ಈ ಬಾರಿ ಗವಿ ಗಂಗಾಧರೇಶ್ವರನನ್ನ ಸ್ಪರ್ಶಿಸಲಿಲ್ಲ ಸೂರ್ಯರಶ್ಮಿ..!
ಬೆಂಗಳೂರು : ಪ್ರತಿ ವರ್ಷ ಸಂಕ್ರಾಂತಿಯಂದು ಗವಿಪುರದಲ್ಲಿರುವ ಗವಿಗಂಗಾಧರೇಶ್ವರಸ್ವಾಮಿ ದೇಗುಲದ ಶಿವಲಿಂಗವನ್ನ ಸೂರ್ಯನ ಕಿರಣಗಳು ನೇರವಾಗಿ ಸ್ಪರ್ಷಿಸುತ್ತಿದ್ದವು. ಆದ್ರೆ ಈ ಬಾರಿ ಈ ಕೌತುಕವನ್ನ ಕಣ್ತುಂಬಿಕೊಳ್ಳುವ ನಿರೀಕ್ಷೆಯಲ್ಲಿ ಕಾಯ್ತಿದ್ದ ಭಕ್ತರಿಗೆ ನಿರಾಸೆಗೆ ಉಂಟಾಗಿದೆ. ಈ ಬಾರಿ ಮೋಡ ಕವಿದ ಶಿವಲಿಂಗವನ್ನು ಸಂಕ್ರಾಂತಿಯಂದು ಸೂರ್ಯರಶ್ಮಿ ಸ್ಪರ್ಶವಾಗಿಲ್ಲ. ಹೀಗಾಗಿ ಭಕ್ತರಲ್ಲಿ ಆತಂಕ ಮನೆ ಮಾಡಿದೆ.
ಜ. 18ಕ್ಕೆ ‘ಮದಯಾನೈ’ ಆಗಿ ತಮಿಳಿನಲ್ಲಿ ಬರ್ತಿದ್ದಾರೆ ರೋರಿಂಗ್ ಸ್ಟಾರ್..!
ಸಂಜೆ 5.14 ರಿಂದ 5.17 ರ ಅವಧಿಯಲ್ಲಿ ಸೂರ್ಯನ ರಶ್ಮಿ ಶಿವಲಿಂಗದ ಮೇಲೆ ಬೀಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಶಿವಲಿಂಗದ ಎದುರಿನ ನಂದಿಯ ಮೂಲಕ ಹಾದು ಸೂರ್ಯನ ಕಿರಣ, ಗರ್ಭಗುಡಿಯ ತನ ಹೋಯಿತು. ಆದರೆ ಮೋಡ ಕವಿದ ಕಾರಣ ಸೂರ್ಯನ ಕಿರಣ ಶಿವಲಿಂಗಕ್ಕೆ ಸ್ಪರ್ಶಿಸದೇ ಹೋಗಿದೆ. ಸಂಜೆ 5.27 ರ ವೇಳೆಗೆ ಸೂರ್ಯನಿಗೆ ಮೋಡ ಅಡ್ಡ ಬಂದ ಕಾರಣ ಸೂರ್ಯ ರಶ್ಮಿ ಗಂಗಾಧರೇಶ್ವರನವರೆಗೂ ತಲುಪಲಿಲ್ಲ. ಆದರೆ, ನಂದಿಯವರೆಗೂ ಮಾತ್ರ ರಶ್ಮಿ ಬಂದಿದೆ. ಇದರಿಂದಾಗಿ ಅಪಾರ ಸಂಖ್ಯೆಯ ಭಕ್ತರಿಗೆ ನಿರಾಸೆಯಾಗಿದೆ.
H1ಬಿ ವೀಸಾ ವಿಚಾರವಾಗಿ ಉದ್ಯೋಗಿಗಳಿಗೆ ಆಘಾತ ನೀಡಿದ ಟ್ರಂಪ್..!
53 ವರ್ಷಗಳ ಗವಿಗಂಗಾಧರೇಶ್ವರ ಸೇವೆಯಲ್ಲಿ ಸೂರ್ಯನ ರಶ್ಮಿ ಶಿವಲಿಂಗದ ಮೇಲೆ ಬೀಳದ ಹೋಗಿರುವುದು ಹಲವು ಆತಂಕಕ್ಕೆ ಕಾರಣವಾಗಿದ್ದು, 2021 ರಲ್ಲೂ ಭಾರತಕ್ಕೆ ಗಂಡಾಂತರದ ಮುನ್ಸೂಚನೆ ಎನ್ನಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








