ಹೆರಿಗೆ ಸಮಯದ ವೀಡಿಯೋ ಹಂಚಿಕೊಂಡ ನಟಿ ಸಂಜನಾ ಗಲ್ರಾನಿ…
ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿರುವ ಸುದ್ದಿ ನಿಮಗೆ ಗೊತ್ತೇ ಇದೆ.. ಇದೀಗ ತಮ್ಮ ಡಿಲೆವರಿ ಸಮಯದ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಸಂಜನಾ ಸದ್ದು ಮಾಡಿದ್ದಾರೆ.
ಸಂಜಾನ ಸಿಸರೇನ್ ಮೂಲಕ ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಮಯದಲ್ಲಿ ತೆಗೆದ ಸಿಸರೇನ್ ಸಮಯದ ವಿಡಿಯೋ ಇದಾಗಿದೆ.. ಮಗುವನ್ನ ಹೊರ ತೆಗೆದು ಒಕ್ಕಳ ಬಳ್ಳಿ ಕತ್ತರಿಸಿರುವ ವಿಡಿಯೋವನ್ನ ಹಂಚಿಕೊಂಡಿದ್ದು , ವೈದ್ಯರಿಗೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ.. ಈ ಮೂಲಕ ತಮಗೆ ಹೆರಿಗೆ ಮಾಡಿಸಿದ ಡಾಕ್ಟರ್ ಹೇಮಾ ನಂದಿನಿ ಅವರಿಗೆ ಸಂಜನಾ ಧನ್ಯವಾದ ತಿಳಿಸಿದ್ದಾರೆ. ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ಕಂಡು ಬಂದಿವೆ.
ಅಂದ್ಹಾಗೆ ಇತ್ತೀಚೆಗೆ ಪ್ರಣಿತಾ ಅವರು ಸಹ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು , ಅವವರೂ ಸಹ ತಮ್ಮ ಡಿಲೆವರಿ ಸಮಯದಲ್ಲಿ ಆಪರೇಷನ್ ಥಿಯೇಟರ್ ಒಳಗಿನ ಹಾಗೂ ಮಗುವಿನ ವಿಡಿಯೋ ತಣುಕನ್ನ ಹಂಚಿಕೊಂಡಿದ್ದರು..