“ಸರ್ವಸ್ಯ ನಾಟ್ಯಂ” ನಲ್ಲಿ ರಿಶಿಕುಮಾರ ಸ್ವಾಮಿ : ನೃತ್ಯಪ್ರಧಾನ ಈ ಚಿತ್ರ ಯುಗಾದಿ ವೇಳೆ ತೆರೆಗೆ

1 min read

“ಸರ್ವಸ್ಯ ನಾಟ್ಯಂ” ನಲ್ಲಿ ರಿಶಿಕುಮಾರ ಸ್ವಾಮಿ : ನೃತ್ಯಪ್ರಧಾನ ಈ ಚಿತ್ರ ಯುಗಾದಿ ವೇಳೆ ತೆರೆಗೆ.

ಬಿಗ್ ಬಾಸ್ ಮೂಲಕ ಅಪಾರ ಜನಮನ್ನಣೆ ಪಡೆದುಕೊಂಡಿರುವ ಶ್ರೀ ಯೋಗೇಶ್ವರ ರಿಶಿಕುಮಾರಸ್ವಾಮಿ(ಕಾಳಿ ಮಠ) ಮುಖ್ಯಪಾತ್ರದಲ್ಲಿ ನಟಿಸಿರುವ “ಸರ್ವಸ್ಯ ನಾಟ್ಯಂ” ಚಿತ್ರದ ಹಾಡುಗಳ ಬಿಡುಗಡೆ ಇತ್ತೀಚೆಗೆ ನೆರವೇರಿತು.ಕುಂಚಿಘಟ್ಟ ಮಾಹಾಸಂಸ್ಥಾನದ ಶ್ರೀಹನುಮಂತನಾಥ ಮಹಾಸ್ವಾಮಿಗಳು, ಕುಣಿಗಲ್ ನ ಹರೇಶಂಕರ ಮಹಾಸಂಸ್ಥಾನದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ವಿವಿಧ ಕ್ಷೇತ್ರದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರ ಉಪಸ್ಥಿತಿ ಯಲ್ಲಿ ಈ ಚಿತ್ರದ ಹಾಡುಗಳ ಲೋಕಾರ್ಪಣೆ ಸಿರಿ ಮ್ಯೂಸಿಕ್ ಮೂಲಕ ಆಯಿತು.

ನಾನು ನೃತ್ಯ ನಿರ್ದೇಶಕ. ಕರ್ನಾಟಕ ಚಲನಚಿತ್ರ ನೃತ್ಯ ನಿರ್ದೇಶಕರ ಸಂಘದ ಕಾರ್ಯದರ್ಶಿಯಾಗಿದ್ದೀನಿ. ನನಗೆ ಮೊದಲಿನಿಂದಲೂ ನೃತ್ಯದ ಕುರಿತು ಸಿನಿಮಾ ಮಾಡುವ ಹಂಬಲ. ಆ ಆಸೆಯನ್ನು ಸ್ನೇಹಿತರ ಬಳಿ ಹೇಳಿಕೊಳ್ಳುತ್ತಿದೆ. ನನ್ನ ನೃತ್ಯ ಶಾಲೆಗೆ ವಿದ್ಯಾರ್ಥಿಯಾಗಿ ಬಂದ ಮನೋಜ್ ಕುಮಾರ್ ನನ್ನ ಆಸೆ ತಿಳಿದು, ನಿರ್ಮಾಣಕ್ಕೆ ಮುಂದಾದರು. ಕೊರೋನ ಇಲ್ಲದಿದ್ದರೆ ಚಿತ್ರ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಈ ಚಿತ್ರ ಸಂಪೂರ್ಣವಾಗಲು ನಿರ್ಮಾಪಕರ ಹಾಗೂ ಚಿತ್ರತಂಡದ ಸಹಕಾರ ಅಪಾರ.
ಸ್ವದೇಶಿ ಹಾಗೂ ಪಾಶ್ಚಾತ್ಯ ನೃತ್ಯಗಳ ಪೈಪೋಟಿ ಮೇಲೆ ಈ ಚಿತ್ರದ ಕಥೆ ಸಾಗುತ್ತದೆ. ಅನಾಥ ಮಕ್ಕಳಿಗೆ ನೃತ್ಯ ಹೇಳಿಕೊಡುವ ಶಿಕ್ಷಕನ ಪಾತ್ರದಲ್ಲಿ ರಿಶಿಕುಮಾರಸ್ವಾಮಿ ಅಭಿನಯಿಸಿದ್ದಾರೆ.. ನೂರೈವತ್ತಕ್ಕು ಅಧಿಕ ಮಕ್ಕಳು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ರಿಯಾಲಿಟಿ ಶೋ ನಲ್ಲಿ ನಡೆಯುವ ವಾಸ್ತವಾಂಶಗಳು ನನ್ನ ಕಥೆಗೆ ಸ್ಪೂರ್ತಿ ಎನ್ನುವ ನಿರ್ದೇಶಕ ವಿಜಯನಗರ ಮಂಜು, ಯುಗಾದಿ ವೇಳೆಗೆ ಚಿತ್ರವನ್ನು ತೆರೆಗೆ ತರುತ್ತೇನೆ ಎಂದರು.

ಇಂದು ವಿಶ್ವಕಂಡ ಮಹಾ ಸಂತ ವಿವೇಕಾನಂದರ ಜಯಂತಿ. ಈ ಮಹಾ ಸಂತನ ಜಯಂತಿ ದಿವಸ ಇನೊಬ್ಬ ಸಂತನ ಅಭಿನಯದ ಸಿನಿಮಾವೊಂದರ ಹಾಡುಗಳ ಬಿಡುಗಡೆಯಾಗುತ್ತಿರುವುದು ಸಂತೋಷದ ವಿಚಾರ. ಪ್ರತಿಯೊಬ್ಬ ನೃತ್ಯ ನಿರ್ದೇಶಕ ಅಥವಾ ಶಿಕ್ಷಕನಿಗೆ ಆಗುವ ನೋವುಗಳು. ಅವರು ಒಂದು ಹಂತಕ್ಕೆ ಬರುವವರೆಗೂ ಎಲ್ಲರು ತುಳಿಯುವವರೆ. ಆ ತುಳಿತಕ್ಕೆ‌ ಸಿಕ್ಕಿ ನಲಗುವ ಪಾತ್ರ ನನ್ನದು. ನನ್ನೊಂದಿಗೆ ಅನಾಥ ಮಕ್ಕಳ ಪಾತ್ರದಲ್ಲಿ ಅಭಿನಯಿಸಿರುವ ಮಕ್ಕಳು ಅಭಿನಯದಲ್ಲಿ ರಾಕ್ಷಸರು. ಅಂತಹ ಅಮೋಘ ಅಭಿನಯ ಅವರದು. ಮಕ್ಕಳನ್ನು ಸುಸೂತ್ರವಾಗಿ ನಿಭಾಯಿಸಿದ ನಿರ್ದೇಶಕ ವಿಜಯನಗರ ‌ಮಂಜು ಅವರ ತಾಳ್ಮೆ ನಿಜಕ್ಕೂ ಶ್ಲಾಘನೀಯ ಎಂದರು ರಿಶಿಕುಮಾರ ಸ್ವಾಮಿ.

ನಿರ್ಮಾಣದ ಬಗ್ಗೆ ಮನೋಜ್ ವರ್ಮ, ಸಂಗೀತದ ಬಗ್ಗೆ ಎ.ಟಿ.ರವೀಶ್, ಗೀತರಚನೆಯ ಕುರಿತು ಲೋಕಿ ಮಾತನಾಡಿದರು. ಛಾಯಾಗ್ರಹಕ ಎಂ.ಬಿ.ಅಳಿಕಟ್ಟಿ ಹಾಗೂ ಸಂಕಲನಕಾರ ಸೌಂದರ್ ರಾಜ್ ಉಪಸ್ಥಿತರಿದ್ದರು.

ನೃತ್ಯ ನಿರ್ದೇಶಕ ಮುರಳಿ, ರಾಜಕಾರಣಿ ರವೀಂದ್ರ ಹಾಗೂ ಸಿರಿ ಮ್ಯೂಸಿಕ್ ಚಿಕ್ಕಣ್ಣ ‌ಸೇರಿದಂತೆ ಅನೇಕ ಗಣ್ಯರು ಆಡಿಯೋ ಬಿಡುಗಡೆ ಸಮಾರಂಭಕ್ಕೆ
ಆಗಮಿಸಿ ಶುಭ ಕೋರಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd