Saniya Mirza : ಪಬ್ಲಿಸಿಟಿಗಾಗಿ ಜನರ ಭಾವನೆಗಳ ಜೊತೆಗೆ ಆಟವಾಡಿದ್ರಾ..!?
ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ತನ್ನ ಪತಿ ಮಾಜಿ ಪಾಕ್ ಕ್ರಿಕೆಟಿಗ ಶೋಯಿಬ್ ಮಲಿಕ್ ಜೊತೆಗೆ ವಿಚ್ಛೇಧನ ಪಡೆಯುತ್ತಿದ್ದಾರೆಂಬ ಸುದ್ದಿ ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ..
ಆದ್ರೆ ಇದೀಗ ಇಬ್ಬರೂ ಒಟ್ಟಿಗೆ ಶೋ ಘೋಷಿಸಿದ್ದು , ಇಷ್ಟು ದಿನಗಳ ಕಾಲ ಜೋಡಿ ಮಾಡಿದ್ದು ಕೇವಲ ನಾಟಕ ,,, ಪಬ್ಲಿಸಿಟಿ ಗಿಮಿಕ್ ಅಷ್ಟೇ ಎಂದು ಹಿಗ್ಗಾಮುಗ್ಗಾ ಟ್ರೋಲ್ ಗೆ ಗುರಿಯಾಗಿದ್ದಾರೆ..
ಉರ್ದುಫ್ಲಿಕ್ಸ್ ನಲ್ಲಿ ರಿಯಾಲಿಟಿ ಶೋನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ, ಇದು ಅನೇಕ ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ.
ಕಳೆದ ವಾರವೆಲ್ಲಾ ಇಬ್ಬರೂ ಬೇರೆಯಾಗುತ್ತಾರೆ ಮತ್ತು ಅಂತಿಮವಾಗಿ ವಿಚ್ಛೇದನದ ಹಾದಿ ಹಿಡಿದಿದ್ದಾರೆ ಎಂಬ ವದಂತಿಗಳಿವೆ. ಈ ಬಗ್ಗೆ ಸಾನಿಯಾ ಮತ್ತು ಶೋಯೆಬ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಅಭಿಮಾನಿಗಳು ವರದಿಗಳು ಸುಳ್ಳೇ ಅಥವಾ ಇದು ಪ್ರಚಾರದ ಸ್ಟಂಟ್ ಎಂದು ಆಶ್ಚರ್ಯ ಪಡುತ್ತಿದ್ದಾರೆ.








