ADVERTISEMENT
Friday, December 5, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಸರ್ವ ಕಷ್ಟ ಪರಿಹಾರಾರ್ಥಾ ಅಂಗಾರಕ ಸಂಕಷ್ಟ ಹರ ಚತುರ್ಥಿ ವ್ರತ ಮತ್ತು ಪೂಜಾ ವಿಧಾನ ತಿಳಿಯಿರಿ…!!

admin by admin
July 26, 2021
in Astrology, Newsbeat, ಜ್ಯೋತಿಷ್ಯ
lord ganesha saakshatv
Share on FacebookShare on TwitterShare on WhatsappShare on Telegram

ಸರ್ವ ಕಷ್ಟ ಪರಿಹಾರಾರ್ಥಾ ಅಂಗಾರಕ ಸಂಕಷ್ಟ ಹರ ಚತುರ್ಥಿ ವ್ರತ ಮತ್ತು ಪೂಜಾ ವಿಧಾನ ತಿಳಿಯಿರಿ…!!

lord ganesha saakshatvಅಂಗಾರಕ ಸಂಕಟಹರ ಚತುರ್ಥಿ…  ನಾಳೆ  ಚತುರ್ಥಿ ತಿಥಿಯಂದು ಆಚರಿಸುವ ವ್ರತಗಳಲ್ಲಿ ಸಂಕಷ್ಟಹರ ಚತುರ್ಥಿಯೂ ಒಂದು.
ಹೆಸರೇ ಹೇಳುವಂತೆ ಕಷ್ಟದಿಂದ ಪಾರಾಗಲು ಈ ವ್ರತವನ್ನು ಆಚರಿಸುವರು. ಚತುರ್ಥಿಯು ಒಂದು ತಿಂಗಳಲ್ಲಿ ಎರಡು ಬಾರಿ ಬರುತ್ತದೆ. ಅವುಗಳಲ್ಲಿ ಕೃಷ್ಣಪಕ್ಷದ ಚತುರ್ಥಿಯಂದೇ ಸಂಕಷ್ಟಿಯನ್ನು ಆಚರಿಸುತ್ತಾರೆ.

