ಚಂಡೀಗಢ: ಪ್ಯಾರಿಸ್ ಒಲಿಂಪಿಕ್ಸ್ ನ 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಮನು ಭಾಕರ್ ಜೊತೆಗೆ ಕಂಚು ಗೆದ್ದಿರುವ ಸರಬ್ಜೋತ್ ಸಿಂಗ್ (Sarabjot Singh) ಸರ್ಕಾರಿ ಕೆಲಸದ ಆಫರ್ ತಿರಸ್ಕರಿಸಿದ್ದಾರೆ.
ಕಂಚಿನ ಪದಕ ಗೆದ್ದು ಭಾರತಕ್ಕೆ ವಾಪಸ್ ಆದ ಸರಬ್ಜೋತ್ ಸಿಂಗ್ ಗೆ ಹರಿಯಾಣ ಸರ್ಕಾರ ಕೆಲಸದ ಆಫರ್ ನೀಡಿದೆ. ಆದರೆ, ಕ್ರೀಡಾಪಟು ಸರಬ್ಜೋತ್ ಸಿಂಕ್ ಮಾತ್ರ ಕೆಲಸವನ್ನು ತಿರಸ್ಕರಿಸಿದ್ದಾರೆ.
ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಇದು ಸರಿಯಾದ ಸಮಯವಲ್ಲ. ಸರ್ಕಾರಿ ಕೆಲಸ ಘೋಷಣೆ ಮಾಡಿರುವುದು ಖುಷಿ ತಂದಿದೆ. ಆದರೆ, ಇನ್ನೂ ನಾನು ಶೂಟಿಂಗ್ ನಲ್ಲಿ ನನ್ನ ಗುರಿ ಸಾಧಿಸಬೇಕು. ಇಂತಹ ಸಮಯದಲ್ಲಿ ಶೂಟಿಂಗ್ ನನ್ನ ಪ್ರಮುಖ ಆದ್ಯತೆ ಎಂದು ಸಿಂಗ್ ಹೇಳಿದ್ದಾರೆ.
ಕೆಲಸ ಚೆನ್ನಾಗಿದೆ. ಆದರೆ ನಾನು ಈಗ ಅದನ್ನು ತೆಗೆದುಕೊಳ್ಳುವುದಿಲ್ಲ. ನಾನು ಮೊದಲು ನನ್ನ ಶೂಟಿಂಗ್ ಮೇಲೆ ಗಮನ ಕೇಂದ್ರೀಕರಿಸಲು ಬಯಸುತ್ತೇನೆ. ನನ್ನ ನಿರ್ಧಾರಗಳಿಗೆ ವಿರುದ್ಧವಾಗಿ ಹೋಗಲು ನಾನು ಬಯಸುವುದಿಲ್ಲ. ಹೀಗಾಗಿ ನಾನು ಸದ್ಯಕ್ಕೆ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ನನ್ನ ಮುಖ್ಯ ಗುರಿಯನ್ನು ನಾನು ಇನ್ನೂ ಸಾಧಿಸಿಲ್ಲ. ನಾನು ನನ್ನ ಮುಖ್ಯ ಗುರಿಯನ್ನು 2028 ರಲ್ಲಿ ಪೂರ್ಣಗೊಳಿಸುತ್ತೇನೆ. ನಾನು 2028 ರಲ್ಲಿ ಚಿನ್ನಕ್ಕಾಗಿ ಶೂಟ್ ಮಾಡಲು ಬಯಸುತ್ತೇನೆ. ಆ ಸಾಧನೆ ಈಡೇರಿದ ಮೇಲೆ ಮುಂದೆ ನೋಡೋಣ ಎಂದು ಹೇಳಿದ್ದಾರೆ. ಎಂದು ತಿಳಿಸಿದ್ದಾರೆ