ವಿಂಬಲ್ಡನ್ ಟೆನಿಸ್ – ಮತ್ತೆ ಅಂಗಣದಲ್ಲಿ ಕಾಣಿಸಿಕೊಂಡ ಭಾರತ ಟೆನಿಸ್ ತಾರೆ ಸಾನಿಯಾ ಮಿರ್ಜಾ
ಭಾರತ ಟೆನಿಸ್ ತಾರೆ ಮತ್ತೆ ಟೆನಿಸ್ ಅಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಆಲ್ ಇಂಗ್ಲೆಂಡ್ ಕ್ಲಬ್ ನ ಹಸಿರು ಹುಲ್ಲಿನ ಅಂಗಣದಲ್ಲಿ ಸಾನಿಯಾ ಮಿರ್ಜಾ ಮತ್ತೆ ತನ್ನ ಸಾಮಥ್ರ್ಯವನ್ನು ಅನಾವರಣಗೊಳಿಸಲಿದ್ದಾರೆ.
ಮಗುವಿನ ತಾಯಿ ಆಗಿರುವ ಸಾನಿಯಾ ಮಿರ್ಜಾ ಈ ಬಾರಿಯ ವಿಂಬಲ್ಡನ್ ಟೂರ್ನಿಯ ಮಹಿಳೆಯರ ಡಬಲ್ಸ್ ನಲ್ಲಿ ಕಣಕ್ಕಿಳಿಯಲಿದ್ದಾರೆ. ಅಂದ ಹಾಗೇ ಸಾನಿಯಾ ಮಿರ್ಜಾ ಅವರ ಜೊತೆಗಾರ್ತಿ ಅಮೆರಿಕಾದ ಬೆಥಾನಿ ಮಾಟೆಕ್.
ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತು ಬೆಥಾನಿ ಮಾಟೆಕ್ ಅವರು ಅಮೆರಿಕಾದ ಡೆಸಿರೆ ಕ್ರಾವೇಝಕ್ ಮತ್ತು ಚಿಲಿಯ ಅಲೆಕ್ಸಾ ಗೌರಚಿ ಅವರನ್ನು ಎದುರಿಸಲಿದ್ದಾರೆ.
ಸಾನಿಯಾ ಮಿರ್ಜಾ ಅವರು ಇಲ್ಲಿಯವರೆಗೆ ಒಟ್ಟು ಮೂರು ಡಬಲ್ಸ್ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 2009ರ ಆಸ್ಟ್ರೇಲಿಯನ್ ಓಪನ್, 2014ರ ಯುಎಸ್ ಓಪನ್ ಮತ್ತು 2015ರ ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. 2012ರ ಫ್ರೆಂಚ್ ಓಪನ್ ನಲ್ಲಿ ರನ್ನರ್ ಅಪ್ ಪಡೆದುಕೊಂಡಿದ್ದರು.