Related posts

ರಾಜೀನಾಮೆಗೆ ಕ್ಷಣಗಣನೆ: ಸಿದ್ದರಾಮಯ್ಯ ಬಗ್ಗೆ ಕಾರಜೋಳ ವಿವಾದಾತ್ಮಕ ಹೇಳಿಕೆ

ರಾಜೀನಾಮೆಗೆ ಕ್ಷಣಗಣನೆ: ಸಿದ್ದರಾಮಯ್ಯ ಬಗ್ಗೆ ಕಾರಜೋಳ ವಿವಾದಾತ್ಮಕ ಹೇಳಿಕೆ

December 4, 2025
ನಟ ದರ್ಶನ್‌ಗೆ ಕೋರ್ಟ್‌ನಿಂದ ಮತ್ತೊಂದು ದೊಡ್ಡ ಆಘಾತ

ನಟ ದರ್ಶನ್‌ಗೆ ಕೋರ್ಟ್‌ನಿಂದ ಮತ್ತೊಂದು ದೊಡ್ಡ ಆಘಾತ

December 4, 2025

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಅಂದು ಮಂಗಳವಾರವಾದರೆ ‘ಅಂಗಾರಕ ಚತುರ್ಥಿ’ ಎನ್ನುತ್ತಾರೆ. ಅಂಗಾರಕ ಚತುರ್ಥಿಗೆ ಹೆಚ್ಚಿನ ಮಹತ್ತ್ವವಿದೆ. ಸಂಕಷ್ಟಿಯನ್ನು ಆಚರಿಸುವವರು ಕೃಷ್ಣ ಪಕ್ಷದ ಚತುರ್ಥಿಯಂದು ಹಗಲು ಉಪವಾಸ ಮಾಡುತ್ತಾರೆ.  ಸಂಜೆ ವ್ರತ ಪೂಜಾವನ್ನು ಆಚರಿಸಿ, ಚಂದ್ರದರ್ಶನ ಮಾಡುವುದರೊಂದಿಗೆ ಉಪವಾಸ ಕೊನೆಗೊಳ್ಳುತ್ತದೆ.  ಒಂದು ವರ್ಷದಲ್ಲಿ ಅಧಿಕ ಮಾಸವಿಲ್ಲದಿದ್ದಾಗ ಚೈತ್ರಮಾಸದಿಂದ ಹನ್ನೆರಡು ಕೃಷ್ಣಪಕ್ಷಗಳಿರುತ್ತವೆ. ಹಾಗಾಗಿ ಸಂಕಷ್ಟಿಯ ಸಂಖ್ಯೆಯೂ ಹನ್ನೆರಡು. ಅಧಿಕ ಮಾಸವಿದ್ದಾಗ ಈ ಸಂಖ್ಯೆ ಹದಿಮೂರಕ್ಕೇರುತ್ತದೆ.

ಪೂಜಾ ವಿಧಾನ
ಈ ದಿನ ಬೆಳಿಗ್ಗೆ ಎಳ್ಳನ್ನು ಅರೆದು ನೆಲ್ಲಿಯ ಹಿಟ್ಟಿನೊಂದಿಗೆ ಹಾಲು ಅಥವಾ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿ ಮಂಗಳಸ್ನಾನ ಮಾಡಬೇಕು.
ಸ್ನಾನವಾದ ಮೇಲೆ ಸಂಕಷ್ಟಹರ ಗಣಪತಿ ವ್ರತದ ಸಂಕಲ್ಪ ಮಾಡಬೇಕು. ಈ ದಿನ ಹಗಲು ಪೂರ್ತಿ ಉಪವಾಸ ಇರಬೇಕು. ಅದು ಅಸಾಧ್ಯವಾದರೆ
ಹಾಲು, ಹಣ್ಣು ಸೇವಿಸಬಹುದು.

ಪೂಜೆಯ ಮಾಡುವ ಸ್ಥಳವನ್ನು ಗೋಮಯದಿಂದ ಶುದ್ಧಗೊಳಿಸಿ, ಅಷ್ಟದಳ ಗಣಪತಿಯ ಮಂಡಲವನ್ನು ಬಿಳಿಯ ಮಣ್ಣಿನಿಂದ ಬರೆಯಬೇಕು.
ಅರಿಸಿನ ಕುಂಕುಮಗಳಿಂದ ಮಂಡಲವನ್ನು ಅಲಂಕರಿಸಬೇಕು ಇದರ ಮೇಲೆ ಕಲಶವನ್ನು ಸ್ಥಾಪಿಸುವುದಕ್ಕಾಗಿ ಎರಡು ಅಗ್ರವಿರುವ ಬಾಳೆಯ ಎಲೇ ಮೇಲೆ ಅಕ್ಕಿಯನ್ನು ಹರಡಬೇಕು.

ಅದರ ಮೇಲೆ ಮೃತ್ತಿಕೆ ನಾಣ್ಯ ಮತ್ತು ನೀರು ಹಾಕಿದ ಕಲಶವನ್ನಿಟ್ಟು, ಅದರ ಮೇಲೆ ಮಾವಿನ ಚಿಗುರು ತೆಂಗಿನಕಾಯಿ ನಾಣ್ಯ ಪವಿತ್ರ ಉಪವೀತಗಳನ್ನು ಇಟ್ಟು, ಎದುರಲ್ಲಿ ವೀಳ್ಯದ ಎಲೆ ಅಡಿಕೆ ಬಾಳೆಹಣ್ಣು ಇಡಬೇಕು. ಈ ಕಲಶಕ್ಕೆ ಪೂಜೆ ಮಾಡಿ ಗಣಪತಿಯನ್ನು ಆವಾಹನೆ ಮಾಡಿ, ಷೋಡಶೋಪಚಾರ ಪೂಜೆ ಮಾಡಬೇಕು.

