ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಆಸೀಸ್ ಅಭಿಮಾನಿಗಳಿಗೆ ತಿರುಗೇಟು ನೀಡಿದ್ದು, 2018ರ ‘ಸ್ಯಾಂಡ್ ಪೇಪರ್’ ವಿವಾದವನ್ನು ನೆನಪಿಸಿದ್ದಾರೆ.
– ಸರಣಿ ಫಲಿತಾಂಶ: ಆಸ್ಟ್ರೇಲಿಯಾ 3-1 ಅಂತರದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಿದೆ.
ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ಸ್ಯಾಂಡ್ ಪೇಪರ್ ಬಳಸುತ್ತಿದ್ದಾರೆ ಎಂಬ ವಿವಾದ ಮೈದಾನದಲ್ಲಿ ಕಾಣಿಸಿಕೊಂಡಿತು. ಬುಮ್ರಾ ತಮ್ಮ ಶೂನಲ್ಲಿ ಏನೋ ಇಟ್ಟುಕೊಂಡಿದ್ದಾರೆ ಎಂದು ಆಸಿಸ್ ಅಭಿಮಾನಿಗಳು ಪದೇ ಪದೇ ಭಾರತೀಯ ಆಟಗಾರರನ್ನು ಕೆಣಕುತ್ತಿದ್ದರು 2ನೇ ಇನ್ನಿಂಗ್ಸ್ ವೇಳೆ ಸ್ಟೀವ್ ಸ್ಮಿತ್ ಔಟಾದಾಗ, ಕೊಹ್ಲಿ ತನ್ನ ಎರಡು ಜೇಬನ್ನು ಹೊರತೆಗೆದು “ನಮ್ ಹತ್ರ sandpaper ಇಲ್ಲ ಗುರು” ನೋಡು ಎಂದು ತಿರುಗೇಟು ನೀಡಿದರು.
– ಬುಮ್ರಾ ವಿರುದ್ಧ ಆರೋಪ: ಆಸೀಸ್ ಅಭಿಮಾನಿಗಳು ಜಸ್ಪ್ರೀತ್ ಬುಮ್ರಾ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ್ದು, ಆರ್. ಅಶ್ವಿನ್ ಕೂಡ ಇದಕ್ಕೆ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ:
– ಕೊಹ್ಲಿಯ ಈ ತಿರುಗೇಟು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
– ಬುಮ್ರಾ ವಿರುದ್ಧದ ಆರೋಪಕ್ಕೆ ಅಶ್ವಿನ್ “ಅದು ಫಿಂಗರ್ ಪ್ರೊಟೆಕ್ಷನ್ ಪ್ಯಾಡ್” ಎಂದು ಸ್ಪಷ್ಟನೆ ನೀಡಿದ್ದಾರೆ.