ಸೂರ್ಯ ಮುಂದೆ ಯಾವ ಬೌಲರ್ ನಿಲ್ಲಲ್ಲ
ಟೀಂ ಇಂಡಿಯಾದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮೇಲೆ ಮಾಜಿ ಕ್ರಿಕೆಟರ್ ಸಂಜಯ್ ಮಂಜ್ರೆಕರ್ ಪ್ರಶಂಸೆಗಳ ಸುರಿಮಳೆಗೈದಿದ್ದಾರೆ.
ಅದ್ಭುತ ಹೊಡೆತಗಳಿಂದ ಮುನ್ನುಗ್ಗುವ ಸೂರ್ಯ ಕುಮಾರ್ ಅವರನ್ನು ತಡೆಯೋ ಬೌಲರ್ ಪ್ರಸ್ತುತ ಯಾರೂ ಇಲ್ಲ ಎಂದು ಕೊಂಡಾಡಿದ್ದಾರೆ.
ಸೂರ್ಯ ಕುಮಾರ್ ಗೆ ಹೇಗೆ ಬೌಲಿಂಗ್ ಮಾಡಬೇಕು ಅನ್ನೋದನ್ನ ಅರಿಯದೇ ಬೌಲರ್ ಗಳು ಪರದಾಡುತ್ತಿದ್ದಾರೆ ಎಂದಿದ್ದಾರೆ.
ಸುದೀರ್ಘ ವರ್ಷಗಳ ಕಾಯುವಿಕೆ ನಂತರ ಸೂರ್ಯಕುಮಾರ್ ಯಾದವ್ ಕಳೆದ ಮಾರ್ಚ್ ನಲ್ಲಿ ಟೀಂ ಇಂಡಿಯಾದ ಪರ ಪಾದಾರ್ಪಣೆ ಮಾಡಿದರು.
ಅಂತರಾಷ್ಟ್ರೀಯ ಕ್ರಿಕೆಟ್ ಜರ್ನಿಯನ್ನ ಸಿಕ್ಸರ್ ನೊಂದಿಗೆ ಶುರು ಮಾಡಿದ ಸೂರ್ಯ ಕುಮಾರ್ ಯಾದವ್, 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಾಮರ್ಥ್ಯ ಸಾಭೀತು ಪಡಿಸಿದರು.
ಕ್ಯಾಷ್ ರಿಚ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ.

ಟೀಂ ಇಂಡಿಯಾ ಪರ ಸಿಕ್ಕ ಅವಕಾಶಗನ್ನು ಸದುಪಯೋಗ ಪಡಿಸಿಕೊಂಡಿರುವ ಸೂರ್ಯ ಕುಮಾರ್ ಯಾದವ್, ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟಿ 20 ಪಂದ್ಯದಲ್ಲಿ ಸೆಂಚೂರಿ ಸಿಡಿಸಿದರು.
ಈ ಪಂದ್ಯದಲ್ಲಿ 55 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ 14 ಬೌಂಡರಿ, ಆರು ಸಿಕ್ಸರ್ ಗಳ ಸಹಾಯದೊಂದಿಗೆ 117 ರನ್ ಗಳಿಸಿ ಚುಟುಕು ಕ್ರಿಕೆಟ್ ನಲ್ಲಿ ಮೊದಲ ಶತಕ ದಾಖಲಿಸಿದ್ದಾರೆ.
ಅದರೊಂದಿಗೆ ಟಿ 20 ಕ್ರಿಕೆಟ್ ನಲ್ಲಿ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಗೆ ಬಂದು ಅತ್ಯಧಿಕ ಸ್ಕೋರ್ ದಾಖಲಿಸಿದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಈ ಹಿನ್ನಲೆಯಲ್ಲಿ ಸಂಜಯ್ ಮಂಜ್ರೆಕರ್ ಸ್ಪೋರ್ಟ್ಸ್ 18 ಜೊತೆಗೆ ಮಾತನಾಡಿ ಸೂರ್ಯ ಕುಮಾರ್ ಅವರನ್ನ ಹಾಡಿ ಹೊಗಳಿದ್ದಾರೆ. ಸೂರ್ಯ ಸೆಂಚೂರಿ ಒಂದು ಮಧುರ ನೆನಪು, ಇದಕ್ಕೆ ನಾನಾ ಕಾರಣಗಳಿವೆ.
ಒಂದು ಸ್ಟ್ರೈಕ್ ರೇಟ್, ಕ್ಲಾಸಿಕ್ ಇನ್ನಿಂಗ್ಸ್, ಪ್ರಸ್ತುತ ತನ್ನ ಬ್ಯಾಟಿಂಗ್ ಮುಂದೆ ನಿಲ್ಲುವ ಸಮರ್ಥಬೌಲರ್ ಯಾರು ಇಲ್ಲ ಎಂದು ಹೇಳಿದ್ದಾರೆ.
ಇನ್ನು ಸೂರ್ಯಗೆ ಸ್ಟಾಂಡಿಂಗ್ ಓವಿಯೇಷನ್ ಸಿಕ್ಕ ಬಗ್ಗೆ ಮಾತನಾಡಿದ ಮಂಜ್ರೆಕರ್, ಸೆಂಚೂರಿ ಬಳಿಕ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ನಿಂತು ಚೆಪ್ಪಾಳೆ ತಟ್ಟಿ ಅವರನ್ನ ಅಭಿನಂಧಿಸಿದರು.
ಅಲ್ಲಿ ಕೇವಲ ಟೀಂ ಇಂಡಿಯಾದ ಅಭಿಮಾನಿಗಳು ಮಾತ್ರವಲ್ಲದೇ ಇಂಗ್ಲೆಂಡ್ ತಂಡದ ಬೆಂಬಲ ಕೂಡ ಸೂರ್ಯಗೆ ಸಿಕ್ಕಿದೆ.
ಈ ಮ್ಯಾಚ್ ನಲ್ಲಿ ಸೂರ್ಯ ಕುಮಾರ್ ಯಾದವ್ ಇನ್ನಿಂಗ್ಸ್ ಕಾರಣವಾಗಿಯೇ ಟೀಂ ಇಂಡಿಯಾ ಸೋತರೂ ಪರವಾಗಿಲ್ಲ ಎಂಬಂತೆ ಒಬ್ಬ ಆಟಗಾರನಿಗೆ ಸಿಗಬೇಕಾದ ಗೌರವವನ್ನು ಕೊಟ್ಟಿದ್ದಾರೆ ಎಂದು ಸಂಜಯ್ ಮಂಜ್ರೇಕರ್ ವ್ಯಾಖ್ಯಾನಿಸಿದ್ದಾರೆ.