ಆವಾಹನೆ, ಆಸನ, ಪಾದ್ಯ, ಅರ್ಘ್ಯ ,ಆಚಮನ, ಮಧುಪರ್ಕ,ಪುನರಾಚಮನ,ಪಂಚಾಮೃತ, ಶುದ್ಧೋದಕ ಸ್ನಾನ, ವಸ್ತ್ರ ಉಪವೀತ, ಆಭರಣ ಗಂಧ, ಅಕ್ಷತೆ, ಹೂ ಮುಂತಾದ ಉಪಚಾರಗಳಾದ ಮೇಲೆ ದೂರ್ವೆಗಳಿಂದ (ಎಂದರೆ ಗರಿಕೆಯಿಂದ) ಅಷ್ಟೋತ್ತರ ಶತ ನಾಮಾವಳಿ ಅಥವಾ ಗಕಾರ ಸಹಸ್ರನಾಮ ಪೂಜೆ ಮಾಡಬೇಕು.

ಅಂಗಾರಕ ವ್ರತದ ಕಥೆಯನ್ನು ಓದಬೇಕು
ಕಥೆಯು ಹೀಗಿದೆ.
ಕಥಾಶ್ರವಣ

ಸುಲಭನೆಂಬ ಕ್ಷತ್ರಿಯನು ಸಮುದ್ರೆಯೆಂಬ ಪತ್ನಿಯೊಂದಿಗೆ ಪುರಾಣವನ್ನು ಕೇಳುತ್ತಿದ್ದಾಗ ಮಧುಸೂದನ ಎಂಬವನು ಅಲ್ಲಿಗೆ ಬಂದನು.

ಅವನನ್ನು ನೋಡಿ ಸುಲಭನು ನಗೆಯಾಡಲು, ಸಿಟ್ಟಿಗೆದ್ದ ಮಧುಸೂದನನು ಎತ್ತಾಗುವಂತೆ ಸುಲಭನನ್ನು ಶಪಿಸಿದನು. ಇದರಿಂದ ಕೋಪಗೊಂಡ ಸುಲಭೆಯು ಮಧುಸೂದನನು ಕತ್ತೆಯಾಗುವಂತೆ ಶಪಿಸಿದಳು. ಇದರಿಂದ ಇನ್ನೂ ಕೋಪಗೊಂಡ ಮಧುಸೂದನನು ಆಕೆಗೆ ಪತಿತಳಾಗುವಂತೆ ಶಪಿಸಿದನು.

ಹೀಗೆ ಮೂವರೂ ಶೋಚನೀಯ ಸ್ಥಿತಿಗೆ ತಲುಪಿ ಸಂಚರಿಸುತ್ತಿರುವಾಗ ದೇವಾಲಯವೊಂದರಲ್ಲಿ ಸಂಕಷ್ಟಹರ ಗಣಪತಿಯ ಪೂಜೆ ನಡೆಯುತ್ತಿದ್ದುದನ್ನು ನೋಡಿದರು. ಈ ಶಾಪಗ್ರಸ್ತರಿಗೆ ಅಲ್ಲಿ ಸ್ಥಳವು ದೊರೆಯದಿದ್ದರೂ ಪರಲೋಕದಲ್ಲಿ ಸುಸ್ವಾಗತವು ದೊರೆಯಿತು. ಕೌಂಡಿನ್ಯ ಆಶ್ರಯೆ ಎಂಬ ದಂಪತಿಗಳು ದೂರ್ವೆಯ ಮಹಿಮೆಯನ್ನು ಚರ್ಚಿಸುತ್ತಾರೆ. ಯಮಲೋಕದ ಉತ್ಸವವೊಂದರಲ್ಲಿ ಯಮನು ತಿಲೋತ್ತಮೆಯ ನರ್ತನದಿಂದ ಆಕರ್ಷಿತನಾದನು. ಕೂಡಲೇ ಅಲ್ಲಿಂದ ಹೊರಟರೂ ಯಮನ ತೇಜಸ್ಸಿನಿಂದ ಜ್ವಾಲಾಮಾಲಿಯೆಂಬ ಅಯೋನಿಜನು ಜನಿಸಿದನು.

