ಮುಂಬೈ, ಸೆಪ್ಟೆಂಬರ್29: ಬಾಲಿವುಡ್ ನಲ್ಲಿ ನಡೆಯುತ್ತಿರುವ ಡ್ರಗ್ಸ್ ತನಿಖೆ ದಿನ ಕಳೆದಂತೆ ಹಲವಾರು ಪ್ರಮುಖ ನಟ ನಟಿಯರ ಹೆಸರುಗಳನ್ನು ಹೊರತರುತ್ತಿದೆ.
ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಶ್ರದ್ಧಾ ಕಪೂರ್, ದೀಪಿಕಾ ಪಡುಕೋಣೆ, ರಕುಲ್ ಪ್ರೀತ್ ಸಿಂಗ್, ಸಿಮೋನೆ ಖಂಬಟ್ಟಾ ಮತ್ತು ಸಾರಾ ಅಲಿ ಖಾನ್ ಅವರನ್ನು ಈಗಾಗಲೇ ಎನ್ಸಿಬಿ ತನಿಖೆ ನಡೆಸಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಮತ್ತು ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿಯ ವಿಚಾರಣೆ ನಡೆಸಿದ ವೇಳೆ ಈ ಹೆಸರುಗಳು ಹೊರಬಂದಿವೆ.
ಈ ಎಲ್ಲದರ ನಡುವೆ, ಪಟೌಡಿ ಕುಟುಂಬವು ಸಾರಾ ಅಲಿ ಖಾನ್ ಬಗ್ಗೆ ತೀವ್ರ ಅಸಮಾಧಾನಗೊಂಡಿದೆ ಎಂಬ ವರದಿಗಳಿವೆ.
ಕುಟುಂಬದ ಯಾರೂ ಇದನ್ನು ನಿರೀಕ್ಷಿಸಿರಲಿಲ್ಲ ಮತ್ತು ಈ ಸುದ್ದಿಯಿಂದ ಆಘಾತದ ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗಿದೆ.
ಸಾರಾ ಅಲಿ ಖಾನ್ ಅವರ ತಾಯಿ ಅಮೃತಾ ಸಿಂಗ್ ಮತ್ತು ತಂದೆ ಸೈಫ್ ಅಲಿ ಖಾನ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಡಿಕೊಂಡಿದ್ದಾರೆ ಎಂಬ ವರದಿಗಳಿವೆ.
ಅಮೃತ ಸಿಂಗ್ ಅವರು ಸಾರಾ ಅವರ ವೃತ್ತಿಜೀವನವನ್ನು ನೋಡಿಕೊಳ್ಳುತ್ತಿದ್ದಾರೆ.
ವರದಿಯ ಪ್ರಕಾರ, ಸೈಫ್ ಅಲಿ ಖಾನ್ ಡ್ರಗ್ಸ್ ಕೇಸ್ ನಲ್ಲಿ ಸಾರಾ ಅವರ ಹೆಸರು ಕೇಳಿಬಂದಿರುವುದಕ್ಕೆ ಸಂಬಂಧಿಸಿದಂತೆ ಅಮೃತಾರನ್ನು ದೂಷಿಸಿದ್ದು, ಅಮೃತ ಮೇಲೆ ಕೈ ಮಾಡಿದ್ದಾರೆ ಎಂದು ಹೇಳಲಾಗಿದೆ.
ಜೊತೆಗೆ ಸಾರಾ ಅವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡದಿರಲು ಸೈಫ್ ಅಲಿ ಖಾನ್ ನಿರ್ಧರಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅಷ್ಟೇ ಅಲ್ಲ ಈ ಎಲ್ಲಾ ವಿದ್ಯಮಾನಗಳಿಂದ ದೂರವಿರಲು ನಿರ್ಧರಿಸಿದ್ದು, ಕರೀನಾ ಜೊತೆಗೆ ದೆಹಲಿಗೆ ತೆರಳಿದ್ದಾರೆ. ಸೈಫ್ ಅಲಿ ಖಾನ್ ಮತ್ತು ತೈಮೂರ್ ಅವರು ಕರೀನಾ ಅವರ ಶೂಟಿಂಗ್ ವೇಳಾಪಟ್ಟಿಗಾಗಿ ದೆಹಲಿಗೆ ಹೋಗಬೇಕಿತ್ತು.
ಸಿಬಿಎಫ್ಸಿಯಲ್ಲಿ ಅಧ್ಯಕ್ಷರಾಗಿರುವ ಶರ್ಮಿಳಾ ಟ್ಯಾಗೋರ್ ಕೂಡ ಅಮೃತ ಸಿಂಗ್ ಮೇಲೆ ಅಸಮಾಧಾನ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.
ವರದಿಗಳು ಹೇಳಿರುವಂತೆ ಕೇದಾರ್ನಾಥ್ ಚಿತ್ರೀಕರಣದ ಸಮಯದಲ್ಲಿ ತಾನು ಸುಶಾಂತ್ ಗೆ ಹತ್ತಿರವಾಗಿದ್ದೆ ಎಂದು ಸಾರಾ ಅಲಿ ಖಾನ್ ತನ್ನ ಪ್ರಶ್ನೆಯಲ್ಲಿ ಬಹಿರಂಗಪಡಿಸಿದ್ದಾಳೆ.
ಸುಶಾಂತ್ ಜೊತೆ ಸಾರಾ ಥೈಲ್ಯಾಂಡ್ ಸೇರಿದಂತೆ ಇನ್ನೂ ಕೆಲವು ವಿಹಾರಕ್ಕೆ ಹೋಗಿದ್ದಾರೆ ಎಂದು ಅವರು ಬಹಿರಂಗ ಪಡಿಸಿದ್ದಾರೆ .
ವರದಿಯ ಪ್ರಕಾರ ಸಾರಾ ಅಲಿ ಖಾನ್ ಸುಶಾಂತ್ ಸಿಂಗ್ ರಜಪೂತ್ ಜೊತೆಗೆ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ ಮತ್ತು ಸುಶಾಂತ್ ಮಾದಕವಸ್ತು ಸೇವಿಸುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ.
ಆದರೆ ತಾನು ಎಂದೂ ಡ್ರಗ್ಸ್ ಗಳನ್ನು ಸೇವಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.