Saral Vaastu ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಹೋಟೆಲ್ ನಲ್ಲಿ ಹೋಮ
ಹುಬ್ಬಳ್ಳಿ : ಸರಣ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಉಣಕಲ್ ಕೆರೆ ಬಳಿಯ ದಿ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಪುರೋಹಿತರಿಂದ ಮಂತ್ರಘೋಷ ಮೊಳಗಿದೆ.
ಹೋಟಲ್ ಆಡಳಿತ ಮಂಡಳಿ ಗುರೂಜಿ ಹತ್ಯೆ ನಡೆದ ಸ್ಥಳದಲ್ಲೇ ಹೋಮ ಮಾಡಿಸಿದೆ.
ಗುರೂಜಿ ಕೊನೆಯುಸಿರೆಳೆದ ಸ್ಥಳದಲ್ಲೇ ಹೋಮ, ಹವನ ಮಾಡಲಾಗಿದೆ.

ಗುರೂಜಿ ಹತ್ಯೆಯಿಂದ ಹೋಟೆಲ್ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು.
ಅಲ್ಲದೇ ಹೋಟೆಲ್ ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಈ ಹಿನ್ನೆಲೆಯಲ್ಲಿ ಭಯ ದೂರಮಾಡಲು ಮತ್ತು ಹೋಟೆಲ್ ಶುದ್ಧಗೊಳಿಸಲು ಹೋಟೆಲ್ ಆಡಳಿತ ಮಂಡಳಿ ದೇವರ ಮೊರೆ ಹೋಗಿದೆ.
ಗುರೂಜಿ ಹತ್ಯೆ ನಡೆದ ಸ್ಥಳದಲ್ಲೇ ಹೋಮ ಹಾಕಿಸಿದ ಹೋಟೆಲ್ ಆಡಳಿತ ಮಂಡಳಿ ಜೊತೆಗೆ ಸಿಬ್ಬಂದಿ ವರ್ಗದ ಕುಟುಂಬದ ಸದಸ್ಯರು ಭಾಗಿಯಾಗಿದ್ರು.
ನಗರದ ಖ್ಯಾತ ಇಬ್ಬರು ಪುರೋಹಿತರಿಂದ ಹೋಮ ಹವನದ ನೇತೃತ್ವ ವಹಿಸಿದ್ದರು.
ಸುದರ್ಶನ ಹೋಮ ಮಾಡಿಸಿ ಹೋಟೆಲ್ ಗೆ ಅಂಟಿದ ಕಳಂಕ ದೂರಮಾಡುವ ಪ್ರಯತ್ನ ಮಾಡಿದ್ದಾರೆ.