ಲೋಕಕಂಟಕನಾದ ಅವನನ್ನು ಕೊಲ್ಲಲು ಗಣಪತಿಯೇ ಬರಬೇಕಾಯಿತು. ಅನಲಾಸುರನನ್ನೂ ಆಗ ಸಂಹರಿಸಿದ ಗಣೇಶನಿಗೆ ಚಂದ್ರ ಸಿದ್ಧಿ ಬುದ್ಧಿ ತಾವರೆ ಶೇಷ ಮುಂತಾದವು ಕೊಡುಗೆಯಾಗಿ ದೊರೆತವು. ಆದರೆ ಅವನಿಗೆ ಮನಃಶಾಂತಿ ದೊರೆಯದೆ, ದೂರ್ವಾರ್ಚನೆ ಮಾಡಿದ ಮೇಲೆಯೇ ಮನಸ್ಸಿಗೆ ಶಾಂತಿ ದೊರೆಯಿತು.

ಮಿಥಿಲೆಯ ರಾಜನಾದ ಜನಕನು ಅಪರಿಮಿತವಾಗಿ ಅನ್ನದಾನ ಮಾಡುತ್ತಿದ್ದರೂ ಅವನ ಸಂಪತ್ತು ಹಾಗೆಯೇ ಇದ್ದಿತು. ಇದರಿಂದ ಗರ್ವಿತನಾದ ರಾಜನನ್ನು ಸಾತ್ವಿಕನನ್ನಾಗಿಸಲು ಗಣಪತಿಯು ಕುಷ್ಠರೋಗಿಯಾಗಿ ಬಂದು ಭೋಜನಶಾಲೆಯಲ್ಲಿ ಉಂಡು ಅನ್ನವಿಲ್ಲದಂತೆ ಮಾಡಿದನು. ಬಡದಂಪತಿಗಳ ದೂರ್ವೆಯೊಂದರಿಂದ ತೃಪ್ತನಾಗಿ ಅವರಿಗೆ ವರದಾನ ಮಾಡಿದ್ದನ್ನು ನೋಡಿದ ಮೇಲೆ ರಾಜನಿಗೆ ಜ್ಞಾನೋದಯವಾಯಿತು.

ಆಶ್ರಯೆಯು ನಾರದರ ಸೂಚನೆಯಂತೆ ದೂರ್ವಾದಳದ ಭಾರಕ್ಕೆ ಸರಿಯಾದ ಚಿನ್ನವನ್ನು ಯಾಚಿಸಲು ಇಂದ್ರ ಕುಬೇರ ವಿಷ್ಣು ಶಿವ ಮುಂತಾದ ಮಹಾಮಹಿಮರೆಲ್ಲರೂ ಅದನ್ನು ನೀಡುವಲ್ಲಿ ವಿಫಲರಾದರು.

ಕೃತವೀರ್ಯ ಶೂರಸೇನ ಸ್ಕಂದ ಪಾರ್ವತೀ ದಮಯಂತೀ ನಳ ಪ್ರದ್ಯುಮ್ನ ರುಕ್ಮಿಣೀ ಶ್ರೀಕೃಷ್ಣ ಮುಂತಾದವರು ಆಚರಿಸಿದ ಈ ವ್ರತ ಅಸಾಧಾರಣವಾದುದು.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಕಥಾಶ್ರವಣವಾದ ಮೇಲೆ

ಧೂಪ ದೀಪವಾದ ಮೇಲೆ ನೈವೇದ್ಯಕ್ಕೆ ಕರಿಗಡುಬು, ಮೋದಕ ಇಡಬೇಕು. ಮೈದಾ ಹಿಟ್ಟು, ರವೆಯನ್ನು ಕಲಸಿ ಕಣಕ ಮಾಡಿ, ಒಳಗೆ ಹೂರಣ ಸೇರಿಸಿ ಎಣ್ಣೆಯಲ್ಲಿ ಕರಿಯುತ್ತಾರೆ.

