ಡ್ರಗ್ಸ್ ಕೇಸ್ ನಲ್ಲಿ ಸಿಲುಕಿದ್ದ ನಟಿ ಸಂಜನಾ ಗಲ್ರಾನಿ ಅವರು ಈಗ ತನ್ನ ಆಪ್ತ ಸ್ನೇಹಿತನ ವಿರುದ್ಧವೇ ದೂರು ದಾಖಲಿಸಿದ್ದಾರೆ.
ಹಣಕಾಸಿನ ವಿಚಾರದಲ್ಲಿ ಸಂಜನಾ ಅವರು ತನ್ನ ಸ್ನೇಹಿತ ರಾಹುಲ್ ಥೋನ್ಸೆ ಸೇರಿದಂತೆ ರಾಮಕೃಷ್ಣ ಮತ್ತು ರಾಗೇಶ್ವರಿ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯವು ವಿಚಾರಣೆ ನಡೆಸುವಂತೆ ಇಂದಿರಾನಗರ ಪೋಲಿಸ್ ಠಾಣೆಗೆ ಸೂಚನೆ ನೀಡಿದೆ.
ಮೂರು ವರ್ಷಗಳ ಹಿಂದೆ ಸಂಜನಾ ಗಲ್ರಾನಿ ಅವರು ರಾಹುಲ್ ಥೋನ್ಸೆ, ರಾಮಕೃಷ್ಣ ಮತ್ತು ರಾಗೇಶ್ವರಿ ಅವರಿಗೆ ದುಡ್ಡು ನೀಡಿದ್ದರು. ಕೊಲೊಂಬೊ ಮತ್ತು ಗೋವಾದ ಕ್ಯಾಸಿನೊಗಳಲ್ಲಿ ರಾಹುಲ್ ಥೋನ್ಸೆ ಮೂಲಕ ಹಣ ಹೂಡಿಕೆ ಮಾಡಿದ್ದರು. ಆದ್ರೆ ರಾಹುಲ್ ಲಾಭದ ಹಣವನ್ನು ಬಿಡಿ ಕೊಟ್ಟ ಹಣವನ್ನೇ ನೀಡುತ್ತಿಲ್ಲ. ಹೀಗಾಗಿ ಸಂಜನಾ ಗಲ್ರಾನಿ ಈಗ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಒಟ್ಟಿನಲ್ಲಿ ಸಂಜನಾ ಗಲ್ರಾನಿ ಅವರಿಗೆ ಒಂದಲ್ಲ ಒಂದು ತೊಂದರೆಗಳು ಎದುರಾಗುತ್ತನೇ ಇದೆ. ಅಲ್ಲದೆ ಆಪ್ತ ಸ್ನೇಹಿತರಿಂದಲೇ ಸಂಜನಾ ಅವರಿಗೆ ವಂಚನೆಯಾಗುತ್ತಿದೆ.
ದಸರಾ ತಂಡದ ಮತ್ತೊಂದು ಸಿನಿಮಾ…’ದಿ ಪ್ಯಾರಡೈಸ್’ ಮೊದಲ ಝಲಕ್ ರಿಲೀಸ್
ದಸರಾ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದ ನ್ಯಾಚುರಲ್ ಸ್ಟಾರ್ ನಾನಿ ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಮತ್ತೊಮ್ಮೆ ದಸರಾ ತಂಡದ...