ಜೈಲಲ್ಲಿ ಕನ್ನಡ ಕಲಿತ ಚಿನ್ನಮ್ಮಗೆ ಭಾರಿ ನಿರಾಸೆ
ಬೆಂಗಳೂರು : ಸನ್ನಡತೆ ಹಾಗೂ 135 ದಿನಗಳ ರಜೆ ಕಳೆದು ತನ್ನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ತಮಿಳುನಾಡು ಮಾಜಿ ಸಿಎಂ ದಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಜೈಲಧಿಕಾರಿಗಳಿಗೆ ಮನವಿ ಪತ್ರ ಬರೆದಿದ್ದರು.
ಇದೀಗ ಈ ಅರ್ಜಿಯನ್ನು ಜೈಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ನಿಮ್ಮನ್ನು ಅವಧಿಗೂ ಯಾಕೆ ಬಿಡುಗಡೆ ಮಾಡಬೇಕು ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ನಟರಾಜನ್ ನಾಲ್ಕು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿದ್ದಾರೆ. ಅವರ ನಾಲ್ಕು ವರ್ಷದ ಜೈಲು ಶಿಕ್ಷೆ 2021 ಫೆ.15ಕ್ಕೆ ಮುಕ್ತಾಯವಾಗುತ್ತೆ.
ಜೈಲಲ್ಲಿ ಕನ್ನಡ ಕಲಿತ ಶಶಿಕಲಾ:
ನಾಲ್ಕು ವರ್ಷದ ಜೈಲುವಾಸದಲ್ಲಿ ಶಶಿಕಲಾ ತರಕಾರಿ ಬೆಳೆದಿದ್ದು, ಬೆಳೆದ ತರಕಾರಿಯನ್ನು ಜೈಲಿನಲ್ಲಿ ತಯಾರಾಗುವ ಅಡುಗೆಗೆ ಬಳಕೆ ಮಾಡಲಾಗಿದೆ
ನವೆಂಬರ್ ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಯಾವ್ದು ಗೊತ್ತಾ?
ಜೊತೆಗೆ ಜೈಲಿನಲ್ಲಿ ನಲಿಕಲಿ ಮೂಲಕ ಕನ್ನಡ ಕಲಿತಿದ್ದಾರೆ. ಇದಲ್ಲದೆ ಶಶಿಕಲಾ ಅವರು ಸಂಪೂರ್ಣವಾಗಿ ಕನ್ನಡ ಅಭ್ಯಾಸ ಮಾಡಿದ್ದಾರೆ.
ಕನ್ನಡ ಓದಲು ಹಾಗೂ ಬರೆಯಲು ಕಲಿತು ಕಲಿಕೆಯ ಕೋರ್ಸ್ ಮುಗಿಸಿದ್ದಾರೆ ಎಂದು ತಿಳಿದು ಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