ಹೂರಣವನ್ನು ಎರಡು ತರಹ ಮಾಡುತ್ತಾರೆ. ಕೊಬ್ಬರಿ ತುರಿ, ಸಕ್ಕರೆ, ಏಲಕ್ಕಿ ಅಥವಾ ಬೆಲ್ಲ, ಕಾಯಿ ತುರಿ, ಏಲಕ್ಕಿ. ಈ ದಿನ ಕಡುಬು ಮಾಡುವಾಗ ಹೂರಣಕ್ಕೆ ಎಳ್ಳನ್ನು ಸೇರಿಸಬೇಕು.

ನೈವೇದ್ಯಕ್ಕೆ ಕನಿಷ್ಠ ಇಪ್ಪತ್ತೊಂದು ಕರಿಗಡಬು ಮತ್ತು ಮೋದಕಗಳನ್ನು ಮಾಡಿಕೊಳ್ಳಬೇಕು. ಪೂಜೆಯ ನಂತರ ಕಡಬು, ಮೋದಕ ದಾನ ಮಾಡಿ, ಉಳಿದ ಕಡಬು, ಮೋದಕಗಳನ್ನು ಪ್ರಸಾದವಾಗಿ ಸ್ವೀಕರಿಸಬೇಕು.

ಎಷ್ಟು ಬೇಕೋ ಅಷ್ಟು ಕರಿಗಡುಬು, ಮೋದಕ ಮಾಡಿಕೊಳ್ಳಬಹುದು. ನೈವೇದ್ಯವಾದ ಮೇಲೆ ಫಲ ಸಮರ್ಪಣ, ದೂರ್ವಾಪೂಜೆ, ಮಂಗಳಾರತಿ, ಮಂತ್ರಪುಷ್ಪ, ಪ್ರದಕ್ಷಿಣ, ನಮಸ್ಕಾರ, ಪ್ರಸನ್ನಾರ್ಘ್ಯ, ಪ್ರಾರ್ಥನೆ ಮಾಡಿ ಪೂಜಾ ಸಮಾಪ್ತಿ ಮಾಡಬೇಕು. ವಾಯನದಾನ, ತೀರ್ಥಪ್ರೋಕ್ಷಣ, ಕಲಶದಾನಗಳಿಂದ ಪೂಜೆ ಸಾಂಗವಾಗಿ ಮುಕ್ತಾಯಗೊಳ್ಳುವುದು.
ಶ್ರೀಮಧ್ವೇಶಾರ್ಪಣಮಸ್ತು

Tags: #astrology#Hindu culture.#saakshatvbengaluruhoroscopekarnatakalord ganeshaPandit Jnaneshwar Rao
ShareTweetSendShare
Join us on:

Related Posts

ರಾಜೀನಾಮೆಗೆ ಕ್ಷಣಗಣನೆ: ಸಿದ್ದರಾಮಯ್ಯ ಬಗ್ಗೆ ಕಾರಜೋಳ ವಿವಾದಾತ್ಮಕ ಹೇಳಿಕೆ

ರಾಜೀನಾಮೆಗೆ ಕ್ಷಣಗಣನೆ: ಸಿದ್ದರಾಮಯ್ಯ ಬಗ್ಗೆ ಕಾರಜೋಳ ವಿವಾದಾತ್ಮಕ ಹೇಳಿಕೆ

by Shwetha
December 4, 2025
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಯಾದ ರಾಜಕೀಯ ಶಾಶ್ವತವಲ್ಲ, ಯಾರಪ್ಪನ ಆಸ್ತಿನೂ ಅಲ್ಲ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ - ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ....

