ನನಗೆ 100 ಕೋಟಿ ಲಸಿಕೆ ವಿತರಣೆ ಬಗ್ಗೆ ಸಂಶಯವಿದೆ – ಸಂಜಯ್ ರಾವತ್
ಕರೋನಾಗೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಭಾರತ 100 ಕೋಟಿ ದಾಟಿರುವ ಪ್ರಯುಕ್ತ ಪ್ರಧಾನಿ ಮೋದಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು… ಭಾರತ ಅತಿ ಹೆಚ್ಚು ಲಸಿಕೆ ನೀಡಿದ ದೇಶಗಳಲ್ಲಿ ಎರಡನೇ ಸ್ಥಾನವನ್ನ ತಲುಪಿದೆ…ಇದು ಪ್ರತಿಯೊಬ್ಬ ಬಾರತೀಯನ ಯಶಸ್ಸು ಎಂದು ಮೋದಿ ಬಣ್ಣಿಸಿದ್ದರು. ಆದ್ರೆ ಭಾರತದಲ್ಲಿ 100 ಕೋಟಿ ಲಸಿಕೆ ವಿತರಣೆ ಆಗಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅಂಕಿ ಅಂಶದಲ್ಲಿ ನನಗೆ ಸಂಶಯವಿದೆ ಎಂದು ಶಿವಸೇನೆಯ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರು ಹೇಳಿಕೊಂಡಿದ್ದಾರೆ.
ಹೌದು ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾತನಾಡಿರುವ ರಾವತ್ ನರೇಂದ್ರ ಮೋದಿ ಅವರು ಹೇಳುತ್ತಿರುವ ಅಂಕಿ ಅಂಶಗಳು ನಿಜವಾಗಿದ್ದರೆ ಈ ಸಂಭ್ರಮಾಚರಣೆಯಲ್ಲಿ ನಾವು ಭಾಗಿಯಾಗುತ್ತೇವೆ. ಆದರೆ ನನಗೆ 100 ಕೋಟಿ ಲಸಿಕೆ ವಿತರಣೆ ಬಗ್ಗೆ ಸಂಶಯವಿದೆ. ದೇಶದಲ್ಲಿ ಕೇವಲ 33 ಕೋಟಿ ಜನರಿಗೆ ಮಾತ್ರ ಲಸಿಕೆ ಆಗಿದೆ ಎಂಬ ಮಾಹಿತಿ ಇದೆ ಎಂದು ಹೇಳುತ್ತಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತ ನಿನ್ನೆ 9 ತಿಂಗಳಲ್ಲಿ 100 ಕೋಟಿ ಡೋಸ್ ಲಸಿಕೆ ವಿತರಣೆಯ ಸಾಧನೆ ಮಾಡಿತ್ತು. ಈ ಮೂಲಕ ಚೀನಾ ನಂತರ 100 ಕೋಟಿ ಲಸಿಕೆ ಸಾಧನೆ ಮಾಡಿದ ಎರಡನೇ ದೇಶವಾಗಿ ಭಾರತ ಹೊರಹೊಮ್ಮಿತ್ತು. ಇಂದು ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾತನಾಡಿ, 100 ಕೋಟಿ ಲಸಿಕೆ ಕೇವಲ ಅಂಕಿಯಲ್ಲ, ಇದೊಂದು ಇತಿಹಾಸ ಪುಟದಲ್ಲಿ ದಾಖಲಾದ ಹೊಸ ಅಧ್ಯಾಯ ಎಂದಿದ್ದರು. ಆದ್ರೆ ಈ ಅಂಕಿ ಅಂಶಿ ಬಗ್ಗೆ ಶಿವಸೇನಾ ನಾಯಕ ಸಂಜಯ್ ರಾವತ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.