್ರಜಾಪ್ರಭುತ್ವವೇ ? ಯಾವುದು ಸರಿ ? ವಿಚಾರದ ದೀಪ ನಮ್ಮಲ್ಲೇ ಬೆಳಗಿಸಿಕೊಳ್ಳುವುದರ ಜೊತೆ ಹಬ್ಬ ಆಚರಿಸೋಣ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು’ ಎಂದು ತಿಳಿಸಿದ್ದಾರೆ.
ಸಿಂಪಲ್ ಸುನಿ
‘ದೀಪಾವಳಿ ಶುಭ ಕೋರಲು ,, ನಾಸಾದವರು ಇಂದು ರಾತ್ರಿ ಪಿಕ್ ತೆಗೆದು Watsapp ಯೂನಿವರ್ಸಿಟಿಗೆ ಕಳುಹಿಸುವ ಪಿಕ್ ಗಾಗಿ ಕಾಯುತ್ತಿದ್ದೇನೆ… ಶಬ್ಧ ಹಾಗೂ ವಾಯುಮಾಲಿನ್ಯ ಮಾಡುವ ಪಟಾಕಿ ಬಿಟ್ಟಾಕಿ ಬಾಹ್ಯ ಹಾಗೂ ಅಂತರಂಗದಲ್ಲಿರುವ ಕೆಟ್ಟದ್ದನ್ನು ಸುಟ್ಟಾಕಿ ಎಲ್ಲರಿಗೂ ದೀಪಾವಳಿಯ ಶುಭಹಾರೈಕೆಗಳು..’ ಎಂದಿದ್ದಾರೆ.
ಪ್ರಣಿತಾ
ನಟಿ ಪ್ರಣಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ದೀಪಗಳ ಜೊತೆಗಿನ ಸುಂದರವಾದ ವಿಡಿಯೋ ಹಂಚಿಕೊಂಡು ಎಲ್ಲರಿಗೂ ಹಬ್ಬದ ಶುಭಾಷಯ ಕೋರಿದ್ದಾರೆ. ‘ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು’ ಎಂದು ಅಡಿಬರಹ ಕೊಟ್ಟಿದ್ದಾರೆ.
sandalwood
ದೀಪಗಳ ಹಬ್ಬ ದೀಪಾವಳಿ ಹಬ್ಬ..! ವಿಶೇಷತೆಗಳು, ಪುರಾಣ ಇತಿಹಾಸಗಳು
ರಾಜಕೀಯದ ‘ ಕೌರವನಿ’ಗೆ ಹುಟ್ಟುಹಬ್ಬದ ಸಂಭ್ರಮ : ಸಿಎಂ ಸೇರಿ ಅನೇಕರಿಂದ ‘ಶುಭಾಶಯ’
ಪಂಡಿತ್ ನೆಹರೂ ಜನ್ಮದಿನ: ಗೌರವ ನಮನ ಸಲ್ಲಿಸಿದ ಸಿಎಂ ಬಿಎಸ್ ವೈ
‘ದೀಪಾವಳಿ ಶುಭಾಶಯ’ : ಕನ್ನಡದಲ್ಲೇ ಶುಭ ಕೋರಿದ ರಾಜ್ಯಪಾಲ ವಜುಬಾಯಿವಾಲ
ಇಂದು ಮಕ್ಕಳ ದಿನಾಚರಣೆ: ಚಾಚಾ ನೆಹರು ಅವರ 131ನೇ ಜನ್ಮದಿನ: ನೆಹರು ಅವರನ್ನು ಸ್ಮರಿಸಿದ ಮೋದಿ
ದೀಪಗಳ ಹಬ್ಬ ದೀಪಾವಳಿ ಹಬ್ಬ..! ವಿಶೇಷತೆಗಳು, ಪುರಾಣ ಇತಿಹಾಸಗಳು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