ನಟ ದರ್ಶನ್‌ಗೆ ಕೋರ್ಟ್‌ನಿಂದ ಮತ್ತೊಂದು ದೊಡ್ಡ ಆಘಾತ

ನಟ ದರ್ಶನ್‌ಗೆ ಕೋರ್ಟ್‌ನಿಂದ ಮತ್ತೊಂದು ದೊಡ್ಡ ಆಘಾತ

by Shwetha
December 4, 2025
0

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಜೈಲಿನಲ್ಲಿರುವ ಸ್ಯಾಂಡಲ್‌ವುಡ್ ನಟ ದರ್ಶನ್‌ಗೆ ಕೋರ್ಟ್‌ನಿಂದ ಮತ್ತೊಂದು ದೊಡ್ಡ ಆಘಾತ ತಗುಲಿದೆ. ಪ್ರಕರಣದ ತನಿಖೆ ಸಂದರ್ಭದಲ್ಲಿ ಪೊಲೀಸರು ದರ್ಶನ್ ಹಾಗೂ ಇತರೆ...

ಬ್ರೇಕ್ ಫಾಸ್ಟ್ ಪಾಲಿಟಿಕ್ಸ್ ವರ್ಕೌಟ್ ಆಗಿಲ್ಲ: ಮಂಗಳೂರಿನಲ್ಲಿ ಮತ್ತೆ ಭುಗಿಲೆದ್ದ ಸಿದ್ದು-ಡಿಕೆಶಿ ಶೀತಲ ಸಮರ

ಬ್ರೇಕ್ ಫಾಸ್ಟ್ ಪಾಲಿಟಿಕ್ಸ್ ವರ್ಕೌಟ್ ಆಗಿಲ್ಲ: ಮಂಗಳೂರಿನಲ್ಲಿ ಮತ್ತೆ ಭುಗಿಲೆದ್ದ ಸಿದ್ದು-ಡಿಕೆಶಿ ಶೀತಲ ಸಮರ

by Shwetha
December 4, 2025
0

ಮಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ತೋರಿಸಲು ಹೈಕಮಾಂಡ್ ನಡೆಸಿದ ಬ್ರೇಕ್‌ಫಾಸ್ಟ್‌ ಪಾಲಿಟಿಕ್ಸ್...

ರಾಜ್ಯದ ಆಸ್ತಿ ಮಾಲೀಕರಿಗೆ ಮಹತ್ವದ ಸುದ್ದಿ : ಇ ಸ್ವತ್ತು ಪಡೆಯಲು ಈ 12 ದಾಖಲೆಗಳು ಕಡ್ಡಾಯ 15 ದಿನಗಳಲ್ಲೇ ಸಿಗಲಿದೆ ಖಾತಾ

ರಾಜ್ಯದ ಆಸ್ತಿ ಮಾಲೀಕರಿಗೆ ಮಹತ್ವದ ಸುದ್ದಿ : ಇ ಸ್ವತ್ತು ಪಡೆಯಲು ಈ 12 ದಾಖಲೆಗಳು ಕಡ್ಡಾಯ 15 ದಿನಗಳಲ್ಲೇ ಸಿಗಲಿದೆ ಖಾತಾ

by Shwetha
December 4, 2025
0

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವವರು ತಮ್ಮ ಆಸ್ತಿಯ ಇ-ಖಾತಾ ಅಥವಾ...

ಮದುವೆಯಾದ ಮರುದಿನವೇ ಹೃದಯಾಘಾತದಿಂದ ನವ ವರ ಸಾವು – ಶಿವಮೊಗ್ಗದಲ್ಲಿ ದಾರುಣ ಘಟನೆ

ಮದುವೆಯಾದ ಮರುದಿನವೇ ಹೃದಯಾಘಾತದಿಂದ ನವ ವರ ಸಾವು – ಶಿವಮೊಗ್ಗದಲ್ಲಿ ದಾರುಣ ಘಟನೆ

by Shwetha
December 4, 2025
0

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹನುಮಂತಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮದುವೆಯಾದ ಮರುದಿನವೇ ನವ ವರ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ದುರ್ದೈವಿ ರಮೇಶ್ (30)...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram